Neer Dose Karnataka
Take a fresh look at your lifestyle.

ಮತ್ತೊಮ್ಮೆ ಯಶ್ ರವರ ಮುಂದೆ ಮಂಡಿಯೂರಿದ ಪ್ರಭಾಸ್, ಎಷ್ಟೆಲ್ಲ ಮಾಡಿದರು ಪ್ರಭಾಸ್ ರವರ ವಿರುದ್ದ ಗೆದ್ದು ಬೀಗಿದ ಯಶ್. ಏನಾಯ್ತು ಗೊತ್ತೇ??

12

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ಮನದಟ್ಟಾಗಿ ರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ನೆಕ್ಸ್ಟ್ ಲೆವೆಲ್ ನಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವದಕ್ಕೆ ಮುಖ್ಯ ಕಾರಣ ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರಗಳು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಇನ್ನು ದಕ್ಷಿಣ ಭಾರತ ಚಿತ್ರರಂಗದ ಮಟ್ಟಿಗೆ ಬರುವುದಾದರೆ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ತೆಲುಗು ಚಿತ್ರರಂಗದಿಂದ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಕನ್ನಡ ಚಿತ್ರರಂಗದಿಂದ ರಾಕಿಂಗ್ ಸ್ಟಾರ್ ಯಶ್ ರವರು ಯಶಸ್ವಿಯಾಗಿದ್ದಾರೆ.

ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳ ನಂತರವೂ ಕೂಡ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸಾಹೋ ಚಿತ್ರ ಬಾಲಿವುಡ್ನಲ್ಲಿ ಬಿಡುಗಡೆಯಾಗಿ ನೂರು ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಇವರಿಬ್ಬರು ದಕ್ಷಿಣ ಭಾರತ ಚಿತ್ರರಂಗದ ಮಟ್ಟಿಗೆ ಹಿಂದಿ ಪ್ರಾಂತ್ಯದಲ್ಲಿ ಉತ್ತಮ ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ರೆಬಲ್ ಸ್ಟಾರ್ ಪ್ರಭಾಸ್ ರವರು ಮತ್ತೊಮ್ಮೆ ರಾಕಿಂಗ್ ಸ್ಟಾರ್ ಯಶ್ ರವರ ಮುಂದೆ ಮಂಡಿಯೂರಿ ದ್ದಾರೆ ಎಂದರೆ ನೀವು ನಂಬಲೇಬೇಕು.

ಹೌದು ಗೆಳೆಯರೆ ಮೊದಲ ಬಾರಿಗೆ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸಾಹೋ ಚಿತ್ರದ ಟೀಸರ್ ಬಿಡುಗಡೆಯಾಗಿ 44.5 ಮಿಲಿಯನ್ ವೀಕ್ಷಣೆಯನ್ನು 24 ಗಂಟೆಗಳಲ್ಲಿ ಪೂರೈಸಿತ್ತು. ಇನ್ನು ಇದಾದ ನಂತರ ಬಿಡುಗಡೆಯಾದಂತಹ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ 24 ಗಂಟೆಗಳಲ್ಲಿ 68.8 ಮಿಲಿಯನ್ ವೀಕ್ಷಣೆಯನ್ನು ಪೂರೈಸಿತ್ತು. ಇದಾದ ನಂತರ ಇದನ್ನು ಮಣಿಸಲು ರೆಬೆಲ್ ಸ್ಟಾರ್ ಪ್ರಭಾಸ್ ರವರ ಬಹು ನಿರೀಕ್ಷಿತ ರಾಧೇಶ್ಯಾಮ್ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಆದರೂ ಕೂಡ ಇದು 24ಗಂಟೆಯಲ್ಲಿ ಕೇವಲ 46.6 ಮಿಲಿಯನ್ ವೀಕ್ಷಣೆಯನ್ನು ಪೂರೈಸಲು ಶಕ್ತವಾಗಿತ್ತು. ಹೀಗಾಗಿ ಈ ರೇಸ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ರೆಬಲ್ ಸ್ಟಾರ್ ಪ್ರಭಾಸ್ ರವರು ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೇಲೆ ಕೂಡ ಇದೇ ರೀತಿಯ ಯಶಸ್ಸು ಸಾಧಿಸಲಿ ಎಂದು ಹಾರೈಸೋಣ.

Leave A Reply

Your email address will not be published.