PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.
PF Balance Check: ಈಗಿನ ಕಾಲದಲ್ಲಿ ಹಣ ಉಳಿತಾಯ ಮಾಡುವುದು ಬಹಳ ಮುಖ್ಯವಾಗಿ ಮಾಡಬೇಕಾದ ಕೆಲಸ. ನಮ್ಮ ಮುಂದಿನ ಜೀವನ ಚೆನ್ನಾಗಿರಬೇಕು ಎಂದರೆ ಇಂದು ನಾವು ಹಣ ಉಳಿತಾಯ ಮಾಡುವುದು ಅವಶ್ಯವಾಗಿದೆ. ಈ ರೀತಿ ಹಣ ಉಳಿತಾಯ ಮಾಡಲು Employment Provident Fund ಉತ್ತಮವಾದ ಆಯ್ಕೆ ಆಗಿದೆ. ಇಲ್ಲಿ ನಿಮ್ಮ ಹಣ ಎಷ್ಟು ಉಳಿತಾಯ ಆಗಿದೆ, EPF ನಲ್ಲಿ ಎಷ್ಟು ಬ್ಯಾಲೆನ್ಸ್ (PF Balance Check) ಇದೆ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ. ಮೊದಲೆಲ್ಲಾ ವಾರ್ಷಿಕವಾದ ಉನ್ನತ ಅಧಿಕಾರಿಗಳು ಕೊಡುವ ರಿಪೋರ್ಟ್ ಗಾಗಿ ಕಾಯಬೇಕಿತ್ತು.
ಆದರೆ ಈಗ EPF ಬ್ಯಾಲೆನ್ಸ್ ತಿಳಿಯಲು ಆನ್ಲೈನ್ ಮತ್ತು ಆಫ್ಲೈನ್ ಕೆಲವು ವಿಧಾನಗಳಿವೆ, ಅವುಗಳ ಮೂಲಕ ನೀವು EPF ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಮಿಸ್ಡ್ ಕಾಲ್ :- ನಿಮ್ಮ ಮೊಬೈಲ್ ನಂಬರ್ ಅನ್ನು UAN (Universal Account Number) ಗೆ ರಿಜಿಸ್ಟರ್ ಮಾಡಿ, ಕೆವೈಸಿ ಕೂಡ ಮಾಡಿಸಿದ್ದರೆ, ನಿಮ್ಮ EPF ಅಕೌಂಟ್ ಬ್ಯಾಲೆನ್ಸ್ (PF Balance Check) ಚೆಕ್ ಮಾಡುವುದು ಸುಲಭ,
011-22901406 ಈ ನಂಬರ್ ಗೆ ಕಾಲ್ ಮಾಡಿದರೆ, 2 ರಿಂಗ್ ಆದ ತಕ್ಷಣ ಅದೇ ಕಟ್ ಆಗುತ್ತದೆ. ಬಳಿಕ ನಿಮ್ಮ ಮೊಬೈಲ್ ಗೆ SMS ಮೂಲಕ EPF ಬ್ಯಾಲೆನ್ಸ್ ಮಾಹಿತಿ ಬರುತ್ತದೆ. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
SMS :- ನೀವು ನಿಮ್ಮ ಮೊಬೈಲ್ ನಂಬರ್ ಅನ್ನು UAN ಗೆ ರಿಜಿಸ್ಟರ್ ಮಾಡಿಸಿದ್ದರೆ, SMS ಮೂಲಕ ಕೂಡ EPF ಬ್ಯಾಲೆನ್ಸ್ ಪಡೆಯಬಹುದು. ಇಲ್ಲಿ UAN ENG ಎಂದು ಟೈಪ್ ಮಾಡಿ, UAN ENG ಎನ್ನುವುದು ನೀವು ಆಯ್ಕೆ ಮಾಡುವ ಭಾಷೆಯ ಮೊದಲ ಮೂರು ಅಕ್ಷರ ಆಗಿರುತ್ತವೆ. ಈ ಮೆಸೇಜ್ ಅನ್ನು 7738299899 ನಂಬರ್ ಗೆ ಕಳಿಸಿ. ನಿಮ್ಮ EPF ಬ್ಯಾಲೆನ್ಸ್ (PF Balance Check) SMS ಮೂಲಕ ಬರುತ್ತದೆ..
EPFO ಆನ್ಲೈನ್ ಪೋರ್ಟಲ್ :- ಇದರ್ಸ್ ಮೂಲಕ ಕೂಡ ನೀವು ನಿಮ್ಮ EPF ಅಕೌಂಟ್ ಪಾಸ್ ಬುಕ್ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು. EPFO ವೆಬ್ಸೈಟ್ ಗೆ ಹೋಗಿ, Our Services ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ serices ಆಯ್ಕೆಯನ್ನು ಕ್ಲಿಕ್ ಮಾಡಿ..ಈಗ Member Passbook ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ UAN ನಂಬರ್ ಮತ್ತು ಪಾಸ್ ವರ್ಡ್ ಹಾಕಿ. ಆಕ್ಟಿವೇಟ್ ಆದ ನಂತರ ನಿಮ್ಮ ಪಾಸ್ ಬುಕ್ ಅನ್ನು (PF Balance Check) ನೋಡಬಹುದು. ಇದನ್ನು ಓದಿ..Tirupati Tips: ತಿರುಪತಿಗೆ ಹೋದಾಗ ಅಪ್ಪಿ ತಪ್ಪಿ ಈ ಚಿಕ್ಕ ತಪ್ಪು ಮಾಡಬೇಡಿ- ಹೋಗಿ ದರ್ಶನ ಪಡೆದ ಫಲ ಸಿಗಲ್ಲ, ಪುಣ್ಯ ಅಲ್ಲೇ ಖಾಲಿ.
UMANG ಮೊಬೈಲ್ ಅಪ್ಲಿಕೇಶನ್ :- PF ಬ್ಯಾಲೆನ್ಸ್ ಚೆಕ್ ಮಾಡುವುದಕ್ಕಾಗಿ ಈಗ ಸರ್ಕಾರವೇ UMANG ಎನ್ನುವ ಅಪ್ಲಿಕೇಶನ್ ಲಾಂಚ್ ಮಾಡಿದೆ.. ಪಾಸ್ ಬುಕ್ ಜೊತೆಗೆ ಈ ಅಪ್ಲಿಕೇಶನ್ ನಲ್ಲಿ ಬೇರೆ ಮಾಹಿತಿಗಳು ಕೂಡ ಸಿಗುತ್ತದೆ. ಈ ಆಪ್ ಗೆ ಲಾಗಿನ್ ಆಗಲು, OTP ನಮೂದಿಸಬೇಕು (PF Balance Check). ಇದನ್ನು ಓದಿ..RE Hunter 350: ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿರುವ ರಾಯಲ್ ಎನ್ ಫೀಲ್ಡ್- ಇದರ ವಿಶೇಷತೆ, ಎಷ್ಟು ಲಕ್ಷ ಮಾರಾಟವಾಗಿದೆ ಎಂಬುದರ ಡೀಟೇಲ್ಸ್.
Comments are closed.