ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಟಾಪ್ ಸ್ಪರ್ಧಿಯೇ ಇರುವುದಿಲ್ಲವೇ?? ಕೊನೆಗೂ ಸ್ಪಷ್ಟನೆ ಕೊಟ್ಟ ಚಾನೆಲ್. ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಷ್ಟು ಮನರಂಜನೆ ಇದೆಯೋ ಹಾಗೆ ಕನ್ನಡ ಕಿರುತೆರೆಯಲ್ಲಿ ಕೂಡ ಅದಕ್ಕೂ ಮಿಗಿಲಾದ ಮನರಂಜನೆ ಇರುವುದು ಸುಳ್ಳಲ್ಲ. ಇವುಗಳಲ್ಲಿ ಮುಖ್ಯವಾದವೆಂದರೆ ಖಂಡಿತವಾಗಿ ಹೆಸರು ಬಂದೇ ಬರುತ್ತದೆ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಕುರಿತಂತೆ.

ಹೌದು ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧದಲ್ಲಿ ನಿಂತಿದ್ದು ಹಲವಾರು ವೀಕ್ಷಕರಿಗೆ ಬೇಸರವನ್ನುಂಟು ಮಾಡಿದ್ದು ಈಗ ಮತ್ತೊಮ್ಮೆ ಸಂತಸದ ಸುದ್ದಿಗಳು ಮನೆಮಾಡಿದೆ. ಹೌದು ಸ್ವತಹ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ವರ ಗುಂಡ್ಕಲ್ ರವರು ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗುವುದು ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹೊರಹಾಕಿದ್ದಾರೆ. ಅಲ್ಲದೇ ಈ ಸುದ್ದಿ ಕಿರುತೆರೆ ಹಾಗೂ ಬಿಗ್ಬಾಸ್ ಪ್ರಿಯರಿಗೆ ಸಾಕಷ್ಟು ಸಂತೋಷವನ್ನುಂಟುಮಾಡಿದೆ. ಒಂದು ಕಡೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣಾ ಶೈಲಿಯನ್ನು ನೋಡಲು ಕಾತುರರಾಗಿದ್ದಾರೆ.

ಇನ್ನೊಂದು ಕಡೆ ತಮ್ಮ ನೆಚ್ಚಿನ ಸ್ಪರ್ಧಿಗಳು ಹೇಗೆ ಬಿಗ್ ಬಾಸ್ ಅನ್ನು ಗೆಲ್ಲುತ್ತಾರೆ ಎಂಬ ಕಾತರದಲ್ಲಿ ಅಭಿಮಾನಿಗಳಿದ್ದಾರೆ. ಎಲ್ಲ ವಿಷಯದ ನಡುವೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಸೂತ್ರಗಳ ಪ್ರಕಾರ 12 ಸ್ಪರ್ಧಿಗಳು ಮತ್ತೊಮ್ಮೆ ಮನೆಯೊಳಗಡೆ ಹೋಗಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು ಪ್ರಶಾಂತ್ ಸಂಬರ್ಗಿ ಶುಭಾ ಪೂಂಜಾ ದಿವ್ಯ ಉರುಡುಗ ಅರವಿಂದ್ ಕೆಪಿ ದಿವ್ಯ ಸುರೇಶ್ ವೈಷ್ಣವಿ ಗೌಡ ರಘು ಗೌಡ ಚಕ್ರವರ್ತಿ ಚಂದ್ರಚುಡ್ ನಿಧಿ ಸುಬ್ಬಯ್ಯ ಹೀಗೆ ಹಲವಾರು ಜನರು ಬಿಗ್ಬಾಸ್ ಸೀಸನ್ ಎಂಟರ ಕೊನೆಯದಾಗಿ ಉಳಿದುಕೊಂಡಿದ್ದ ಅಭ್ಯರ್ಥಿಗಳು ಈಗಾಗಲೇ ಮನೆಗೆ ನಡೆಯಲು ಸಜ್ಜಾಗಿದ್ದಾರೆ. ಆದರೆ ಒಬ್ಬ ಸ್ಪರ್ಧಿಯ ಕುರಿತಂತೆ ವಾಹಿನಿಯವರು ಕಡೆಗಣಿಸುತ್ತಿದ್ದಾರೆ ಅವರು ಬರುವುದಿಲ್ಲ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡಾಡುತ್ತಿದ್ದವು.

ಅವರು ಇನ್ಯಾರೂ ಅಲ್ಲ ಎಲ್ಲರ ನೆಚ್ಚಿನ ಮಂಜುನಾಥ್ ಪಾವಗಡ. ಹೌದು ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಕುರಿತಂತೆ ಹಲವಾರು ಪ್ರಭುಗಳನ್ನು ತಮ್ಮ ವಾಗಿನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಮಂಜುನಾಥ್ ಪಾವಗಡ ರವರ ಕುರಿತಂತೆ ಯಾವ ಪ್ರೋಮೋ ಗಳನ್ನು ಬಿಡುಗಡೆ ಮಾಡಿರಲಿಲ್ಲ. ಇದಕ್ಕಾಗಿ ಅವರ ಅಭಿಮಾನಿಗಳು ಹಾಗೂ ಬಿಗ್ ಬಾಸ್ ನ ವೀಕ್ಷಕರು ಮಂಜೂರ್ ಅವರನ್ನು ಕಡೆಗಣಿಸುತ್ತಿದ್ದಾರೆ ಮತ್ತು ಮಂಜುರವರು ಬಾರಿ ಭಾಗವಹಿಸುತ್ತಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು.

ಆದರೆ ಸ್ವತಹ ಕಲರ್ಸ್ ಕನ್ನಡ ವಾಹಿನಿ ಅವರೇ ಈ ಕುರಿತಂತೆ ಸ್ಪಷ್ಟನೆ ನೀಡಿದ್ದು ಮಂಜುನಾಥ್ ಪಾವಗಡ ರವರು ಬಿಗ್ ಬಾಸ್ ನಲ್ಲಿ ವಾಪಸಾಗಲಿದ್ದಾರೆ ಎಂಬುದನ್ನು ಸಾಬೀತು ಮಾಡಿದೆ. ಹೌದು ಮಂಜುನಾಥ ಪಾವಗಡ ರವರು ಹೊಸ ಪ್ರೋಮೋ ಈಗ ವಾಹಿನಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ತಾಗಿ ವೈರಲ್ ಆಗುತ್ತಿದೆ ಅವರು ಕೂಡ ಮನೆಗೆ ಬರುವ ಬಗ್ಗೆ ಸ್ಪಷ್ಟನೆ ದೊರಕಿದೆ.

ಈಗ ಎಲ್ಲರನ್ನೂ ಬಿಡದಿಯ ಮನೆಯಿಂದ ರಲ್ಲಿ ಕ್ವಾರಂಟೈನ್ ಗೆ ಹಾಕಿದ್ದು ಅವಧಿ ಮುಗಿದ ನಂತರ ಮತ್ತೊಮ್ಮೆ ಎಲ್ಲರನ್ನೂ ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಮತ್ತೊಮ್ಮೆ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಒಳಗಡೆ ಕಳಿಸಲು ಸಜ್ಜಾಗಿದ್ದಾರೆ. ಇತಿಹಾಸದಲ್ಲೇ ಈ ರೀತಿ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತು ಮತ್ತೆ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಮತ್ತೆ ಪ್ರಾರಂಭವಾಗಿದ್ದು ಇದೇ ಮೊದಲು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Leave a Reply

Your email address will not be published. Required fields are marked *