ಅಪ್ಪು ಕನಸಿನ ಸಿನಿಮಾ ಗಂಧದ ಗುಡಿ ಟೀಸರ್ ನೋಡಿ ಪಬ್ಲಿಕ್ ಟಿವಿ ರಂಗಣ್ಣ ಅವರು ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಹಲವಾರು ವರ್ಷಗಳ ಕನಸು ಕನ್ನಡ ಹಾಗೂ ಕನ್ನಡ ಮಣ್ಣಿನ ಸೌಂದರ್ಯವನ್ನು ವಿಶ್ವಕ್ಕೆ ತೋರುವುದು. ಅದರ ಕನಸಿನ ಪ್ರಯತ್ನದ ಫಲವೇ ಗಂಧದಗುಡಿ ಡಾಕ್ಯುಮೆಂಟರಿ. ಪುನೀತ್ ರಾಜಕುಮಾರ್ ಅವರು ಕರ್ನಾಟಕ ವೈಲ್ಡ್ ಲೈಫ್ ಸೌಂದರ್ಯವನ್ನು ಎಲ್ಲರಿಗೂ ತೋರುವಂತಹ ಪ್ರಯತ್ನವನ್ನು ಇದೇ ನವೆಂಬರ್ 1ರಂದು ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದರು. ಇದಕ್ಕಾಗಿ ಪುನೀತ್ ರಾಜಕುಮಾರ್ ಅವರು ಪಟ್ಟಂತಹ ಒಂದು ವರ್ಷಗಳ ಕಾಲ ಸತತ ಪರಿಶ್ರಮದ ಫಲವಾಗಿ ಗಂಧದಗುಡಿ ಡಾಕ್ಯುಮೆಂಟರಿ ರೆಡಿಯಾಗಿತ್ತು.
ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡಿ ಅದಕ್ಕೊಂದು ಅರ್ಥಪೂರ್ಣ ಸಂದೇಶವನ್ನು ನೀಡುವ ಪ್ರಯತ್ನವನ್ನು ಹಮ್ಮಿಕೊಂಡಿದ್ದರು. ಆದರೆ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ಅಕಾಲಿಕವಾಗಿ ನಮ್ಮನ್ನು ಅಗಲಿ ಹೋಗುವುದರ ಮುಖೇನ ಅವರ ಕನಸು ಅರ್ಧದಲ್ಲಿಯೇ ನೆನೆಗುದಿಗೆ ಬಿದ್ದಿತ್ತು. ಆದರೆ ಅಪ್ಪು ಅವರ ಕನಸಿಗೆ ರೆಕ್ಕೆ ಪುಕ್ಕ ನೀಡಿ ಹಾರುವಂತೆ ಮಾಡಿದ್ದು ಅಶ್ವಿನಿ ಪುನೀತ್ ರಾಜಕುಮಾರ್. ಅಮೋಘವರ್ಷ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಗಂಧದಗುಡಿ ಡಾಕ್ಯುಮೆಂಟರಿ ಚಿತ್ರದ ಟೀಸರ್ ಅನ್ನು ಮೊನ್ನೆಯಷ್ಟೇ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಮಾಡಲಾಗಿತ್ತು.
ಇನ್ನು ಗಂಧದಗುಡಿ ಟೀಚರ್ ಅತಿಶೀಘ್ರದಲ್ಲೇ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದು ಸಿಎಂ ಬಸವರಾಜ ಬೊಮ್ಮಾಯಿ ಶಿವಣ್ಣ ಯಶ್ ದರ್ಶನ್ ಸುದೀಪ್ ಹೀಗೆ ಹಲವಾರು ಗಣ್ಯಾತಿಗಣ್ಯರ ಮೆಚ್ಚುಗೆಗೆ ಕಾರಣವಾಗಿತ್ತು. ಇನ್ನು ಹಿರಿಯ ಪತ್ರಕರ್ತರಾಗಿರುವ ಪಬ್ಲಿಕ್ ಟಿವಿ ರಂಗಣ್ಣನವರು ಇದು ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು ಕನ್ನಡ ಮಣ್ಣಿನ ಸೊಗಡನ್ನು ಜಗತ್ತಿಗೆ ತೋರಿಸುವುದು ಅವರ ಕನಸಾಗಿತ್ತು. ಆದರೆ ಇಂದು ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಪಡೆದಿರುವ ಯಶಸ್ಸು ನೋಡಿದರೆ ಖಂಡಿತವಾಗಿ ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಂತೋಷಪಡುತ್ತಿದ್ದರು ಎಂಬುದಾಗಿ ಹೇಳಿಕೊಂಡಿದ್ದಾರೆ.
Comments are closed.