ಧಾರವಾಹಿ ನೋಡದವರೂ ಕೂಡ ಕನ್ನಡತಿ ನೋಡುತ್ತಾರೆ, ಧಾರವಾಹಿ ಬಹಳ ಫೇಮಸ್ ಆಗಲು ಇರುವ ಆ ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಮಟ್ಟಿಗೆ ದಾರವಾಹಿಗಳು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಸಿನಿಮಾಗಳಿಗಿಂತ ಕನ್ನಡ ಪ್ರೇಕ್ಷಕರಿಗೆ ಧಾರವಾಹಿಗಳು ಸಾಕಷ್ಟು ಮನಸ್ಸಿಗೆ ಹತ್ತಿರವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಧಾರವಾಹಿಯನ್ನು ನೋಡಲು ಇಷ್ಟಪಡದ ವ್ಯಕ್ತಿಗಳು ಕೂಡ ಧಾರವಾಹಿಯನ್ನು ನೋಡುವಂತೆ ಮಾಡಿರುವುದು ನಾವು ಇಂದು ಹೇಳಲು ಹೊರಟಿರುವ ಧಾರವಾಹಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಕಿರುತೆರೆ ಲೋಕದ ಟಾಪ್ ದಾರವಾಹಿ ಎಂದರು ಕೂಡ ಇದನ್ನು ತಪ್ಪಾಗಲಾರದು. ಈ ದಾರವಾಹಿಯಿಂದಾಗಿಯೇ ಧಾರವಾಹಿಯನ್ನು ಇಷ್ಟಪಡದವರು ಕೂಡ ಈ ಧಾರವಾಹಿಯನ್ನು ನೋಡಲು ಪ್ರಾರಂಭಿಸಿದ್ದು. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಧಾರವಾಹಿ ಕುರಿತಂತೆ. ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರಾವಾಹಿಯಾಗಿ ಕೂಡ ಕಾಣಿಸಿಕೊಂಡಿದೆ. ಇನ್ನು ಈ ದಾರವಾಹಿಯಲ್ಲಿ ಭೂಮಿ ಹಾಗೂ ಹರ್ಷ ಪಾತ್ರದಲ್ಲಿ ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ದಾರಾವಾಹಿಯನ್ನು ಎಲ್ಲರೂ ಇಷ್ಟ ಪಡುವುದಕ್ಕೆ ಕೂಡ ಬಹಳಷ್ಟು ಕಾರಣಗಳಿವೆ.
ಮೊದಲಿಗೆ ಈ ಧಾರಾವಾಹಿಯಿಂದಾಗಿ ಎಲ್ಲರೂ ಕೂಡ ತಮ್ಮ ಕನ್ನಡವನ್ನು ಸಾಕಷ್ಟು ಇಂಪ್ರೂವ್ ಮಾಡಿಕೊಂಡಿದ್ದಾರೆ. ಈ ದಾರವಾಹಿಯಲ್ಲಿ ಯಾವುದೇ ಪಾತ್ರವೂ ಕೂಡ ಬೇಡ ಎನ್ನಿಸುವಂತದ್ದಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಓವರ್ ಡೈಲಾಗ್ ಗಳಿಲ್ಲ. ಕೆಲವು ದಾರವಾಹಿಗಳು ವರ್ಷಗಟ್ಟಲೆ ಎಳೆಯುತ್ತಿದ್ದರೆ ಈ ದಾರವಾಹಿ ಪ್ರಸಾರವಾಗುವ ಎಲ್ಲ ಕ್ಷಣಗಳು ಕೂಡ ಎಲ್ಲೂ ಕೂಡ ಬೋರು ಹೊಡೆಸದಂತೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಈ ದಾರವಾಹಿ ಹಲವಾರು ಟ್ವಿಸ್ಟ್ ಹಾಗೂ ಟರ್ನ್ ಗಳನ್ನು ಹೊಂದಿದ್ದು ಪ್ರೇಕ್ಷಕರಿಗೆ ಪ್ರತಿಯೊಂದು ದೃಶ್ಯವೂ ಕೂಡ ಕುತೂಹಲವನ್ನು ಮೂಡಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ರಂಜನಿ ರಾಘವನ್ ಅವರು ನಡೆಸಿಕೊಡುವ ಸಿರಿಗನ್ನಡಂ ಗೆಲ್ಗೆ ಕಾರ್ಯಕ್ರಮದಲ್ಲಿ ಕನ್ನಡದ ಪದಗಳ ಸರಿಯಾದ ಉಚ್ಚಾರಣೆ ಹಾಗೂ ಪದಪ್ರಯೋಗದ ಕುರಿತಂತೆ ಹೇಳುವ ಕಾರ್ಯಕ್ರಮ ಎಲ್ಲರಿಗೂ ಇಷ್ಟವಾಗುತ್ತದೆ.
Comments are closed.