G-pay Loan: ನೀವು ಗೂಗಲ್ ಪೆ ಬಳಸುತ್ತಿದ್ದೀರಾ? ಹಾಗಿದ್ದರೆ ಗೂಗಲ್ ಕೊಡುತ್ತೆ ಸಾಲ. ನಿಮಿಷಗಳಲ್ಲಿ ನೇರ ಬ್ಯಾಂಕ್ ಖಾತೆಗೆ.
G-pay Loan: ನಮಸ್ಕಾರ ಸ್ನೇಹಿತರೇ ಡಿಜಿಟಲ್ ಇಂಡಿಯಾ ಭಾರತಕ್ಕೆ ಕಾಲಿಟ್ಟ ನಂತರ ಆನ್ಲೈನ್ ಟ್ರಾನ್ಸಾಕ್ಷನ್(online transaction) ಇಡೀ ವಿಶ್ವದಲ್ಲಿ ಹೋಲಿಸಿದರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಹಾಗೂ ದೊಡ್ಡ ರೂಪದಲ್ಲಿ ಬೆಳೆದು ನಿಂತಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಗೂಗಲ್ ಪೇ(Google Pay) ವಿಚಾರದ ಬಗ್ಗೆ. ಇತ್ತೀಚಿಗಷ್ಟೇ ಚಿಕ್ಕ ವ್ಯಾಪಾರಿಗಳಿಗಾಗಿ ಗೂಗಲ್ ಪೇ ಸಾಲ ಸೌಲಭ್ಯವನ್ನು ಕೂಡ ಜಾರಿಗೆ ತಂದಿದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನು ಕೂಡ ಓದಿ:- ದಿನೇ ದಿನೇ ಜನರು ಮುಗಿಬೀಳುತ್ತಿರುವ ಕಾರ್- ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್. buy Maruti Suzuki Celerio car
Google Enter Loan Market in India- Below is the Details of G-pay Loan in India Explained in Kannada
ಗೂಗಲ್ ಪೇ ಚಿಲ್ಲರೆ ವ್ಯಾಪಾರಿಗಳಿಗೆ ಸ್ಯಾಚೆಟ್ ಸಾಲ (G-pay Loan) ಎನ್ನುವ ಚಿಕ್ಕರೂಪದ ಸಾಲದ ಹಣವನ್ನು ನೀಡಲು ಹೊರಟಿದ್ದು ಇದರ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗು ಕೂಡ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. ಇನ್ನು ಗೂಗಲ್ ಪೇ ನಲ್ಲಿ 15000 ವರೆಗೆ ಸುಲಭ ರೂಪದಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಈ ರೀತಿಯ ಚಿಕ್ಕ ಪ್ರಮಾಣದ ಲೋನ್ ಗಳಿಗಾಗಿ ಗೂಗಲ್ ಪ್ಲೇಸ್ ಭಾರತದ ಸಾಕಷ್ಟು ಪ್ರತಿಷ್ಠಿತ ಬ್ಯಾಂಕ್ ಗಳ ಜೊತೆಗೆ ಸಹಭಾಗಿತ್ವವನ್ನು ಕೂಡ ಮಾಡಿಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.
ICICI Bank ಹಾಗೂ Axis Bank ಗಳ ಜೊತೆಗೆ ಯುಪಿಐ ವಿಭಾಗದಲ್ಲಿ ಗೂಗಲ್ ಪೇ ಪಾರ್ಟ್ನರ್ಶಿಪ್ ಅನ್ನು ಮಾಡಿಕೊಂಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಗೂಗಲ್ ಪೇ ಪರ್ಸನಲ್ ಲೋನ್ ನೀಡುವಂತಹ ಹೊಸ ಪ್ರಯೋಗಕ್ಕೆ ಕೈ ಹಾಕಿದೆ ಎಂದು ಹೇಳಬಹುದಾಗಿದೆ. ಪ್ರಾರಂಭದಲ್ಲಿ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 15000 ವರೆಗೂ ಕೂಡ ಸಾಲವನ್ನು (G-pay Loan) ನೀಡಲಾಗುತ್ತದೆ ಹಾಗೂ ಅದನ್ನು ನೀವು ತಿಂಗಳಿಗೆ 111 ಕಂತಿನಲ್ಲಿ ವಾಪಾಸ್ ಕಟ್ಟಬಹುದಾಗಿದೆ. ಇಲ್ಲಿ ಗೂಗಲ್ ಪೇ DMI ಫೈನಾನ್ಸ್ ಕಂಪನಿಯ ಜೊತೆಗೆ ಕೂಡ ಪಾರ್ಟ್ನರ್ಶಿಪ್ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತರುತ್ತಿದೆ.
ಇದನ್ನು ಕೂಡ ಓದಿ: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme
ಸಣ್ಣ ವ್ಯಾಪಾರಿಗಳಿಗೆ ಅರ್ಜೆಂಟ್ ಆಗಿರುವ ಸಂದರ್ಭದಲ್ಲಿ ಹಣದ ಅಗತ್ಯತೆ ಇರುತ್ತದೆ ಹಾಗೂ ಆ ಸಂದರ್ಭದಲ್ಲಿ ಗೂಗಲ್ ಪೇ ಈ ರೀತಿಯ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಆರ್ಥಿಕ ಅಗತ್ಯತೆಗಳನ್ನು ಪೂರೈಸುವಂತಹ ಕೆಲಸವನ್ನು ಮಾಡಲಿದೆ. ePayLater ಆಯ್ಕೆಯ ಮೂಲಕ ಕೂಡ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಹೊಂದಿರುತ್ತೀರಿ.
ಗೂಗಲ್ ಇಂಡಿಯಾ ಹೇಳಿರುವ ಪ್ರಕಾರ ಮಾಸಿಕ ಆದಾಯ 30000 ಗಿಂತ ಕಡಿಮೆ ಇದ್ದರೂ ಕೂಡ ಈ ಸಾಲ ಸೌಲಭ್ಯದಲ್ಲಿ ಹಣವನ್ನು ನೀಡಲಾಗುತ್ತದೆ ಎಂಬುದಾಗಿ ಹೇಳಿದೆ. ಇನ್ನು ಸಾಲು ಸೌಲಭ್ಯದಲ್ಲಿ ಕೂಡ ನಗರದ ಒಳಗೆ ಹಾಗೂ ಹೊರಗೆ ವ್ಯಾಪಾರ ಮಾಡುವಂತಹ ಎರಡು ವಿಭಾಗದ ಸಣ್ಣ ವ್ಯಾಪಾರಿಗಳಿಗೂ ಕೂಡ ಈ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
Comments are closed.