ತುಟಿಯ ಕುರಿತಂತೆ ಹೊಸ ಪಾಠ ಮಾಡಲು ಹೊರಟ ಲೇಡಿ ಸೂಪರ್ ಸ್ಟಾರ್ ನಯನತಾರ. ನಿಮಗೆ ಇದು ಪರ್ಫೆಕ್ಟ್ ಎಂದ ಫ್ಯಾನ್ಸ್. ವಿಷಯ ಏನ್ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವನ್ನು ತೆಗೆದುಕೊಂಡರೆ ನೀವು ಈಗಾಗಲೇ ನಟನೆಯ ಜೊತೆಗೆ ಬೇರೆ ವ್ಯವಹಾರಗಳನ್ನು ಕೂಡ ಮಾಡಿಕೊಂಡು ಕೋಟಿ ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿರುವ ಸೆಲೆಬ್ರಿಟಿಗಳನ್ನು ನೋಡಿರಬಹುದು. ಇಂದು ನಾವು ಹೇಳಲು ಹೊರಟಿರುವ ನಟಿ ಕೂಡ ಈಗ ಇದೇ ಮಾರ್ಗಕ್ಕೆ ಸೇರಲು ಹೊರಟಿದ್ದಾರೆ. ಹೌದು ಗೆಳೆಯರೇ ಇವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮುಖ್ಯವಾಗಿ ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ಅವರ ಕುರಿತಂತೆ. ಹೌದು ಗೆಳೆಯರೇ ನಯನತಾರಾ ರವರು ಈಗ ನಟನೆಯ ಜೊತೆಗೆ ಬಿಸಿನೆಸ್ ಮಾಡಲು ಕೂಡ ಸಿದ್ಧರಾಗಿದ್ದಾರೆ. ಇತ್ತೀಚಿಗಷ್ಟೇ ಇದರ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಮೂಲಕ ವಿವರಗಳನ್ನು ಹಂಚಿಕೊಂಡಿದ್ದಾರೆ. ಡರ್ಮಟಾಲಜಿಸ್ಟ್ ಡಾಕ್ಟರ್ ರಂಜಿತ್ ರಾಜನ ರವರ ಜೊತೆಗೆ ಸೇರಿ ದ ಲಿಪ್ ಬಾಮ್ ಕಂಪನಿ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಇದರ ಕುರಿತಂತೆ ಮಾತನಾಡುತ್ತಾ ಈ ಕಂಪನಿಯ ಮೂಲಕ ನಾವು ನೂರು ರೀತಿಯ ಲಿಪ್ ಬಾಮ್ ಗಳನ್ನು ಮಾರುಕಟ್ಟೆಗೆ ತರಲಿದ್ದೇವೆ. ನಿಮ್ಮ ತುಟಿ ಎಷ್ಟೇ ಕಟು ವಾಗಿರಲಿ ಅಥವಾ ಬೇರೆ ಯಾವುದೇ ಸಮಸ್ಯೆಗಳಲ್ಲಿ ಕೂಡ ಇದ್ದರು ಅದನ್ನು ನಮ್ಮ ಸಂಸ್ಥೆಯ ಲಿಪ್ ಬಾಮ್ ಸರಿ ಪಡಿಸಲಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ನೀವು ಕೂಡ ಈ ಲಿಪ್ ಬಾಮ್ ಗಳನ್ನು ಉಪಯೋಗಿಸಬಹುದಾಗಿದೆ. ತುಟಿಯ ಆರೋಗ್ಯವನ್ನು ಕಾಪಾಡಲು ಲಿಪ್ ಬಾಮ್ ಅತ್ಯವಶ್ಯಕ ವಾಗಿದೆ. ಇನ್ನು ನಯನತಾರ ರವರು ತಮ್ಮ ಮುಂದಿನ ಚಿತ್ರಗಳ ಕುರಿತಂತೆ ಶೀಘ್ರದಲ್ಲಿ ಹೇಳುವುದಾಗಿ ಹೇಳಿದ್ದಾರೆ. ಇನ್ನು ಈ ಲಿಪ್ ಬಾಮ್ ಗಳಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸಲಾಗಿದ್ದು ಯಾವುದೇ ಅಪಾಯಕಾರಿ ಅಂಶಗಳಿಲ್ಲ ಎಂಬುದಾಗಿ ಕೂಡಾ ಭರವಸೆಯನ್ನು ನೀಡಿದ್ದಾರೆ. ಈ ಪ್ರಾಡಕ್ಟ್ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ಹಂಚಿಕೊಳ್ಳಿ.
Comments are closed.