Nisha Narasappa: ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ರವರ ವಿರುದ್ಧ ಜೈಲಿನಿಂದ ಹೊರಬಂದ ಕೂಡಲೇ ಹೊಸ ಆರೋಪ ಮಾಡಿದ ನಿಶಾ ನರಸಪ್ಪ
Nisha Narasappa: ಈಗ ಕನ್ನಡ ಕಿರುತೆರೆಯಲ್ಲಿ ನಟ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಗೆ ಭಾರಿ ಬೇಡಿಕೆ ಇದೆ. ಪುಟ್ಟ ಪೋರಿ ವಂಶಿಕಾ ಎಲ್ಲರ ಮೆಚ್ಚಿನ ಮಗು ಎಂದರೆ ತಪ್ಪಲ್ಲ. ಇತ್ತೀಚೆಗೆ ವಂಶಿಕಾ ಹೆಸರಿನಲ್ಲಿ ಮೋಸ ಆಗಿದೆ ಎನ್ನುವ ಪ್ರಕರಣ ಭಾರಿ ಸದ್ದು ಮಾಡಿತ್ತು. ವಂಶಿಕಾ ಹೆಸರಿನಲ್ಲಿ ನಿಷಾ ನರಸಪ್ಪ (Nisha Narasappa) ಎನ್ನುವ ಹುಡುಗಿ ಮೋಸ ಮಾಡಿದ್ದಾರೆ ಎಂದು ವಂಶಿಕಾ ತಾಯಿ ಯಶಸ್ವಿನಿ ಆನಂದ್ ಪೊಲೀಸರಲ್ಲಿ ದೂರು ನೀಡಿದ್ದರು.
ದೂರಿನ ಅನುಸಾರ ನಿಷಾ ನರಸಪ್ಪ ಜೈಲು ಪಾಲಾಗಿದ್ದರು. ಈಗ ನಿಷಾ ನರಸಪ್ಪ (Nisha Narasappa) ಅವರು ಜೈಲಿನಿಂದ ಹೊರಬಂದಿದ್ದು, ತಮ್ಮ ಮನೆಯಲ್ಲಿ ಪ್ರೆಸ್ ಮೀಟ್ ನಡೆಸಿದ್ದಾರೆ. ಈ ಪ್ರೆಸ್ ನಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಯಶಸ್ವಿನಿ ಅವರ ಬಗ್ಗೆ ಇನ್ನಷ್ಟು ಆರೋಪಗಳನ್ನು ಮಾಡಿದ್ದಾರೆ. ನಿಷಾ (Nisha Narasappa) ಅವರು ಹೇಳಿರುವುದು ಹೀಗೆ, “NN ಪ್ರೊಡಕ್ಷನ್ ಕಂಪನಿಯಲ್ಲಿ ನಾನು 7 ವರ್ಷದಿಂದ ಕೆಲಸ ಮಾಡಿದ್ದೀನಿ, ಬಹಳಷ್ಟು ಇವೆಂಟ್ ಗಳನ್ನು ನಡೆಸಿದ್ದೀನಿ… ಇದನ್ನು ಓದಿ..Puneeth rajkumar: ತಮಿಳುನಾಡಿನಲ್ಲಿ ಕೂಡ ಪುನೀತ್ ರವರನ್ನು ಏನೆಂದು ಕರೆಯುತ್ತಾರೆ ಗೊತ್ತೇ? ಶಿವಣ್ಣ ಬಿಚ್ಚಿಟ್ಟ ಅಸಲಿ ಮಾಹಿತಿಯ ಸಂಪೂರ್ಣ ಡೀಟೇಲ್ಸ್.
ನನ್ನ ಕಂಪನಿ ಬಗ್ಗೆ ಒಂದು ಕಂಪ್ಲೇಂಟ್, ಬ್ಲ್ಯಾಕ್ ಮಾರ್ಕ್ ಇರಲಿಲ್ಲ. ಹರ್ಷಿತಾ ಎನ್ನುವ ಹುಡುಗಿಯ ಫ್ಯಾಮಿಲಿ ನನಗೆ ಕ್ಲೋಸ್ ಆಗಿದ್ದರಿಂದ ನಾನು ಅವಳನ್ನು ಕೆಲಸಕ್ಕೆ ಸೇರಿಸಿಕೊಂಡೇ. ಒಂದಷ್ಟು ದಿನ ಕೆಲಸ ಮಾಡಿದರು, ಅವರ ಹತ್ತಿರ ನನ್ನ ಬ್ಯಾಂಕ್ ಡೀಟೇಲ್ಸ್ ಇತ್ತು. ನನ್ನ ಹತ್ತಿರ ಆಕೆ ಕಂಪನಿಯ ಶೇರ್ ಕೇಳಿದರು, ನಾನು ಆ ಮಾತಿಗೆ ಒಪ್ಪಿಕೊಳ್ಳಲಿಲ್ಲ. ಹೀಗಾದ ನಂತರ ಅವರ ಐಫೋನ್ ನಲ್ಲಿ ನನ್ನ ಇನ್ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿಕೊಂಡಿದ್ರು, ನಾನು ಅದರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೆಲಸ ಬಿಟ್ಟರು.
ಆಕೆ ಕೆಲಸ ಬಿಟ್ಟಮೇಲೆ ನನಗೆ ತೊಂದರೆ ಆಗೋದಕ್ಕೆ ಶುರುವಾಯ್ತು, ಕೆಲವು ಕ್ಲೈಂಟ್ಸ್ ಮನೆ ಹತ್ತಿರ ಬರೋದಕ್ಕೆ ಶುರು ಮಾಡಿದ್ರು, ಅವರನ್ನೆಲ್ಲ ಕಳಿಸುತ್ತಿದ್ದದ್ದು ಹರ್ಷಿತಾನೆ. ರೀತು ಅನ್ನುವ ವ್ಯಕ್ತಿ ಗಲಾಟೆ ಮಾಡಿ ವಿಡಿಯೋ ಮಾಡಿದ್ರು, ಆಗ ಅವರ ಬಾಯ್ ಫ್ರೆಂಡ್ ಕೂಡ ಗಲಾಟೆ ಮಾಡಿದ್ರು, ಆ ಸಮಯದಲ್ಲಿ ಅವರು ಬಳಸಿಕೊಂಡಿದ್ದಾರೆ. ಯಶಸ್ವಿನಿ ಅವರು ಆಗ ಪೊಲೀಸ್ ಸ್ಟೇಶನ್ ಗೆ ಬಂದು, ಜೋರಾಗಿ ಮಾತಾಡಿದ್ರು, ಕಿರುಚಾಡಿದ್ರು ಕೂಗಾಡಿದ್ರು, ಹಣವನ್ನು ರೀಫನ್ಡ್ ಕೊಡ್ತೀನಿ ಅಂತ ಅಂದ್ರು. ಅವರು ಏನೇನೋ ಹೇಳೋದ್ರು.. ಇದನ್ನು ಓದಿ..Chaya Singh: ಧಾರವಾಹಿ ಲೋಕದಲ್ಲಿ ಬಾರಿ ಸದ್ದು ಮಾಡುತ್ತಿರುವ ಅಮೃತಧಾರೆ ಛಾಯಾ ರವರ ನಿಜವಾದ ವಯಸ್ಸು, ಸಂಪೂರ್ಣ ಡೀಟೇಲ್ಸ್.
6 ತಿಂಗಳು ಕೂತು ಪ್ಲಾನ್ ಮಾಡಿ ಇದನ್ನಲ್ಲ ಮಾಡಿದ್ದಾರೆ. ನನ್ನ ಮೇಲೆ ಮಾಡಿರುವ ಮೋಸ ಇದು, ನನ್ನನ್ನು ಪರ್ಸನಲ್ ಆಫೀ ಟಾರ್ಗೆಟ್ ಮಾಡಿಕೊಂಡವರಿಗೆ ಯಶಸ್ವಿನಿ ಹೆಲ್ಪ್ ಮಾಡಿದ್ದಾರೆ. ಒಂದು ವರ್ಷದಿಂದ ಯಶಸ್ವಿನಿ ಅವರ ಪರಿಚಯವಿದೆ. ಪ್ರೊಮೋಷನ್ ಗಾಗಿ ಬರ್ತಾ ಇದ್ರು. ಸ್ವಲ್ಪ ಹಣವನ್ನ ಅವರಿಗೆ ಕೊಡಬೇಕಿತ್ತು, ಅದಕ್ಕೆ ಫೋಟೋ ಸಾಕ್ಷಿ ಇದೆ. ಆದರೆ ಅವರಿಗೆ ನನ್ನ ಪರಿಚಯ ಇಲ್ಲ ಎನ್ನುವ ಹಾಗೆ ನಡೆದುಕೊಂಡರು. ಯಶಸ್ವಿನಿ ಅವರು ಯಾವುದೇ ಇವೆಂಟ್ ಗೆ ಪುಕ್ಸಟ್ಟೆ ಬರಲ್ಲ, ಹಣ ತೆಗೆದುಕೊಂಡೆ ಬರೋದು. ನಾನು ಇದನ್ನೆಲ್ಲ ಹೊರಗೆ ಹೇಳಬಾರದು, ನನ್ನ ಪ್ರೊಡಕ್ಷನ್ಸ್ ಕಂಪನಿ 7 ವರ್ಷದಿಂದ ಇದೆ, ವಂಶಿಕಾಗೆ ಈಗ 5 ವರ್ಷ. ನಾನು ಇವರ ಮಗಳಿಂದ ಬದುಕುತ್ತಿಲ್ಲ. ಯಾವುದೇ ಚಾನೆಲ್ ಗೆ ಹೋದ್ರು ಕೂಡ ಅವರು ಹಣ ತಗೊಂಡೆ ಹೋಗೋದು..” ಎಂದು ಹೇಳಿದ್ದಾರೆ ನಿಷಾ ನರಸಪ್ಪ (Nisha Narasappa). ಇದನ್ನು ಓದಿ..IPhone 15: ಬಿಡುಗಡೆಯಾಗುತ್ತಿದೆ ಹೊಸ ಐಫೋನ್-15 – ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.