Neer Dose Karnataka
Take a fresh look at your lifestyle.

ವಿಶ್ವಕಪ್ ಮುಗಿಯುವ ಮುನ್ನವೇ ನ್ಯೂಜಿಲೆಂಡ್ ವಿರುದ್ದದ ಸರಣಿಗೆ ತಂಡ ಘೋಷಣೆ ಮಾಡಿದ ಬಿಸಿಸಿಐ, ತಂಡ ನೋಡಿ ಶಾಕ್. ಆಯ್ಕೆಯಾದದ್ದು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹುನೀರಿಕ್ಷಿತ ಟಿ 20 ವಿಶ್ವಕಪ್ ಸರಣಿಯಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿತು ಎಂದು ಹೇಳಬಹುದು. ಟೂರ್ನಿಗೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ, ಟೂರ್ನಿಯ ಆರಂಭದಲ್ಲಿಯೇ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡದ ವಿರುದ್ದ ಹೀನಾಯವಾಗಿ ಸೋಲುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿತು. ಜೊತೆಗೆ ವಿಶ್ವಕಪ್ ಗೆಲ್ಲುವ ಆಸೆ ಸಹ ಕೈ ಬಿಟ್ಟು ಹೋಯಿತು. ಇನ್ನು ವಿಶ್ವಕಪ್ ಫೈನಲ್ ಪಂದ್ಯ ನವೆಂಬರ್ 14 ರಂದು ನಡೆಯಲಿದ್ದು, ನವೆಂಬರ್ 17 ರಿಂದ ಭಾರತ ಆತಿಥೇಯ ನ್ಯೂಜಿಲೆಂಡ್ ವಿರುದ್ದ ಮೂರು ಟಿ 20 ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ, ರೋಹಿತ್ ಶರ್ಮಾ ಸದ್ಯ ನಾಯಕನ ಸ್ಥಾನವನ್ನ ತುಂಬಲಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು, ಹಲವು ಹಿರಿಯ ಆಟಗಾರರಿಗೆ ಕೋಕ್ ನೀಡಲಾಗಿದೆ.

ಈ ತಂಡವನ್ನ ರೋಹಿತ್ ಶರ್ಮಾ ಮುನ್ನಡಸಲಿದ್ದು, ಉಪ ನಾಯಕನಾಗಿ ಕೆ.ಎಲ್.ರಾಹುಲ್ ರವರನ್ನ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಸಾಕಷ್ಟು ದಿನಗಳ ಬಯೋ ಬಬಲ್ ನಲ್ಲಿ ಕಾಲ ಕಳೆದಿದ್ದ ಹಿರಿಯ ಆಟಗಾರರಾದ ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿಯವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಕಳಪೆ ಫಾರ್ಮ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿಯವರನ್ನ ತಂಡದಿಂದ ಕೈ ಬಿಡಲಾಗಿದೆ. ಇನ್ನು ಇದೇ ಮೊದಲ ಭಾರಿಗೆ ವೇಗದ ಬೌಲರ್ ಗಳಾದ ಹರ್ಷಲ್ ಪಟೇಲ್, ಆವೇಶ್ ಖಾನ್, ಹಾಗೂ ಐಪಿಎಲ್ ಸ್ಟಾರ್ ವೆಂಕಟೇಶ್ ಅಯ್ಯರ್ ರವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ.

ಇನ್ನು ಇನ್ ಫಾರ್ಮ್ ಆಟಗಾರರಾದ ಯುಜವೇಂದ್ರ ಚಾಹಲ್, ಮಹಮದ್ ಸಿರಾಜ್, ಋತುರಾಜ್ ಗಾಯಕ್ವಾಡ್, ತಂಡಕ್ಕೆ ಮರಳಿದ್ದಾರೆ. ಆದರೇ ಭುವನೇಶ್ವರ್ ಕುಮಾರ್ ಗೆ ಮತ್ತೊಂದು ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ತಂಡದಲ್ಲಿ ಐವರು ಬ್ಯಾಟ್ಸಮನ್, ಇಬ್ಬರು ವಿಕೇಟ್ ಕೀಪರ್ ,ಮೂವರು ಆಲ್ ರೌಂಡರ್ ಹಾಗೂ ಆರು ಬೌಲರ್ ಗಳಿಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ದದ ಮೊದಲ ಪಂದ್ಯ ನವೆಂಬರ್ 17 ರಿಂದ ಪ್ರಾರಂಭವಾಗಲಿದೆ. ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್‌.ರಾಹುಲ್, ಋತುರಾಜ್ ಗಾಯಕ್ವಾಡ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮಹಮದ್ ಸಿರಾಜ್,ಆವೇಶ್ ಖಾನ್.

Comments are closed.