ಕೊಹ್ಲಿ ಗೆ ಮೊದಲೇ ಬಂದಿತ್ತು ಕರೆ, ನಾಯಕನ ಸ್ಥಾನ ತ್ಯಜಿಸಲು ಸಮಯ ನೀಡಿದ್ದರು, ಆದರೆ ಕ್ಯಾರೇ ಎನ್ನದ ಕೊಹ್ಲಿ ಶಾಕ್. ಅಸಲಿಗೆ ನಡೆದದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಬಿಸಿಸಿಐ ವಿರಾಟ್ ಕೊಹ್ಲಿ ಅವರಿಗೆ ಬಿಗ್ ಶಾಕ್ ನೀಡಿದೆ ಎನ್ನಬಹುದು. 2021 ನೇ ವರ್ಷದ ಟಿ ಟ್ವೆಂಟಿ ವಿಶ್ವಕಪ್ ಬಳಿಕ ಟಿ ಟ್ವೆಂಟಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳಿಗೆ ತನ್ನ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಬುಧವಾರ ಮಹತ್ವದ ಸಭೆ ಕರೆದು ಏಕದಿನ ಟೆಸ್ಟ್ ಸರಣಿಯ ಪಂದ್ಯದ ನಾಯಕ ಸ್ಥಾನದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಭಾರತ ತಂಡದ ನಾಯಕ ಸ್ದಾನಕ್ಕೆ ರಾಜೀನಾಮೆ ನೀಡುವಂತೆ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿತ್ತು. ಅದಕ್ಕಾಗಿ ಅವರಿಗೆ 48 ಗಂಟೆಗಳ ಕಾಲ ಮಿತಿಯನ್ನು ಕೂಡ ನೀಡಲಾಗಿತ್ತು. ಆದರೆ ವಿರಾಟ್ ಕೊಹ್ಲಿ ಅವರು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದಾಗ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿರಾಟ್ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಉಪನಾಯಕರಾಗಿ ಕಾರ್ಯ ನಿರ್ವಹಿಸಿ ಅನುಭಪ ಪಡೆದಿರುವ ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾದ ನಾಯಕನನ್ನಾಗಿ ಆಯ್ಕೆ ಮಾಡಿ ಘೋಷಣೆ ಮಾಡಿದೆ. ಇದರಿಂದ ವಿರಾಟ್ ಕೊಹ್ಲಿ ಅವರಿಗೆ ಭಾರಿ ಮುಖಭಂಗವಾದಂತಾಗಿದೆ. ವಿರಾಟ್ ಕೊಹ್ಲಿ ಅವರು ಸ್ವತಃ ಅವರೇ ನಾನು ಒತ್ತಡ ಇರುವ ಕಾರಣ ಟಿ- ಟ್ವೆಂಟಿ ಕ್ರಿಕೆಟ್ ಪಂದ್ಯಕ್ಕೆ ರಾಜೀನಾಮೆ ನೀಡುತ್ತಿದ್ದು, ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ನಾಯಕನಾಗಿರುತ್ತೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದರು.
ಆದರೆ ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿರಾಟ್ ಕೊಹ್ಲಿ ಅವರನ್ನ ಏಕದಿನ ಪಂದ್ಯದ ನಾಯಕ ಸ್ಥಾನದಿಂದ ತೆಗೆದಾಕಿ ಆ ಜಾಗಕ್ಕೆ ರೋಹಿತ್ ಶರ್ಮಾ ಅವರನ್ನು ತಂದು ವಿರಾಟ್ ಕೊಹ್ಲಿ ಮತ್ತು ಅವರ ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿದೆ. ಈ ತಿಂಗಳ ಡಿಸೆಂಬರ್ 26 ರಿಂದ ಜನವರಿ 15 ರ ವರೆಗೆ ದಕ್ಷಿಣಾ ಆಫ್ರಿಕಾ ವಿರುದ್ದ ಸರಣಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ 30 ರವರೆಗೆ ದಕ್ಷಿಣಾ ಆಫ್ರಿಕಾದ ಗೌಟಿಂಗ್ ನ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ 7 ರವರೆಗೆ ಜೋಹಾನ್ ಬರ್ಗ್ಸ್ ನಲ್ಲಿ ನಡೆಯಲಿದ್ದು, ಮೂರನೇ ಸರಣಿ ಪಂದ್ಯವು ಕೇಪ್ ಟೌನ್ ನಲ್ಲಿ ಜನವರಿ 11 ರಿಂದ 15 ನೇ ವರೆಗೆ ನಡೆಯಲಿದೆ. ಒಟ್ಟು ಮೂರು ವಲಯಗಳಲ್ಲಿ ಈ ಸರಣಿ ಟೆಸ್ಟ್ ಪಂದ್ಯ ನಡೆಯಲಿದ್ದು ಮುಂದಿನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬದಲು ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನೂತನ ಏಕದಿನ ಪಂದ್ಯ ನಾಯಕರಾಗಿ ಆಯ್ಕೆ ಮಾಡುವ ಮೂಲಕ ಇನ್ಮುಂದೆ ಭಾರತ ತಂಡವನ್ನು ರೋಹಿತ್ ಶರ್ಮಾ ಅವರು ಮುನ್ನೆಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇನ್ಮುಂದೆ ವಿರಾಟ್ ಕೊಹ್ಲಿ ಟೆಸ್ಟ್ ಮ್ಯಾಚ್ ಗಳಿಗೆ ಮಾತ್ರ ನಾಯಕರಾಗಿ ಆಡಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಸರಿದಿ ಮುಕ್ತಾಯವಾಗುತ್ತಿದೆ ಎನ್ನಬಹುದಾಗಿದೆ.
Comments are closed.