ಮನೆಯಿಂದ ಇಷ್ಟು ವಾರಗಳ ಬಳಿಕ ಹೊರಬಂದ ಪ್ರಿಯಾಂಕಾ ರವರಿಗೆ ಸಿಕ್ಕ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಇನ್ನೇನು ಫೈನಲ್ ಹಂತವನ್ನು ತಲುಪುತ್ತಿದೆ. ಹಾಗೆಯೇ ಮನೆಯಲ್ಲಿರವ ಸದಸ್ಯರ ಸಂಖ್ಯೆಯೂ ಕಡಿಮೆಯಾಗುತ್ತಲೇ ಇದೆ. ಪ್ರತಿವಾರವೂ ಒಂದೊಂದು ಎಲಿಮಿನೇಶನ್ ನಡೆಯುತ್ತಲೇ ಇದೆ. ಈ ವಾರವೂ ನಡೆದ ಎಲಿಮಿನೇಶನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು ಪ್ರಿಯಾಂಕಾ ತಿಮ್ಮಯ್ಯ. ಶನಿವಾರ ಸೇಫ್ ಆದವರನ್ನು ಹೊರತುಪಡಿಸಿ ಭಾನುವಾರ 3 ಜನ ಸ್ಪರ್ಧಿಗಳು ಎಲಿಮಿನೇಶನ್ ಹಾಟ್ ಸೀಟ್ ನಲ್ಲಿದ್ದರು.

ಶುಭಾ ಪೂಂಜಾ, ಪ್ರಶಾಂತ್ ಸಂಬರ್ಗಿ, ಹಾಗೂ ಪ್ರಿಯಾಂಕಾ ತಿಮ್ಮಯ್ಯ. ಈ ನಾಲ್ವರಲ್ಲಿ ಪ್ರಿಯಾಂಕಾ ತಿಮ್ಮಯ್ಯ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ವೈಲ್ಡ್ ಹಾರ್ಡ್ ನಲ್ಲಿ ಬಂದ ಪ್ರಿಯಾಂಕಾ ಮೊದಮೊದಲು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದರೂ ಇಲ್ಲದಂತಿದ್ದರು. ಆದರೆ ಬಿಗ್ ಬಾಸ್ 2 ನೇ ಇನ್ನಿಂಗ್ಸ್ ಶುರುವಾದ ನಂತರ ಪ್ರಿಯಾಂಕ ಟಾಸ್ಕ್ ಗಳಲ್ಲಿಯೂ ಆಡುತ್ತಾ, ಇತರ ಸ್ಪರ್ಧಿಗಳೊಂದಿಗೂ ಬೆರೆಯುತ್ತಿದ್ದರು.

ಜೊತೆಗೆ ಚಕ್ರವರ್ತಿ ಹಾಗೂ ಪ್ರಿಯಾಂಕ ಅವರ ಮಾತಿನ ಗುದ್ದಾಟ ಮಾತ್ರ ಮುಂದುವರೆಯುತ್ತಲೇ ಇತ್ತು. ಕಳೆದ ವಾರ ಕಿಚ್ಚ ಸುದೀಪ್ ಅವರ ವಾರಾಂತ್ಯದ ಪಂಚಾಯ್ತಿಯಲ್ಲಿಯೂ ಕೂಡ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಇಂದು ಪ್ರಿಯಾಂಕಾ ಹೊರಬಂದಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಶುಭಾ ಪೂಂಜಾ ಅಥವಾ ಚಕ್ರವರ್ತಿ ಇಬ್ಬರಲ್ಲಿ ಯಾರಾದರೂ ಹೊರ ಹೊಗಬೇಕಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರಿಯಾಂಕಾ ತಿಮ್ಮಯ್ಯ ಅವರ ಸಂಭಾವನೆ ಬಗ್ಗೆಯೂ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ ಅವರಿಗೆ ವಾರಕ್ಕೆ 28 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಕಡಿಮೆಯಾಯ್ತು ಅಂತ ಅಭಿಮಾನಿಗಳ ವಾದ.

Leave a Reply

Your email address will not be published. Required fields are marked *