Neer Dose Karnataka
Take a fresh look at your lifestyle.

ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವ ಯುವನಟಿ ನಟಿ ಜಯಶ್ರೀ ಆರಾಧ್ಯ ರವರ ಅಜ್ಜಿ ಯಾರು ಗೊತ್ತೇ?? ಅವರು ಕೂಡ ಒಂದು ಕಾಲದಲ್ಲಿ ಬೇಡಿಕೆಯ ಕಲಾವಿದೆ.

5

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಹಲವಾರು ಜೀವ ನಟ ಹಾಗೂ ನಟಿಯರು ಬಂದು ಹೋಗಿದ್ದಾರೆ. ಕೆಲವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದರು ಕೂಡ ಅತಿವೇಗವಾಗಿ ಜನರ ಮನಸ್ಸಿಂದ ಕಣ್ಮರೆಯಾಗುತ್ತಾರೆ. ಇನ್ನು ಕೆಲವರು ಕೆಲವೇ ಸಿನಿಮಾಗಳಲ್ಲಿ ನಡೆಸಿದ್ದರು ಕೂಡ ಅತಿವೇಗವಾಗಿ ಜನರ ಮನಸ್ಸಿಗೆ ಹತ್ತಿರವಾಗುತ್ತಾರೆ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಇತ್ತೀಚಿಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಒಂದೇ ಸಿನಿಮಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿಯೊಬ್ಬರ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಜಯಶ್ರೀ ಆರಾಧ್ಯ ರವರ ಕುರಿತಂತೆ. ಜಯಶ್ರೀ ಆರಾಧ್ಯ ರವರು ಪುಟ್ಟರಾಜು ಲವರ್ ಆಫ್ ಶಶಿಕಲಾ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಈ ಚಿತ್ರ 2018 ರಲ್ಲಿ ಬಿಡುಗಡೆಯಾಗಿತ್ತು. ಇದಾದನಂತರ ಜಯಶ್ರೀ ಅವರು ಇನ್ನೂ ಕೆಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸದ್ಯಕ್ಕೆ ಜಯಶ್ರೀ ಅವರು ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪಡ್ಡೆ ಹೈಕಳ ನಿದ್ದೆಯನ್ನು ಕೆಡಿಸಿದ್ದಾರೆ. ಇನ್ನು ಇವರ ಅಜ್ಜಿ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಹೆಸರನ್ನು ಮಾಡಿರುವ ಕಲಾವಿದೆ.

ಹೌದು ಗೆಳೆಯರೆ ಜಯಶ್ರೀ ಅವರ ಅಜ್ಜಿ ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಖ್ಯಾತ ಖಳ ನಾಯಕಿಯಾಗಿರುವ ಮಾರಿಮುತ್ತು ರವರು. ಮಾರಿಮುತ್ತು ರವರು ಉಪೇಂದ್ರ ನಟಿಸಿ ನಿರ್ದೇಶಿಸಿರುವ ಉಪೇಂದ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾರಿಮುತ್ತು ರವರ ನಿಜವಾದ ಹೆಸರು ಸರೋಜಮ್ಮ ಆಗಿದ್ದರೂ ಕೂಡ ಕನ್ನಡಿಗರು ಪ್ರೀತಿಯಿಂದ ಅವರನ್ನು ಕರೆಯುತ್ತಿದ್ದದ್ದು ಮಾರಿಮುತ್ತು ಹೆಸರಿನಿಂದ. ಇನ್ನು ಮಾರಿಮುತ್ತು ರವರು 2016 ರಲ್ಲಿ 60 ವರ್ಷ ವಯಸ್ಸಿನವರಿರಬೇಕಾದರೆ ಹೃದಯಾಘಾತದಿಂದಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ.

Leave A Reply

Your email address will not be published.