Neer Dose Karnataka
Take a fresh look at your lifestyle.

DK Shivakumar: ದಿಡೀರ್ ಎಂದು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಡಿಕೆಶಿ ನಿರ್ಧಾರ- ಕಾರಣಗಳ ಸಮೇತ ವಿವರಣೆ.

DK Shivakumar: ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ಅಸಮಾಧಾನ ಆಗಿದ್ದು, ಈ ಕಾರಣಕ್ಕೆ ಜುಲೈ 12ರಂದು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ಮಾಡಲು ಸಂದೇಶ. ಬೆಂಗಳೂರಿನ (Bangalore) ಫ್ರೀಡಂ ಪಾರ್ಕ್ ನಲ್ಲಿ ಮೌನ ಪ್ರತಿಭಟನೆ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಮಾಹಿತಿ ನೀಡಿದ್ದಾರೆ.

dk shivakumar announces protest against central govt
dk shivakumar announces protest against central govt

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಈ ವಿಚಾರದ ಬಗ್ಗೆ ಡಿಕೆ ಶಿವಕುಮಾರ್ (DK Shivakumar) ಅವರು ಮಾತನಾಡಿದ್ದಾರೆ, “ರಾಹುಲ್ ಗಾಂಧಿ ಅವರ ವಿಷಯದಲ್ಲಿ ಯಾವ ತೀರ್ಪು ಬಂದಿದೆ ಎನ್ನುವುದನ್ನು ನೀವೆಲ್ಲರೂ ನೋಡಿದ್ದೀರಿ..ರಾಹುಲ್ ಗಾಂಧಿ ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ದೇಶಲ್ಲಿರುವ ಎಲ್ಲಾ ವಿರೋಧ ಪಕ್ಷಗಳ ನಾಯಕರು ಕೂಡ ರಾಹುಲ್ ಗಾಂಧಿ ಅವರ ಪರವಾಗಿ ನಿಲ್ಲುತ್ತೇವೆ ಎಂದು ಸಪೋರ್ಟ್ ಮಾಡಬೇಕು. ಭಾರತ್ ಜೋಡೋ ಯಾತ್ರೆಯಲ್ಲಿ ಅವರಿಗೆ ಎಲ್ಲರ ಸಪೋರ್ಟ್ ಸಿಕ್ಕಿತು. ರಾಹುಲ್ ಗಾಂಧಿ ಅವರು ಹೋದ ಸಾಕಷ್ಟು ಕಡೆ, ಕಾಂಗ್ರೆಸ್ ಗೆದ್ದಿದೆ..” ಇದನ್ನು ಓದಿ..Karnataka News: ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಹಣ ನೀಡಲಿಲ್ಲ, ಅಷ್ಟೇ ಅಲ್ಲ, ಸರ್ಕಾರೀ ಮಕ್ಕಳಿಗೆ ಮತ್ತೊಂದು ಶಾಕ್- ಪೋಷಕರ ಜೋಬಿಗೆ ಕತ್ತರಿ.

ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಎಐಸಿಸಿ (AICC) ಅಧ್ಯಕ್ಷರಾಗಿದ್ದು, ಅವರು ನೀಡಿರುವ ಸೂಚನೆಯ ಅನುಸಾರ ಜುಲೈ 12ರಂದು ಕೇಂದ್ರ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಲಾಗುತ್ತದೆ, ಮೌನ ಸತ್ಯಾಗ್ರಹ ಮಾಡಲಾಗುತ್ತದೆ. ಕಾಂಗ್ರೆಸ್ (Congress) ಪಕ್ಷದ ಎಲ್ಲಾ ನಾಯಕರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಗ್ಗೆ 10ರಿಂದ ಸಂಜೆ 7ರವರೆಗು ಪ್ರತಿಭಟನೆ ನಡೆಯುತ್ತದೆ. ಸಿಎಂ ಅವರು ಮತ್ತು ನಾನು ಹಾಗೆಯೇ ಎಲ್ಲಾ ಮುಖಂಡರು ಭಾಗವಹಿಸುತ್ತಾರೆ..” ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್ (DK Shivakumar) .

ಮುಂದುವರೆದು ಮಾತನಾಡಿದ ಡಿಕೆಶಿ (DK Shivakumar) ಅವರು, “ರಾಹುಲ್ ಗಾಂಧಿ ಅವರ ರಾಜಕೀಯ ವೃತ್ತಿಯನ್ನು ಕೊನೆಗೊಳಿಸಬೇಕು ಎಂದು ಹೀಗೆಲ್ಲಾ ಮಾಡಲಾಗುತ್ತಿದೆ. ರಾಹುಲ್ ಗಾಂಧಿ 7 ಲಕ್ಷ ಮತ ಪಡೆದು ಗೆದ್ದಿದ್ದಾರೆ, ಅಂಥ ವ್ಯಕ್ತಿಯನ್ನು ಇದ್ದಕ್ಕಿದ್ದ ಹಾಗೆ ಲೋಕಸಭಾ ಸದಸ್ಯತ್ವ ಸ್ಥಾನದಿಂದ ಹೊರತೆಗೆಯಲಾಗಿದೆ. ಆದರೆ ಭಾರತ್ ಜೋಡೋ ಯಾತ್ರೆಯಿಂದ ಅವರಿಗೆ ಜನರ ಪ್ರೀತಿ ಮತ್ತು ವಿಶ್ವಾಸ ಸಿಕ್ಕಿದೆ..ಅವರಿಂದ ನಮಗೂ ಶಕ್ತಿ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ನಮ್ಮ ದೇಶದ ಪೂರ್ವಭಾಗದಿಂದ ಪಶ್ಚಿಮ ಭಾಗಕ್ಕೆ ಯಾತ್ರೆ ನಡೆಸುತ್ತಾರೆ.. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

ಈ ಯಾತ್ರೆಗೆ ಹಿನ್ನಡೆ ಆಗಲಿ ಎಂದು ಹೀಗೆಲ್ಲಾ ಮಾಡಲಾಗುತ್ತಿದೆ. ಭಾರತ ದೇಶದಲ್ಲಿ ಜುಲೈ 12ರಂದು ಮೌನ ಸತ್ಯಾಗ್ರಹ ನಡೆಯುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿರುವ ಹಾಗೆ, ನಾವೆಲ್ಲರೂ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡುತ್ತೇವೆ.. ಆ ದಿನ ಅಧಿವೇಶನ ಇದೆ, ಆದರೆ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ಕೊಟ್ಟಿದ್ದೇವೆ, ನಾವು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ..ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಪ್ರತಿಭಟನೆ ಬಗ್ಗೆ ತಿಳಿಸಿದ್ದಾರೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

Comments are closed.