Neer Dose Karnataka
Take a fresh look at your lifestyle.

Vehicle Subsidy Scheme- ತಗೋಳಿ ಇನ್ನೊಂದು ಗ್ಯಾರಂಟಿ- ಈ ಬಾರಿ ವಾಹನ ಖರೀದಿಗೆ ಮೂರು ಲಕ್ಷ. ಮನೆಯಲ್ಲಿಯೇ ಕೂತು ಪಡೆಯಿರಿ.

Vehicle Subsidy Scheme: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ತಮ್ಮ ಜೀವನದ ಅಗತ್ಯತೆಗಳನ್ನು ಪೂರೈಸಲು ಹಾಗೂ ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ದುಡಿಯಬೇಕು ಎನ್ನುವಂತಹ ಆಲೋಚನೆಯನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಎಲ್ಲಾ ಅಗತ್ಯತೆಗಳನ್ನು ಪೂರೈಸುವಂತಹ ಕೆಲಸವನ್ನು ಪಡೆಯುವ ವಿದ್ಯಾರ್ಹತೆಯನ್ನು ಹೊಂದಿರುವುದಿಲ್ಲ ಎಂಬುದನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

Vehicle Subsidy scheme from Karnataka government explained completely
Vehicle Subsidy scheme from Karnataka government explained completely

ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕಾರು ಟ್ಯಾಕ್ಸಿ ಅಥವಾ ರಿಕ್ಷಾ ಚಲಾವಣೆ ಮಾಡಿ (Vehicle Subsidy Scheme) ತಮ್ಮ ಜೀವನವನ್ನು ಮುನ್ನಡೆಸುವಂತಹ ಕನಸನ್ನು ಹೊಂದಿರುವಂತಹ ಆಕಾಂಕ್ಷಿಗಳಿಗೆ ಒಂದು ವೇಳೆ ಅವರ ಬಳಿ ಇಂತಹ ವಾಹನಗಳನ್ನು ಖರೀದಿಸಲು ಹಣ ಇಲ್ಲದೆ ಹೋದಲ್ಲಿ ಸರ್ಕಾರದಿಂದ ಹಣವನ್ನು(Get Money From Government To Buy Vehicle) ಪಡೆಯುವುದು ಹೇಗೆ ಎನ್ನುವುದನ್ನು ಇವತ್ತಿನ ಲೇಖನಿಯಲ್ಲಿ ತಿಳಿಸಲು ಹೊರಟಿದ್ದೇವೆ.

ಹೌದು ಲೇಟೆಸ್ಟ್ ಆಗಿ ಸಿಕ್ಕಿರುವ ಮಾಹಿತಿಯ ಪ್ರಕಾರ ತಿಳಿದು ಬಂದಿರುವ ಸುದ್ದಿ ಏನೆಂದರೆ ಸ್ವಾವಲಂಬಿ ಸಾರಥಿ ಯೋಜನೆ(Swavalambi Sarathi Scheme) ಅಡಿಯಲ್ಲಿ ನೀವು ಯಾವ ವಾಹನವನ್ನು ಖರೀದಿಸಬೇಕು ಅಂತ ಅಂದುಕೊಂಡಿದ್ದೀರೋ ಅದರ ಬೆಲೆಯ ಮೇಲೆ 50% 3 ಲಕ್ಷ ರೂಪಾಯಿವರೆಗೆ ನೀವು ಸಬ್ಸಿಡಿಯನ್ನು ಪಡೆಯಲಿದ್ದೀರಿ. ಉಳಿದ ಮೊತ್ತಕ್ಕೆ ನೀವು ಬ್ಯಾಂಕಿಗೆ ನೀವು ವಾಹನವನ್ನು ಪಡೆದುಕೊಂಡ ದಾಖಲೆ ಪತ್ರಗಳನ್ನು ನೀಡಬೇಕಾಗಿರುತ್ತದೆ. ಹಾಗಿದ್ರೆ ಬನ್ನಿ ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳೋಣ.

ಈ ಸಬ್ಸಿಡಿ ಯೋಜನೆಯ ಹೆಸರು ಸ್ವಾವಲಂಬಿ ಸಾರಥಿ ಯೋಜನೆಯಾಗಿದ್ದು ವಾಹನದ ಖರೀದಿಯ (Vehicle Subsidy Scheme) ಮೇಲೆ 50 ಪ್ರತಿಶತ ಅಂದರೆ ಹೆಚ್ಚಿಗೆ 3 ಲಕ್ಷ ರೂಪಾಯಿವರೆಗೂ ಸಬ್ಸಿಡಿ ದೊರೆಯುತ್ತದೆ. ಅರ್ಜಿ ನೀಡುವಂತಹ ಅರ್ಜಿದಾರರ ವಯಸ್ಸಿನ ಕನಿಷ್ಠ ಮಿತಿ 18 ರಿಂದ ಪ್ರಾರಂಭವಾಗಿ ಗರಿಷ್ಠ ಮಿತಿ 55 ವರ್ಷ ಆಗಿರುತ್ತದೆ. ಇದನ್ನು ಕೊಡ ಮಾಡುತ್ತಿರುವಂತಹ ನಿಗಮದ ಹೆಸರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಯಮಿತ.

How to apply for vehicle subsidy scheme in Kannada language

ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ತಿಳಿಯೋಣ ಬನ್ನಿ. ಇವರು ಅಲ್ಪಸಂಖ್ಯಾತರಾಗಿರಬೇಕು(Religion Minorities). ಕುಟುಂಬದ ಆದಾಯ ವರ್ಷಕ್ಕೆ 4.50 ಲಕ್ಷಗಳಿಗಿಂತ ಕಡಿಮೆ ಇರಬೇಕು. ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಹಾಗೂ ಕುಟುಂಬಸ್ಥರು ಯಾವುದಕ್ಕೆ ಕೇಂದ್ರ ಸರ್ಕಾರದಲ್ಲಿ ಅಥವಾ ರಾಜ್ಯ ಸರ್ಕಾರದಲ್ಲಿ ನೌಕರಿಯನ್ನು ಮಾಡುತ್ತಿರಬಾರದು. ಐದು ವರ್ಷಗಳ ಒಳಗಾಗಿ ಯಾವುದೇ ಬೇರೆ ಸರ್ಕಾರಿ ಯೋಜನೆಗಳಲ್ಲಿ ಸಾಲವನ್ನು ಪಡೆದುಕೊಂಡಿರುವಂತಹ ಕುಟುಂಬದವರಾಗಿರಬಾರದು.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits


Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

ಕೆಲವೊಂದು ದಾಖಲೆ ಪತ್ರಗಳನ್ನು ಕೂಡ ಈ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪತ್ರಗಳನ್ನು ಕೂಡ ನೀಡಬೇಕಾಗಿರುತ್ತದೆ. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೆರಾಕ್ಸ್ ಬೇಕಾಗಿರುತ್ತದೆ. ವಾಹನದ ಕೊಟೇಶನ್(Vehicle Quotation), ಪಾಸ್ಪೋರ್ಟ್ ಭಾವಚಿತ್ರ, ಸರ್ಕಾರಿ ಯೋಜನೆ ಅಡಿಯಲ್ಲಿ ಯಾವುದೇ ಸಾಲವನ್ನು ಇತ್ತೀಚಿಗೆ ಪಡೆದುಕೊಂಡಿಲ್ಲ ಎನ್ನುವಂತಹ ಜಿಲ್ಲಾಧಿಕಾರಿಗಳ ಪತ್ರ ಕೊಡ ಬೇಕಾಗಿರುತ್ತದೆ. ಈ (Vehicle Subsidy Scheme) ಯೋಜನೆ ಅಡಿಯಲ್ಲಿ ವಾಹನವನ್ನು ತೆಗೆದುಕೊಂಡು ಬೇರೆಯವರಿಗೆ ಪರಭಾರೆ ಮಾಡಬಾರದು ಎನ್ನುವುದಕ್ಕೆ ಕೂಡ ನೀವು ದೃಢೀಕರಣ ಪತ್ರವನ್ನು ನೀಡಲೇ ಬೇಕಾಗಿರುತ್ತದೆ.

ಒಂದು ವೇಳೆ ಈ ಮೇಲೆ ನಾವು ಹೇಳಿರುವಂತಹ ಪ್ರತಿಯೊಂದು ಅರ್ಹತೆ ಹಾಗೂ ದಾಖಲೆ ಪತ್ರಗಳು ನಿಮಗೆ ಸರಿ ಹೊಂದುತ್ತಿದೆ ಎಂದು ನೀವು ಭಾವಿಸಿದಲ್ಲಿ ಹಾಗೂ ನಿಮಗೂ ಕೂಡ ಇಂತಹ ವಾಹನವನ್ನು ಖರೀದಿಸುವಂತಹ ಅವಶ್ಯಕತೆ ಇದ್ದಲ್ಲಿ kmdc.karnataka.gov.in ಲಿಂಕ್ ಗೆ ಹೋಗಿ ಸರಿಯಾದ ಮಾಹಿತಿಗಳನ್ನು ತುಂಬುವ ಮೂಲಕ ಅರ್ಜಿಯನ್ನು ಕೂಡ ನೀವು ಸಲ್ಲಿಸಬಹುದಾಗಿದೆ.

Comments are closed.