News: ನಂದಿನಿ ತುಪ್ಪ ತಿರುಪತಿ ಯಾಕೆ ಕೊಡಲ್ಲ ಎಂದರೆ ಹೊಸ ಕಾರಣ ಕೊಟ್ಟ ಕಾಂಗ್ರೆಸ್, ಉತ್ತರ ಕೇಳಿ ಶಾಕ್ ಆದ ಕನ್ನಡಿಗರು.
News: ತಿರುಪತಿಯಲ್ಲಿ ಲಾಡು (Tirupati Ladu) ತಯಾರಿಸುವುದಕ್ಕೆ ಕರ್ನಾಟಕ ಕೆಎಂಎಫ್ (KMF) ನ ನಂದಿನಿ (Nandini) ತುಪ್ಪ ಕೊಡುವ್ಯದನ್ನು ಬಂದ್ ಮಾಡಲಾಗಿದೆ. ಈ ವಿಚಾರ ಈಗ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಪಕ್ಷಗಳ ನಡುವೆ ಟ್ವಿಟರ್ ವಾರ್ ನಡೆದಿದ್ದು, ಕಾಂಗ್ರೆಸ್ ಕೊಟ್ಟ ಉತ್ತರ ಕೇಳಿ ಕನ್ನಡ ಜನತೆ ಶಾಕ್ ಗೆ ಒಳಗಾಗಿದ್ದಾರೆ..
“ನಮ್ಮ ಹೆಮ್ಮೆಯ “ನಂದಿನಿ“ಗೆ ಮಾರುಕಟ್ಟೆಯಲ್ಲಿತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ, ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ, ಬೆಲೆಯಲ್ಲೂ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗುವುದಿಲ್ಲ..” ಎಂದು ಟ್ವೀಟ್ ಮಾಡಿದೆ ಕಾಂಗ್ರೆಸ್ (News). ಇದನ್ನು ಓದಿ..Rules Change: ಇಂದಿನಿಂದ ಫುಲ್ ನಿಯಮ ಬದಲು- ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲ ಅಂದ್ರೆ ದರ ಏರಿಕೆ ಜೊತೆ ಜೇಬು ಕೂಡ ಕಟ್ ಆಗುತ್ತೆ.
ಈ ಥರ ಟ್ವೀಟ್ ಮಾಡಿರುವ ಕಾಂಗ್ರೆಸ್, ನಂದಿನಿ ತುಪ್ಪ ಪೂರೈಕೆ ನಿಂತಿರುವ ಬಗ್ಗೆ ಸಮರ್ಥನೆ ಕೊಟ್ಟಿದೆ. ಆದರೆ ಈ ಬಗ್ಗೆ ಬಿಜೆಪಿ ಪಕ್ಷವು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಟ್ವೀಟ್ ಮೂಲಕ ಅವರು ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. “ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ (News).
ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ. ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ..” ಎಂದು ಬಿಜೆಪಿ ಟ್ವೀಟ್ ಮಾಡಿದೆ (News). ಇದನ್ನು ಓದಿ..Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?
ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯನವರು ಈಗ ಮತ್ತೆ ರುಜುವಾತು ಮಾಡಿದ್ದಾರೆ..” ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ (News). ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ
ನಮ್ಮ ಹೆಮ್ಮೆಯ “ನಂದಿನಿ“ಗೆ ಮಾರುಕಟ್ಟೆಯಲ್ಲಿತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ,
ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ, ಬೆಲೆಯಲ್ಲೂ ರಾಜಿಯಾಗುವುದಿಲ್ಲ.
ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ.
ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ…
— Karnataka Congress (@INCKarnataka) July 31, 2023