Police Recruitment 2023: 10 ನೇ ತರಗತಿ ಪಾಸ್ ಆಗಿದ್ದರೆ ಸಾಕು, ಕಾನ್ಸ್ ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿ- ಈ ಬಾರಿ ಸುಲಭವಾಗಿ ಕೆಲಸ ಪಡೆಯಿರಿ.
Police Recruitment 2023: ನಮಸ್ಕಾರ ಸ್ನೇಹಿತರೆ ನಿರುದ್ಯೋಗದಲ್ಲಿ ಇರುವಂತಹ ಯುವಜನತೆಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಕಾನ್ಸ್ಟೇಬಲ್(constable) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನ ಮಾಡಲಾಗಿದ್ದು ಕೇಂದ್ರ ಸಿಬ್ಬಂದಿ ಆಯೋಗದಿಂದ ಅಸ್ಸಾಂ ರೈಫಲ್ಸ್, ಸಶಸ್ತ್ರ ಬಾರ್ಡರ್ ಫೋರ್ಸ್, ರಾಷ್ಟ್ರೀಯ ತನಿಖಾ ಸಂಸ್ಥೆ, ಕೇಂದ್ರ ಸಶಸ್ತ್ರ ಪಡೆ ಹಾಗೂ ನಾರ್ಕೋಟಿಕ್ಸ್ ಬ್ಯುರೋ ಗಳಿಗೆ ಕಾನ್ಸ್ಟೇಬಲ್ ಗಳ ಅವಶ್ಯಕತೆ ಇದ್ದು ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಹಾಗಿದ್ರೆ ಬನ್ನಿ ಈ ಹುದ್ದೆಯಲ್ಲಿ ಕೆಲಸ ಸಿಗಲು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಇದರ ವಿವರಗಳನ್ನು ತಿಳಿಯೋಣ.
ಇದನ್ನು ಕೂಡ ಓದಿ:- ದಿನೇ ದಿನೇ ಜನರು ಮುಗಿಬೀಳುತ್ತಿರುವ ಕಾರ್- ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್. buy Maruti Suzuki Celerio car
ಹುದ್ದೆಯ ವಿವರ: Police Recruitment 2023
ಕೇಂದ್ರ ಸಿಬ್ಬಂದಿ ಆಯೋಗ 2018ರಿಂದ ಪ್ರಾರಂಭವಾಗಿ ಈಗಾಗಲೇ ಕಾನ್ಸ್ಟೇಬಲ್ ಹುದ್ದೆಗಳಿಗೆ ಇದುವರೆಗೂ 1.5 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳನ್ನು ನೇಮಿಸಿಕೊಂಡಿದ್ದು ಈ ಬಾರಿ ಅಂದರೆ ಈ ವರ್ಷ 50,000ಕ್ಕೂ ಹೆಚ್ಚಿನ ಕಾನ್ಸ್ಟೇಬಲ್ ಗಳನ್ನು ಅಗತ್ಯ ಇರುವಂತಹ ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾದರೆ ಈಗಾಗಲೇ ನಾವು ಮೇಲೆ ಹೇಳಿರುವಂತಹ ಬೇರೆ ಬೇರೆ ಹುದ್ದೆಗಳಿಗೆ ಅವರನ್ನು ಅವರ ಅರ್ಹತೆ ಆಧಾರದ ಮೇಲೆ ವಿಂಗಡಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
Police Recruitment 2023- ವಯಸ್ಸು ಹಾಗೂ ಎಜುಕೇಶನ್ ಕ್ವಾಲಿಫಿಕೇಷನ್ಯಾ:
ರು ಬೇಕಾದರೂ ಕೂಡ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಅಲ್ಲಿ ವಯಸ್ಸು ಹಾಗೂ ವಿದ್ಯಾರ್ಹತೆಯನ್ನು ಕೂಡ ಪರಿಗಣಿಸಲಾಗುತ್ತದೆ. ಕಡಿಮೆ ಪಕ್ಷದಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯನ್ನು ಪಾಸ್ ಮಾಡಿರಬೇಕು. ವಯಸ್ಸಿನ ಅರ್ಹತೆಯ ಬಗ್ಗೆ ಮಾತನಾಡುವುದಾದರೆ 18ರಿಂದ 23 ವರ್ಷದ ವಯಸ್ಸಿನ ನಡುವಿನ ವ್ಯಕ್ತಿಗಳಿಗೆ ಮಾತ್ರ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನಿಸಲಾಗುತ್ತದೆ.
ಇದನ್ನು ಕೂಡ ಓದಿ: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme
ಯಾವ ರೀತಿಯಲ್ಲಿ ಆಯ್ಕೆ ಹಾಗೂ ಸಂಬಳದ ವಿವರ
ಅರ್ಜಿ ಸಲ್ಲಿಸಿದ ನಂತರ ಮೊದಲಿಗೆ ಕಂಪ್ಯೂಟರ್ ಮೂಲಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಲ್ಲಿ general knowledge, general intelligence, elementary mathematics ಹಾಗೂ ಇಂಗ್ಲಿಷ್ ವಿಚಾರದ ಬಗ್ಗೆ ಪರೀಕ್ಷೆ ಇರುತ್ತದೆ. ಪಾಸಾದ ನಂತರ ದೈಹಿಕ ಹಾಗೂ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. ಈ ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾದವರನ್ನು ಆಯ್ಕೆ ಮಾಡಲಾಗುತ್ತದೆ. ಸಂಬಳದ ವಿಚಾರದ ಬಗ್ಗೆ ಮಾತನಾಡುವುದಾದರೆ ತಿಂಗಳಿಗೆ 21,700 ಗಳಿಂದ ಪ್ರಾರಂಭಿಸಿ 69,100 ರೂಪಾಯಿಗಳವರೆಗು ಕೂಡ ಸಂಬಳವನ್ನು ನಿಗದಿಪಡಿಸಲಾಗಿರುತ್ತದೆ.
ಕಾನ್ಸ್ಟೇಬಲ್ ಹುದ್ದೆಗೆ ಕರ್ನಾಟಕ ರಾಜ್ಯದಲ್ಲಿರುವ ಪರೀಕ್ಷಾ ಕೇಂದ್ರಗಳು:
ಈ ಪರೀಕ್ಷೆಯನ್ನು ಬರೆಯಲು ರಾಜ್ಯದಲ್ಲಿ ಒಟ್ಟಾರೆಯಾಗಿ 8 ಪರೀಕ್ಷಾ ಕೇಂದ್ರಗಳಿವೆ. ಅವುಗಳನ್ನು ನೀವು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಕಾಣಬಹುದಾಗಿದೆ. ಕನ್ನಡ ಭಾಷೆಯಲ್ಲಿ ಕೂಡ ಈ ಪರೀಕ್ಷೆಯನ್ನು ಬರೆಯಬಹುದಾಗಿದ್ದು ಕೇಂದ್ರ ಸಿಬ್ಬಂದಿ ಸಂಸ್ಥೆ ಈ ವಿಚಾರದ ಕುರಿತಂತೆ ಅಧಿಕೃತ ಸೂಚನೆಗಳನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಅಧಿಸೂಚನೆಯನ್ನು ನವೆಂಬರ್ 24ರಂದು ಪ್ರಕಟಿಸಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸುವಂತಹ ಕೊನೆಯ ದಿನಾಂಕ ಡಿಸೆಂಬರ್ 28 ಆಗಿರುತ್ತದೆ. 2024ರಲ್ಲಿ ನೇಮಕಾತಿಯ ಪರೀಕ್ಷೆ ಪ್ರಾರಂಭವಾಗುತ್ತದೆ.
Comments are closed.