Neer Dose Karnataka
Take a fresh look at your lifestyle.

ಕಿರುತೆರೆಯ ಧಾರಾವಾಹಿಗಳಲ್ಲಿ ಸದ್ದಿಲ್ಲದೇ ಟಾಪ್ ನಟಿಯರಾಗುವ ಸೂಚನೆ ನೀಡಿರುವ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆ ಅಥವಾ ಸೀರಿಯಲ್. ಅದೆಷ್ಟೋ ಜನ ತಮ್ಮ ಸಿನಿ ಜಗತ್ತಿನ ಕನಸನ್ನ ಶುರು ಮಾಡೋದು ಧಾರವಾಹಿಗಳಿಂದಲೇ. ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಅರಸಿ ಎಂಬ ಧಾರವಾಹಿಯ ನೆಗೆಟಿವ್ ಪಾತ್ರದಲ್ಲಿ ನಟಿಸುವ ಮೂಲಕ ಕರಿಯರ್ ಶುರು ಮಾಡಿದವರು. ಸದ್ಯ ನಟನೆಯಲ್ಲಿ ಹಾಗೂ ಅಂದದಲ್ಲಿ ಉತ್ತಮವಾಗಿರುವ ಟಾಪ್ – 5 ಸುಂದರಿಯರ ಬಗ್ಗೆ ತಿಳಿಯೋಣ.

ಟಾಪ್ – 5 : ಕಾವ್ಯ ಮಹದೇವ್ – ಚರಣದಾಸಿಯ ದೀಪಳಾಗಿ ಜನರಿಗೆ ಪರಿಚಯವಾದ ಕಾವ್ಯ ಅಸಹಾಯಕ ಸೊಸೆಯಾಗಿ ಜನರ ಮನ ಗೆದ್ದರು. ನಂತರ ಹಾರರ್ ಧಾರವಾಹಿ ನಾ ನಿನ್ನ ಬಿಡಲಾರೆಯಲ್ಲಿ ನಟಿಸಿದರು. ಸದ್ಯ ಕಲರ್ಸ್ ಕನ್ನಡದ ನಮ್ಮನೆ ಯುವರಾಣಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ರಂಗಭೂಮಿ ಹಿನ್ನಲೆಯವರಾದ ಕಾವ್ಯ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ – 4 : ದೀಪಿಕಾ – ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ ಹಿರಿಸೊಸೆ ಧನ್ಯಾ ಆಗಿ ನಟನೆ ಶುರು ಮಾಡಿದ ದೀಪಿಕಾ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ಮುಂದೆ ಮದುವೆಯಾಗಿ ನಟನೆಗೆ ಬರುವುದಿಲ್ಲ ಎಂದು ಹೇಳಿದ್ದರು. ಆದರೇ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಆರತಿಯಾಗಿ ನಟಿಸಿದರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಅಭಿನಯಿಸುತ್ತಿರುವ ದೀಪಿಕಾ ಮುಂದೆ ತೆಲುಗಿನ ಇಟಿಂಕಿ ದೀಪಂ ಇಲ್ಲಾಲು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಇದೀಗ ಬೆಸುಗೆ ಧಾರಾವಾಹಿಯಲ್ಲಿ ಕೃಷ್ಣಪ್ರಿಯ ಆಗಿ ಅಭಿನಯಿಸುತ್ತಿರುವ ದೀಪಿಕಾ ಕಿರುತೆರೆಯಲ್ಲಿ ಬ್ಯುಸಿ. ಈ ಮಧ್ಯೆ ಸೂಪರ್ ಮಿನಿಟ್, ಮಜಾ ಟಾಕೀಸ್ ನಲ್ಲಿಯೂ ಸಹ ಬಂದು ಹೋಗಿದ್ದಾರೆ.

ಟಾಪ್ 3:- ನಮ್ರತಾ ಗೌಡ : ಪುಟ್ಟಗೌರಿ ಮದುವೆಯಲ್ಲಿ ಮಹೇಶನ ಪತ್ನಿ ಆಗಿ ಹಿಮಾ ಜನರಿಗೆ ಪರಿಚಯವಾದರು. ಅದಕ್ಕೂ ಮುಂಚೆ ಹಲವಾರು ಧಾರವಾಹಿ, ಸಿನಿಮಾಗಳಲ್ಲಿ ಅಭಿನಯಿಸಿದರೂ ಯಾವ ಬ್ರೇಕ್ ಸಿಕ್ಕಿರಲಿಲ್ಲ. ಪುಟ್ಟಗೌರಿ ಮದುವೆ ಸೀರಿಯಲ್ ಮುಗಿದ ನಂತರ ಈಗ ನಾಗಿಣಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ಟಾಪ್ 2 – ರಶ್ಮಿ ಪ್ರಭಾಕರ್ : ಜೀವನಚೈತ್ರ ಧಾರವಾಹಿಯಲ್ಲಿ ನಟಿಸುವ ಮೂಲಕ ಧಾರವಾಹಿ ಲೋಕ ಪ್ರವೇಶಿಸಿದರೂ, ರಶ್ಮಿಗೆ ಬ್ರೇಕ್ ಸಿಕ್ಕಿದ್ದು, ಲಕ್ಷ್ಮಿ ಬಾರಮ್ಮ ಧಾರವಾಹಿಯ ಚಿನ್ನು ಪಾತ್ರದ ಮೂಲಕ. ಸದ್ಯ ಸ್ಟಾರ್ ಸುವರ್ಣ ಚಾನೆಲ್ ನ ಮನಸೆಲ್ಲಾ ನೀನೆ ಧಾರವಾಹಿಯಲ್ಲಿ ರಾಗಳಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ.

ಟಾಪ್ 1 : ವರ್ಷಿಕಾ : ಕಲರ್ಸ್ ಸೂಪರ್ ವಾಹಿನಿಯಲ್ಲಿ ನಾಟಿ ವೈದ್ಯಳಾಗಿ ಇವಳೇ ವೀಣಾಪಾಣಿ ಎಂಬ ವಿಭಿನ್ನ ಧಾರವಾಹಿಯ ಮೂಲಕ ಜನರಿಗೆ ಪರಿಚಯವಾದರು. ನಂತರ ಸುವರ್ಣ ಚಾನೆಲ್ ನ ಅರಮನೆ ಗಿಳಿಯಾಗಿ ಸಹ ಅಭಿನಯಿಸಿದರು. ನಂತರ ಬಹಳ ದಿನಗಳ ಗ್ಯಾಪ್ ತೆಗೆದುಕೊಂಡು ರುಕ್ಕು ಧಾರವಾಹಿಯಲ್ಲಿ ಸೆಕೆಂಡ್ ಹಿರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ.

Comments are closed.