TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.
TATA Sales: ಟಾಟಾ ಸಂಸ್ಥೆ ನಮ್ಮ ದೇಶದ ಖ್ಯಾತ ಮೋಟರ್ ಸಂಸ್ಥೆಗಳಲ್ಲಿ ಒಂದು, 2023ರ ಜುಲೈ ತಿಂಗಳ ಟಾಟಾ ಸೇಲ್ಸ್ (TATA Sales) ರಿಪೋರ್ಟ್ ಬಿಡುಗಡೆ ಆಗಿದ್ದು, ಜುಲೈ ನಲ್ಲಿ ಕಮರ್ಷಿಯಲ್ ವಾಹನಗಳು ಮತ್ತು ಪ್ರಯಾಣಿಕರ ವಾಹನಗಳ ಸೇಲ್ಸ್ ಸ್ವಲ್ಪ ಹಿಂದೆ ಸರಿದಿದ್ದರು ಕೂಡ ಎಲೆಕ್ಟ್ರಿಕ್ ವಾಹನಗಳ ಸೇಲ್ಸ್ ನಲ್ಲಿ ಟಾಟಾ ಸಂಸ್ಥೆ ಭರ್ಜರಿಯಾಗಿ ಮುಂದಕ್ಕೆ ಸಾಗಿದೆ. ಟಾಟಾ ಕಂಪನಿಯ ಸೇಲ್ಸ್ ಬಗ್ಗೆ ಪೂರ್ತಿಯಾಗಿ ನೋಡುವುದಾದರೆ, ಒಟ್ಟು ಮಾರಾಟ ಆಗಿರುವ ಪ್ಯಾಸೆಂಜರ್ ಮತ್ತು ಕಮರ್ಶಿಯಲ್ ವಾಹನಗಳು 80,633 ಯೂನಿಟ್ಸ್ ಆಗಿದೆ.
2022ರಲ್ಲಿ 81,790 ಯೂನಿಟ್ಸ್ ಆಗಿದೆ., ಈ ವರ್ಷ 1.4% ಹಿಂದಿದೆ. ನಮ್ಮ ದೇಶದಲ್ಲಿ 78.844 ಯೂನಿಟ್ಸ್ ಸೇಲ್ ಆಗಿದೆ. 2022 ಜುಲೈ ನಲ್ಲಿ 78,978 ಯೂನಿಟ್ಸ್ ಸೇಲ್ ಆಗಿತ್ತು. ಇದರಲ್ಲಿ ಕೂಡ ಸ್ವಲ್ಪ ಹಿಂದೆ ಆಗಿದೆ. ಇನ್ನು ಪ್ಯಾಸೆಂಜರ್ ವೆಹಿಕಲ್ ಗಳ ಬಗ್ಗೆ ಹೇಳುವುದಾದರೆ, ಜುಲೈ ನಲ್ಲಿ 47,689 ಯೂನಿಟ್ಸ್ ಸೇಲ್ ಆಗಿದ್ದು, 2022ರಲ್ಲಿ 46,636 ಯುನಿಟ್ಸ್ ಸೇಲ್ ಆಗಿತ್ತು. ಕಮರ್ಶಿಯಲ್ ವೆಹಿಕಲ್ ಗಳು ಒಟ್ಟಾರೆಯಾಗಿ 32,944 ಯೂನಿಟ್ಸ್ ಸೇಲ್ ಆಗಿದ್ದು, 2022ರಲ್ಲಿ 34,154 ಯೂನಿಟ್ಸ್ ಸೇಲ್ ಆಗಿದೆ. ಇದರಲ್ಲಿ 4% ಲಾಸ್ ಆಗಿದೆ (TATA Sales). ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ
ನಮ್ಮ ದೇಶದಲ್ಲಿ ಜುಲೈ ನಲ್ಲಿ 31,216 ಯುನಿಯ್ಸ್ ಸೇಲ್ ಆಗಿತ್ತು, 2022ರಲ್ಲಿ 31,473 ಯೂನಿಟ್ಸ್ ಸೇಲ್ ಆಗಿತ್ತು. ಇದು ಕೂಡ ಕಡಿಮೆ ಆಗಿದೆ. ಆದರೆ ಬಸ್ ಟ್ರಕ್ ಮತ್ತು ಬೃಹತ್ ವಾಹನಗಳ ಮಾರಾಟದಲ್ಲಿ ಏಳಿಗೆ ಕಂಡಿದೆ, ಈ ವರ್ಷ ಜುಲೈ ನಲ್ಲಿ 13,291 ಯೂನಿಟ್ಸ್ ಮಾರಾಟ ಆಗಿದೆ, 2022ರ ಜುಲೈನಲ್ಲಿ 12,012 ಯುನಿಟ್ಸ್ ಮಾರಾಟ ಆಗಿತ್ತು. ಇನ್ನು ಎಲೆಕ್ಟ್ರಿಕ್ ವೆಹಿಕಲ್ಸ್ ವಿಚಾರದಲ್ಲಿ ಭಾರಿ ಪ್ರಗತಿ ಆಗಿದೆ. 2022ರ ಜುಲೈ ನಲ್ಲಿ 4,151 ಯೂನಿಟ್ಸ್ ಮಾರಾಟ ಆಗಿತ್ತು. ಈ ಜುಲೈ ನಲ್ಲಿ 6,239 ಯುನಿಟ್ಸ್ ಮಾರಾಟ ಆಗಿದೆ. 53% ಹೆಚ್ಚು ಸೇಲ್ ಆಗಿದೆ (TATA Sales).
ಟಾಟಾ ಸಂಸ್ಥೆಯ ಅದ್ಭುತ ಇವಿಗಳಿಂದ ಈ ರಿಸಲರ್ ಬಂದಿದೆ, ನೆಕ್ಸಾನ್ ಇವಿ, ಟಿಯಾಗೋ ಇವಿ, ಟಿಗೂರ್ ಇವಿ ಗಳು ಹೆಚ್ಚು ಸೇಲ್ ಆಗುತ್ತಿದೆ. ಒಳ್ಳೆಯ ಸೇಲ್ಸ್ ಹೊಂದಿರುವ ಈ ಮೂರು ಕಾರ್ ಗಳ ಬಗ್ಗೆ ಹೇಳುವುದಾದರೆ, ನೆಕ್ಸಾನ್ ಇವಿ 2 ವೇರಿಯಂಟ್ ಗಳಲ್ಲಿ ಲಭ್ಯವಿದೆ, ಫ್ರೇಮ್ ಹಾಗೂ ಮ್ಯಾಕ್ಸ್, ಫ್ರೇಮ್ ನ ಬೆಲೆ 14.49 ಲಕ್ಷದಿಂದ 17.19 ಲಕ್ಷದವರೆಗೂ ಇರುತ್ತದೆ..ಮ್ಯಾಕ್ಸ್ ಬೆಲೆ 16.54 ಲಕ್ಷದಿಂದ ಶುರುವಾಗುತ್ತದೆ. 312km ಮೈಲೇಜ್ ನೀಡುತ್ತದೆ (TATA Sales). ಇದನ್ನು ಓದಿ..Upcoming SUV: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ SUV ಗಳು- ಇವುಗಳೇ ನೋಡಿ ಮುಂದಿನ ಭರ್ಜರಿ ಕಾರುಗಳು.
ಟಿಯಾಗೋ ಇವಿ ಬೆಲೆ 8.69ಲಕ್ಷದಿಂದ 12.04 ಲಕ್ಷದವರೆಗು ಇರುತ್ತದೆ. 24 ಬ್ಯಾಟರಿ ಪ್ಯಾಕಪ್ ಜೊತೆಗೆ ಬರಲಿದ್ದು, 250 ಇಂದ 315km ರೇಂಜ್ ಕೊಡುತ್ತದೆ. ಇನ್ನು ಟಾಟಾ ಟಿಗೂರ್ ಬಗ್ಗೆ ಹೇಳುವುದಾದರೆ, 12.49 ಲಕ್ಷದಿಂದ 13.75ಲಕ್ಷದವರೆಗು ಎಕ್ಸ್ ಶೋರೂಮ್ ಬೆಲೆ ಇರುತ್ತದೆ. ಈ ಮೂರು ಕಾರ್ ಗಳಲ್ಲಿ ಸಾಕಷ್ಟು ವಿಶೇಷತೆಗಳು ಇರುತ್ತದೆ (TATA Sales). ಇದನ್ನು ಓದಿ..Rules Change: ಇಂದಿನಿಂದ ಫುಲ್ ನಿಯಮ ಬದಲು- ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲ ಅಂದ್ರೆ ದರ ಏರಿಕೆ ಜೊತೆ ಜೇಬು ಕೂಡ ಕಟ್ ಆಗುತ್ತೆ.
Comments are closed.