Neer Dose Karnataka
Take a fresh look at your lifestyle.

ಅನುಪ್ರಭಾಕರ್ ರವರ ಮಗಳ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆ ಹೇಗಿತ್ತು ಗೊತ್ತಾ ನೋಡಿ ವಿಡಿಯೋ??

8

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಗ್ಲಾಮರ್ ಹಾಗೂ ಸಾಂಸ್ಕೃತಿಕ ಪಾತ್ರ ಎರಡು ರೀತಿಯ ವಿಭಿನ್ನ ಪಾತ್ರಗಳನ್ನು ಕೂಡ ಸುಲಲಿತವಾಗಿ ನಿರ್ವಹಿಸಬಲ್ಲ ನಟಿ ಯಾರೆಂದು ಕೇಳಿದರೆ ಖಂಡಿತವಾಗಿಯೂ ಅನುಪ್ರಭಾಕರ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಮೂಲತಹ ಅನುಪ್ರಭಾಕರ್ ರವರು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು. ಹೌದು ಸ್ನೇಹಿತರೆ ಅನು ಪ್ರಭಾಕರ್ ಅವರ ತಾಯಿ ಗಾಯತ್ರಿ ಪ್ರಭಾಕರ್ ಅವರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ಅತ್ಯಂತ ಖ್ಯಾತ ಪೋಷಕ ನಟಿಯರಲ್ಲಿ ಒಬ್ಬರು.

ಹೀಗಾಗಿ ಅವರು ಬಾಲ್ಯದಿಂದಲೇ ಬಾಲನಟಿಯಾಗಿ ಕಾಣಿಸಿಕೊಂಡವರು. ಇನ್ನು ಅನುಪ್ರಭಾಕರ್ ಅವರು 1999 ರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ ಹೃದಯ ಹೃದಯ ಎಂಬ ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ. ಇನ್ನು ಅನುಪ್ರಭಾಕರ್ ರವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ, ಇವರು ಮೊದಲಿಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಜಯಂತಿ ರವರ ಪುತ್ರರಾಗಿರುವ ಕೃಷ್ಣಕುಮಾರ್ ಎಂಬುವವರನ್ನು 2002 ರಲ್ಲಿ ಮದುವೆಯಾಗಿರುತ್ತಾರೆ. ನಂತರ 2014 ರಲ್ಲಿ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆಯುತ್ತಾರೆ.

ನಂತರ ಅನುಪ್ರಭಾಕರ್ ಅವರು ತಮಗಿಂತ ಒಂದು ವರ್ಷ ಚಿಕ್ಕವರಾಗಿರುವ ನಟ ಹಾಗೂ ಮಾಡೆಲ್ ರಘು ಮುಖರ್ಜಿ ಅವರನ್ನು 2016 ರ ಏಪ್ರಿಲ್ ನಲ್ಲಿ ಎರಡನೆಯ ವಿವಾಹವಾಗುತ್ತಾರೆ. ಅನುಪ್ರಭಾಕರ್ ಹಾಗೂ ರಘುಮುಖರ್ಜಿ ಜೋಡಿ ಸಂತೋಷದ ದಾಂಪತ್ಯ ಜೀವನವನ್ನು ಬಾಳುತ್ತಿದ್ದು. ನಂದನ ಎಂಬ ಮುದ್ದಾದ ಮಗಳನ್ನು ಕೂಡ ಹೊಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇವರಿಬ್ಬರು ತಮ್ಮ ಮಗಳಾದ ನಂದನಾಳ ಮೂರನೇ ವರ್ಷದ ಜನ್ಮದಿನವನ್ನು ಆಚರಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.

Leave A Reply

Your email address will not be published.