Puneeth rajkumar: ತಮಿಳುನಾಡಿನಲ್ಲಿ ಕೂಡ ಪುನೀತ್ ರವರನ್ನು ಏನೆಂದು ಕರೆಯುತ್ತಾರೆ ಗೊತ್ತೇ? ಶಿವಣ್ಣ ಬಿಚ್ಚಿಟ್ಟ ಅಸಲಿ ಮಾಹಿತಿಯ ಸಂಪೂರ್ಣ ಡೀಟೇಲ್ಸ್.
Puneeth Rajkumar: ಕನ್ನಡ ಸೆಂಚುರಿ ಸ್ಟಾರ್ ಶಿವಣ್ಣ (Shivarajkumar) ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ತಮಿಳಿನಲ್ಲಿ ಎರಡು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ ಒಂದು ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಜೈಲರ್ ಸಿನಿಮಾ. ಮೊದಲ ಸರಿ ಅಂತ ರಜನಿಕಾಂತ್ ಅವರೊಡನೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ ಶಿವಣ್ಣ, ಈ ಸಿನಿಮಾ ಬಿಡುಗಡೆ ಆಗೋದಕ್ಕೆ ಸಿದ್ಧವಾಗಿದೆ.
ಇನ್ನು ನಟ ಧನುಷ್ (Dhanush) ಅವರ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ. ಈ ಸಿನಿಮಾ ಮೇಲೆ ಕೂಡ ಭಾರಿ ನಿರೀಕ್ಷೆ ಇದೆ. ಇತ್ತೀಚೆಗೆ ಜೈಲರ್ ಸಿನಿಮಾದ ಆಡಿಯೋ ಲಾಂಚ್ ಚೆನ್ನೈನಲ್ಲಿ ನಡೆಯಿತು. ಜೈಲರ್ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ರಜನಿಕಾಂತ್, ಶಿವಣ್ಣ ಸೇರಿದಂತೆ ಇಡೀ ಚಿತ್ರತಂಡ ಸೇರಿತ್ತು. ಶಿವಣ್ಣ ತಮ್ಮ ಫ್ಯಾಮಿಲಿ ಜೊತೆಗೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನು ಓದಿ..Actress Ashwini: ಜೀವನದಲ್ಲಿ ಹೊಸ ಹೆಜ್ಜೆ ಹಾಕುತ್ತಿರುವ ಗಟ್ಟಿಮೇಳ ಅಶ್ವಿನಿ- ಅಭಿಮಾನಿಗಳಿಗೆ ಮಾತ್ರ ಬೇಸರ.
ಆಡಿಯೋ ಲಾಂಚ್ ನಲ್ಲಿ ವೇದಿಕೆ ಮೇಲೆ ಬಂದ ಶಿವಣ್ಣ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಶಿವಣ್ಣ ಅವರು ಹುಟ್ಟಿಬೆಳೆದಿದ್ದು ಚೆನ್ನೈನಲ್ಲಿ ಹಾಗಾಗಿ ಶಿವಣ್ಣ ಬಹಳ ಚೆನ್ನಾಗಿ ತಮಿಳಿನಲ್ಲಿ ಮಾತನಾಡುತ್ತಾರೆ. ಇನ್ನು ಜೈಲರ್ ಸಿನಿಮಾ ಕುರಿತಾಗಿ ತಮಿಳು ಯೂಟ್ಯೂಬ್ ಚಾನೆಲ್ ಗೆ ಇಂಟರ್ವ್ಯೂ ನೀಡಿರುವ ಶಿವಣ್ಣ, ಒಂದಷ್ಟು ವಿಷಯಗಳನ್ನು ಶೇರ್ ಮಾಡಿದ್ದಾರೆ. ಅಪ್ಪು ಅವರ ಬಗ್ಗೆ ಕೂಡ ಮಾತನಾಡಿದ್ದಾರೆ. ತಮಿಳುನಾಡಿನಲ್ಲಿ ಜನರು ಅಪ್ಪು ಅವರ ಬಗ್ಗೆ ಏನನ್ನುತ್ತಿದ್ದರು ಎನ್ನುವುದನ್ನು ಹೇಳಿದ್ದಾರೆ.
“ಕೃಷ್ಣಗಿರಿಯಲ್ಲಿರುವ ಮಲ್ಲಿಗೆ ತೋಟದಲ್ಲಿ ವೇದ ಸಿನಿಮಾದ ಶೂಟಿಂಗ್ ನಡೆಯಿತು. ಸುಮಾರು 2 ದಿನಗಳ ಕಾಲ ಎಲ್ಲಾರು ಅಲ್ಲೇ ಉಳಿದುಕೊಂಡಿದ್ದೆವು. ಅಲ್ಲಿನ ಜನರು ನಮಗೆಲ್ಲಾ ತುಂಬಾ ಪ್ರೀತಿ ಕೊಟ್ರು, ಜನರು ನನ್ನನ್ನು ನೋಡಿ, ಇವರು ಪುನೀತ್ ಅವರ ಅಣ್ಣ, ಪುನೀತ್ (Puneeth Rajkumar) ಅವರ ಅಣ್ಣ ಅಂತ ಹೇಳ್ತಿದ್ರು. ಜನ ಹಾಗೆ ಹೇಳ್ತಾ ಇದ್ದಿದ್ದು ನನ್ನ ಮನಸ್ಸಿಗೆ ಮುಟ್ಟಿತು. ನನ್ನ ತಮ್ಮ ಅದೆಷ್ಟು ಜನರ ಮನಸ್ಸಿಗೆ ಹತ್ತಿರ ಆಗಿದ್ದಾನೆ ಅಂತ ಅನ್ನಿಸಿತು.. ಇದನ್ನು ಓದಿ..Prabhas: ಸುಖ ಸುಮ್ಮನೆ ಪ್ರಶಾಂತ್ ನೀಲ್ ರವರ ಸಲಾರ್ ಸಿನೆಮಾವನ್ನು ಕೆಣಕಿದ ಕಾಶ್ಮೀರಿ ಫೈಲ್ಸ್ ನಿರ್ದೇಶಕ- ಪ್ರಭಾಸ್ ಗೆ ಕೂಡ ಶಾಕ್.
ಅಂಥ ತಮ್ಮನ (Puneeth Rajkumar) ಅಣ್ಣನಾಗಿ ಇರೋದು ನನಗೆ ಹೆಮ್ಮೆ ಆಗ್ತಿದೆ. ಅಷ್ಟು ಜನರ ಪ್ರೀತಿಯನ್ನ ಅವನು ಗಳಿಸಿದ್ದಾನೆ. ಆ ಥರ ಅವನು (Puneeth Rajkumar) ಗುರುತಿಸಿಕೊಂಡಿರೋದು ಸಂತೋಷ ಆಗುತ್ತೆ. ಶಿವ ರಾಜ್ ಕುಮಾರ್ ಅಂತ ಗುರುತಿಸಿಕೊಳ್ಳುವುದಕ್ಕಿಂತ ಪುನೀತ್ (Puneeth Rajkumar) ಅಣ್ಣ ಅಂತ ಜನ ಕರೆಯೋದು ಹೆಮ್ಮೆ ಅನ್ನಿಸುತ್ತೆ. ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಗಾಗಿ ಕುಟ್ರಾಲಂ ಗೆ ಹೋಗಿದ್ವಿ, ಅಲ್ಲಿನ ಜನ ಕೂಡ ಹಾಗೆ ಪೀತಿ ಕೊಟ್ರು. ಇದೆಲ್ಲಾ ತುಂಬಾ ಖುಷಿ ಕೊಡುತ್ತೆ..” ಎಂದಿದ್ದಾರೆ ಶಿವಣ್ಣ. ಇದನ್ನು ಓದಿ..IPhone 15: ಬಿಡುಗಡೆಯಾಗುತ್ತಿದೆ ಹೊಸ ಐಫೋನ್-15 – ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.