ಇದಪ್ಪ ಅದೃಷ್ಟ ಅಂದ್ರೆ, ಫೇಮಸ್ ಆಗಿದ್ದೆ ಆಗಿದ್ದು, ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ವಸಂತ. ಒಂದು ಎಪಿಸೋಡಿಗೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ನಟಿ ಅಮೂಲ್ಯ ರವರು ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಬಿಟಿವಿ ವಾಹಿನಿ ಇಡೀ ರಾಜ್ಯವೇ ಸಂತೋಷಪಡುವ ವಿಚಾರ ಎಂಬುದಾಗಿ ಅನಗತ್ಯ ಪ್ರಚಾರ ಮಾಡಲು ನೋಡಿತ್ತು. ಇದನ್ನು ಟ್ರೋಲರ್ ಗಳು ನೋಡಿ ವಾಹಿನಿಯನ್ನು ಹಿಗ್ಗಾಮುಗ್ಗ ಉಗಿದಿತ್ತು. ಆದರೆ ಬಿಟಿವಿ ವಾಹಿನಿ ಇದನ್ನು ಇಷ್ಟಕ್ಕೆ ಬಿಡದೆ ನಿರೂಪಕಿ ದಿವ್ಯ ವಸಂತ ನಿರೂಪಣೆಯಲ್ಲಿ ಟ್ರೋಲ್ ತಲೆ ಹರಟೆ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮಕ್ಕೂ ಕೂಡ ಚೀಮಾರಿ ಬಿದ್ದಿತ್ತು.
ಆದರೆ ಇದು ದಿವ್ಯ ವಸಂತ್ ರವರಿಗೆ ಬೇರೆಯದೇ ರೀತಿಯಲ್ಲಿ ಪ್ರಚಾರವನ್ನು ತಂದುಕೊಟ್ಟಿತು. ಆದರೆ ಹೇಗಿದ್ದರೇನು ಪ್ರಚಾರ ಪ್ರಚಾರ ತಾನೇ ಎಂದು ದಿವ್ಯ ವಸಂತ್ ರವರು ಅದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಮತ್ತೊಂದು ಲೈವ್ ಕಾರ್ಯಕ್ರಮವನ್ನು ಕೂಡ ಮಾಡಿದರು. ಇನ್ನು ಈ ಕಾರ್ಯಕ್ರಮವನ್ನು ಕೂಡ ಕನ್ನಡಿಗರು ಲೈವ್ ನಲ್ಲಿ ಉಗಿದು ಉಪ್ಪು ಹಾಕಿದರು ಕೂಡ ಅದನ್ನು ವರೆಸಿಕೊಂಡು ತಾವೇ ಸರಿ ಎಂಬುದಾಗಿ ಬೀಗಿದ್ದರು.
ಇನ್ನು ಲೈವ್ ನಲ್ಲಿ ಕೂಡ ದಿವ್ಯ ವಸಂತ್ ರವರು ತಾನು ಹೇಳಿದ್ದೇ ಸರಿ ತಮ್ಮ ಕೆಲಸವೇ ಸರಿ ಎಂಬುದಾಗಿ ತಲೆಹರಟೆ ಹಾಗೂ ಅರ್ಥವಿಲ್ಲದ ಉತ್ತರಗಳನ್ನು ನೀಡಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಇನ್ನು ಇತ್ತೀಚೆಗಷ್ಟೆ ದಿವ್ಯ ವಸಂತ್ ರವರು ಬಿಟಿವಿ ಅವರೇ ದಿವ್ಯ ವಸಂತ್ ರವರ ಬಗ್ಗೆ ಹೊಗಳಿ ಬುರುಡೆ ಬಿಟ್ಟು ಬರೆದಿರುವ ಲೇಖನವೊಂದನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ದಿವ್ಯ ವಸಂತ್ ರವರು ನಿರೂಪಕಿಯಾಗಿ ಎಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ ಎಂಬ ಕುರಿತಂತೆ ವಿವರಗಳು ಕೂಡ ಬಿಡುಗಡೆಯಾಗಿದೆ.
ಹೌದು ಗೆಳೆಯರೇ ಈಗ ಫೇಮಸ್ ಆದಮೇಲೆ ಕೂಡ ದಿವ್ಯ ವಸಂತ್ ರವರು ಎಷ್ಟು ಸಂಪಾದನೆಯನ್ನು ಮಾಡುತ್ತಿದ್ದಾರೆ ಎಂಬುದರ ಕುರಿತಂತೆ ಕೂಡ ನಾವು ಹೇಳಲಿದ್ದೇವೆ. ಹೌದು ಗೆಳೆಯರೇ ಈ ಮೊದಲು ದಿವ್ಯ ವಸಂತ್ ರವರು ನಿರೂಪಕಿಯಾಗಿ ಬಿ ಟಿವಿ ವಾಹಿನಿಯಲ್ಲಿ 65 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಇನ್ನು ಈ ಮೊದಲು ಬಿಟಿವಿ ವಾಹಿನಿಯ ನಿರೂಪಕಿಯಾಗಿ ರುವ ರಾಧಾ ಹಿರೇಗೌಡರ್ ರವರು ಪಬ್ಲಿಕ್ ಟಿವಿಯಲ್ಲಿ 80 ಸಾವಿರ ರೂಪಾಯಿಗೆ ಕೆಲಸಮಾಡುತ್ತಿದ್ದರು. ಆದರೆ ಈಗ ಬಿಟಿವಿ ವಾಹಿನಿಯಲ್ಲಿ 1.50 ಲಕ್ಷ ರೂಪಾಯಿ ನೀಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಈಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕೂಡ ತಿಳಿದು ಬರುತ್ತಿದೆ.
ಇನ್ನು ಈಗ ಲೇಖನಿಯಲ್ಲಿ ಹೇಳಿರುವ ಪ್ರಕಾರ ದಿವ್ಯ ವಸಂತ್ ರವರಿಗೆ ಎಲ್ಲರಿಗಿಂತ ಹೆಚ್ಚು ಅಂದರೆ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಅತಿವೇಗವಾಗಿ ಪಡೆದುಕೊಂಡಂತಹ ನಿರೂಪಕಿಯಾಗಿ ಸಾಧನೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಇದನ್ನು ಹೇಗೆ ನಂಬೋದು ಹೇಗೆ ಬಿಡುವುದು ಎಂದು ನಿರ್ಧರಿಸುವುದು ಕಷ್ಟವಾದರೂ ಕೂಡ ಅವರು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಇನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಸಾಕಷ್ಟು ಫಾಲೋವರ್ಸ್ ಗಳು ಹೆಚ್ಚಾಗಿದ್ದು,
ಇದರಿಂದ ಬರುವ ಪ್ರಮೋಷನ್ ಗಳಿಂದ ಕೂಡ ಹಣವನ್ನು ಸಂಪಾದಿಸಲಿದ್ದು ಒಟ್ಟಾಗಿ ದಿವ್ಯ ವಸಂತ್ ರವರು 2ಲಕ್ಷಕ್ಕೂ ಅಧಿಕ ಸಂಪಾದನೆ ಮಾಡುವುದು ಖಚಿತವಾಗಿದೆಯಂತೆ. ಜನರಿಂದ ಟೀಕೆಗೆ ಒಳಗಾಗಿ ಹಣವನ್ನು ಸಂಪಾದಿಸುವ ವೃತ್ತಿ ಯಾರಿಗೆ ತಾನೆ ಬೇಕು ಸ್ನೇಹಿತರೆ ಆದರೆ ದಿವ್ಯ ವಸಂತ್ ರವರು ಅದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಂತಿಲ್ಲ. ಇಷ್ಟು ಮಾತ್ರವಲ್ಲದೆ ಆ ಲೇಖನಿಯಲ್ಲಿ ದಿವ್ಯ ವಸಂತ್ ರವರು ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಗೆದ್ದು ಬೀಗಿದ್ದಾರೆ ಎಂಬ ಬುರುಡೆಯನ್ನು ಬಿಡಲಾಗಿದೆ. ಇದನ್ನು ಹೋಗಬಹುದಷ್ಟೆ ಆದರೆ ಎಷ್ಟರ ಮಟ್ಟಿಗೆ ನಂಬುವುದು ಎಂಬುದು ನಿಮಗೆ ಬಿಟ್ಟಿದ್ದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.