Neer Dose Karnataka
Take a fresh look at your lifestyle.

Business Tips: ಯಾವುದೇ ಬಿಸಿನೆಸ್ ಮಾಡಿದರೂ ಯಶಸ್ಸು ಪಡೆಯಬೇಕು ಎಂದರೆ ಈ ನಿಯಮ ಪಾಲಿಸಿ.

Business Tips: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ವ್ಯಾಪಾರ(Business ) ಮಾಡುವಂತಹ ಉಮ್ಮಸ್ಸು ಇರುತ್ತದೆ ಅದಕ್ಕಾಗಿ ಅವರು ಧೈರ್ಯದಿಂದ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳುವುದನ್ನು ಕೂಡ ಮಾಡಿ ವ್ಯಾಪಾರವನ್ನು ಆರಂಭ ಮಾಡುತ್ತಾರೆ ಆದರೆ ಸಾಲ ಮಾಡಿದ ತಕ್ಷಣ ವ್ಯಾಪಾರವನ್ನು ಪ್ರಾರಂಭಿಸಿದ ತಕ್ಷಣ ಪ್ರತಿಯೊಬ್ಬರೂ ಕೂಡ ಯಶಸ್ವಿ ಆಗಲೇಬೇಕು ಎನ್ನುವಂತಹ ನಿಯಮಗಳನ್ನು ಇಲ್ಲ ಅನ್ನೋದನ್ನು ಕೂಡ ನೀವು ತಿಳಿದುಕೊಳ್ಳಬೇಕು. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಯಾರಲ್ಲ ವ್ಯಾಪಾರ ಮಾಡುತ್ತಿದ್ದೀರಾ ಅಥವಾ ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದೀರೋ ಖಂಡಿತವಾಗಿ ಅವರಿಗೆ ಇದು ಸಹಾಯಕಾರಿಯಾಗಲಿದೆ.

ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ

business tips to get success in Kannada- Best Business Tricks and Tips Explained in Kannada

ವ್ಯಾಪಾರ ಮಾಡುವಾಗ ಪ್ರಮುಖವಾಗಿ ಒಬ್ಬ ವ್ಯಾಪಾರಿಗೆ ಅದರಲ್ಲೂ ವಿಶೇಷವಾಗಿ ಭವಿಷ್ಯದಲ್ಲಿ ಯಶಸ್ವಿಯಾಗುವಂತಹ ವ್ಯಾಪಾರಿಗೆ ಬೇಕಾಗಿರುವುದು ತಾಳ್ಮೆ ಎನ್ನುವಂತಹ ಒಂದು ಪ್ರಮುಖ ವಸ್ತು. ತಾಳ್ಮೆ (Patience) ಇಲ್ಲದೆ ಹೋದಲ್ಲಿ ವ್ಯಾಪಾರದಲ್ಲಿ ಲಾಭವನ್ನು ಗಳಿಸುವುದು ಅಸಾಧ್ಯ ಎಂದು ಹೇಳಬಹುದಾಗಿದೆ. ಇನ್ನು ನೀವು ಯಾವುದೇ ರೀತಿಯ ವ್ಯಾಪಾರವನ್ನು ಮಾಡುತ್ತಿದ್ದೀರಿ ಎಂದಾದರೆ ಅವುಗಳ ಬಗ್ಗೆ ನಿಮಗೆ ಸಂಪೂರ್ಣವಾದ ಜ್ಞಾನ ಇದ್ರೆ ಹಾಗೂ ಅವುಗಳ ಸಾಧಕ ಬಾದಕಗಳನ್ನು ಮುಂಚಿತವಾಗಿ ಲೆಕ್ಕಾಚಾರ ಹಾಕುವಂತಹ ಬುದ್ಧಿವಂತಿಕೆ ನಿಮ್ಮಲ್ಲಿದ್ದರೆ ಮಾತ್ರ ಆ ವ್ಯಾಪಾರವನ್ನು ಪ್ರಾರಂಭಿಸಬೇಕಾಗಿರುತ್ತದೆ. ಇದರಿಂದಾಗಿ ನೀವು ಆ ವ್ಯಾಪಾರದ ಭವಿಷ್ಯವನ್ನು ಮುಂಚೆನೇ ನಿರ್ಧರಿಸಬಹುದಾದಂತಹ ಸಾಮರ್ಥ್ಯವನ್ನು ಹೊಂದಿರುತ್ತೀರಿ.

ಎಲ್ಲದಕ್ಕಿಂತ ಹೆಚ್ಚಾಗಿ ನೀವು ಯಾವ ವಿಭಾಗದಲ್ಲಿ ವ್ಯಾಪಾರವನ್ನು ಪ್ರಾರಂಭಿಸುತ್ತಿರೋ ಆ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಯಾವ ರೀತಿಯ ಕಾಂಪಿಟೇಶನ್(Business Competition) ಇದೆ ಎನ್ನುವುದನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಹೀಗಾಗಿ ನಿಮ್ಮ ಹೊಸ ಬ್ಯುಸಿನೆಸ್ ಅನ್ನು ಪ್ರಾರಂಭ ಮಾಡುವುದಕ್ಕಿಂತ ಮುಂಚೆ ನೀವು ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಕಂಪನಿಗಳ ಎಲ್ಲಾ ಆಗು ಹೋಗುಗಳನ್ನು ಹಾಗೂ ಅವರು ಯಾವ ರೀತಿಯಲ್ಲಿ ಲಾಭ ಪಡೆಯುತ್ತಿದ್ದಾರೆ ಹಾಗೂ ಯಾವ ರೀತಿಯ ಗ್ರಾಹಕರು ಅವರನ್ನು ಹೆಚ್ಚಾಗಿ ಸೇರುತ್ತಿದ್ದಾರೆ ಎನ್ನುವಂತಹ ಪ್ರತಿಯೊಂದು ಸಂಶೋಧನೆಗಳನ್ನು ಕೂಡ ಮಾಡಿ ನಂತರ ಮಾರುಕಟ್ಟೆಗೆ ಕಾಲಿಟ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಒಂದು ಬಿಸಿನೆಸ್ ಪ್ರಾರಂಭಿಸುವುದಕ್ಕಿಂತ ಮುಂಚೆ ಪ್ರತಿಯೊಂದು ಕೂಡ ನೀವು ಸ್ಕೆಚ್ ಮಾಡಬೇಕು. ಅಂದರೆ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಷ್ಟು ಲಾಭ ಸಿಗುತ್ತದೆ ಯಾವ ರೀತಿಯಲ್ಲಿ ವ್ಯಾಪಾರವನ್ನು ವಿಸ್ತರಣೆ ಮಾಡಬಹುದು ಎನ್ನುವುದರ ಬಗ್ಗೆ. ಎಲ್ಲಕ್ಕಿಂತ ಪ್ರಮುಖವಾಗಿ ಯಾವುದೇ ಎರಡನೇ ಹೂಡಿಕೆ ಇಲ್ಲದೆ ಗ್ರಾಹಕರು ಹೆಚ್ಚಾದಂತೆ ಅವರಿಗೆ ಸರಿಯಾದ ಸೇವೆ ಅಥವಾ ವಸ್ತುಗಳನ್ನು ಪೂರೈಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾದಂತಹ scalable business ಅನ್ನು ನಾವು ಆಯ್ಕೆ ಮಾಡಬೇಕಾಗುತ್ತದೆ. ಇದರಿಂದಾಗಿ ನೀವು ಹೆಚ್ಚಿನ ಹೂಡಿಕೆಯ ಹಣವನ್ನು ಕೂಡ ಉಳಿಸಬಹುದಾಗಿದೆ.

ಸೀಮಿತ ಹೊಣೆಗಾರಿಕೆ ಹಾಗೂ ಪಾಲುದಾರಿಕೆಯನ್ನು ಹೊಂದಿರುವಂತಹ ಕಂಪನಿಗಳ ರಚನೆ ಖಂಡಿತವಾಗಿ ನಿಮಗೆ ಹೆಚ್ಚಿನ ಲಾಭವನ್ನು ತರಲಿದೆ. ವ್ಯಾಪಾರದಿಂದ ಮುಂಚೆ ಸರಿಯಾದ ಪ್ಲಾನಿಂಗ್ ಮಾತ್ರ ನಿಮ್ಮ ವ್ಯಾಪಾರವನ್ನು ಪ್ರಾಫಿಟೇಬಲ್ ಕಂಪನಿಯನ್ನಾಗಿ ಮಾಡುತ್ತದೆ. ಹೀಗಾಗಿ ಈ ಮೇಲೆ ಹೇಳಿರುವಂತಹ ಪ್ರತಿಯೊಂದು ವಿಚಾರಗಳನ್ನು ಕೂಡ ನೀವು ವ್ಯಾಪಾರವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಯೋಜನೆ ಹಾಕಿಕೊಂಡು ಯೋಚನೆ ಮಾಡಿ ಮಾಡಬೇಕು.

ಹೊಸ ಯೋಜನೆ- ಸರ್ಕಾರನೇ ಕೊಡುತ್ತೆ 25000. ನಿಮ್ಮ ಮನೆಯ ಮಹಿಳೆಯರ ಕೈಯಲ್ಲಿ ಕೂಡಲೇ ಅರ್ಜಿ ಹಾಕಿಸಿ. Shrama Shakthi Scheme

Comments are closed.