Post office scheme: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ
Post office scheme: ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಮೊದಲು ಪೋಸ್ಟ್ ಆಫೀಸ್(post office) ಅನ್ನು ಕೇವಲ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಂದೇಶವನ್ನು ಕಳುಹಿಸಲು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಪೋಸ್ಟ್ ಆಫೀಸ್ ಸಾಕಷ್ಟು ಹೆಚ್ಚು ಬಡ್ಡಿದರವನ್ನು ನೀಡುವಂತಹ ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರೂ ಕೂಡ ಹೆಚ್ಚಿನ ಬಡ್ಡಿದರ ಹಾಗೂ ಸುರಕ್ಷತೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ತಮ್ಮ ಹಣವನ್ನು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪೋಸ್ಟ್ ಆಫೀಸ್ನಲ್ಲಿ ಕೂಡ ಹೂಡಿಕೆಯ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವನ್ನು ಪರಿಷ್ಕರಿಸಲಾಗುತ್ತದೆ.
ಸ್ನೇಹಿತರೆ ಇದೆ ಸಮಯದಲ್ಲಿ ನಿಮಗೆ ಮತ್ತೊಂದು ಸಿಹಿ ಸುದ್ದಿ- ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ
Best Investment Post office scheme Explained in Kannada
ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಬಡ್ಡಿದರದ ವಿಚಾರದ ಬಗ್ಗೆ ಮಾತನಾಡುವುದಾದರೆ ಸೇವಿಂಗ್ ಅಕೌಂಟ್ನಲ್ಲಿ ಜಮಾ ಮಾಡುವಂತಹ ಹಣದ ಮೇಲೆ 4 ಪ್ರತಿಶತ ಬಡ್ಡಿ ದರವನ್ನು ನೀಡಲಾಗುತ್ತದೆ ಈಗಲೂ ಕೂಡ ಮುಂದುವರೆದುಕೊಂಡು ಹೋಗುತ್ತದೆ. ಇನ್ನು ಐದು ವರ್ಷಗಳವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಹೂಡಿಕೆ ಮಾಡುವಂತಹ recurring deposit ಯೋಜನೆಯಲ್ಲಿ ನಿಮಗೆ 6.5 ರಿಂದ 6.7% ಬಡ್ಡಿ ದರವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ಕೂಡ ಒಂದು ಲಾಭದಾಯಕ ಯೋಜನೆಯಾಗಿದೆ.
ನೀವು ಯಾವುದೇ ವ್ಯಾಪಾರ ಮಾಡಿ ಯಶಸ್ಸು ಕಾಣಬೇಕು ಎಂದರೆ – ಈ ಟ್ರಿಕ್ಸ್ ಬಳಸಿ- ಗುಜರಾತಿಗಳು, ಮಾರ್ವಾಡಿಗಳು ಬಳಸುವ ಟ್ರಿಕ್ಸ್ ಗಳು. Business Tricks
ಪೋಸ್ಟ್ ಆಫೀಸ್ನಲ್ಲಿ ನೀವು ಒಂದು ವರ್ಷದ ಮಟ್ಟಿಗೆ ಫಿಕ್ಸಿಡ್ ಡೆಪಾಸಿಟ್(fixed deposit) ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ 6.9 ಪ್ರತಿಶತ ಇಂಟರೆಸ್ಟ್ ರೇಟ್ ಸಿಗುತ್ತೆ. 2 ರಿಂದ 3 ವರ್ಷಗಳಿಗೆ 7% ಹಾಗೂ 5 ವರ್ಷಕ್ಕೆ 7.5% ಬಡ್ಡಿ ದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ(senior citizen saving Scheme) 60 ವರ್ಷಕ್ಕಿಂತ ಮೇಲ್ಪಟ್ಟವರ ಹೂಡಿಕೆಯ ಮೇಲೆ 8.2 ಪ್ರತಿಶತ ಸಿಗುತ್ತೆ. NSC ಪೆನ್ಷನ್ ಯೋಜನೆ ಅಡಿಯಲ್ಲಿ 5 ವರ್ಷಗಳ ಹೂಡಿಕೆ ಮೇಲೆ ನಿಮಗೆ 7.7% ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದು ಎಂಬುದಾಗಿ ತಿಳಿದು ಬಂದಿದೆ.
POMIS ಯೋಜನೆಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಒಮ್ಮೆಗೆ ನೀವು ಹಣವನ್ನು ಕಟ್ಟಿ, ಪ್ರತಿ ತಿಂಗಳು ಬಡ್ಡಿದರವನ್ನು ಪಡೆದುಕೊಳ್ಳುವಂತಹ ಯೋಜನೆಗಳು ಕೂಡ ಇದೆ. ಇದರ 5 ವರ್ಷದ ಮೆಚುರಿಟಿಯಲ್ಲಿ ನೀವು ವಾರ್ಷಿಕ 7.4% ಬಡ್ಡಿದರವನ್ನು ಪಡೆದುಕೊಳ್ಳ ಬಹುದಾಗಿದೆ. Public provident fund ನಲ್ಲಿ ನೀವು 7.1% ಹಾಗೂ ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ 7.5% ಬಡ್ಡಿದರವನ್ನು ಪಡೆದುಕೊಳ್ಳಲಿದ್ದೀರಿ. ಇದು ಡಬಲ್ ಆಗುವಂತಹ ಯೋಜನೆ ಎಂಬುದಾಗಿ ಕರೆಯಲಾಗುತ್ತದೆ ಹೀಗಾಗಿ 10 ವರ್ಷದಲ್ಲಿ ನೀವು ಹಾಕುವಂತಹ ಒಂದು ಲಕ್ಷ ರೂಪಾಯಿಗಳ ಹೂಡಿಕೆ ಎರಡು ಲಕ್ಷ ರೂಪಾಯಿ ಆಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ(Sukanya samriddhi Yojana) ನಲ್ಲಿ ಈಗಾಗಲೇ ನಿಗದಿಪಡಿಸಿರುವಂತಹ 8 ಪ್ರತಿಶತ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದಾಗಿ ಕೂಡ ಸರ್ಕಾರದಿಂದ ತಿಳಿದು ಬಂದಿದೆ. ಮಹಿಳಾ ಸಮ್ಮಾನ್ ಸೇವಿಂಗ್ ಯೋಜನೆಯಲ್ಲಿ ಕೂಡ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಹೋಗಿ ನೀವು ಇನ್ನಷ್ಟು ಹೆಚ್ಚಿನ ಯೋಜನೆಗಳ ಬಗ್ಗೆ ಹಾಗೂ ಅವುಗಳ ಬಡ್ಡಿ ದರದ ಬಗ್ಗೆ ಮಾಹಿತಿಯನ್ನು ಅಧಿಕೃತವಾಗಿ ಪಡೆದುಕೊಳ್ಳಬಹುದಾಗಿದೆ.
Comments are closed.