ಎಲ್ಲರಿಗೂ ಒಂದೇ ರೂಲ್ಸ್ ಹಾಕಿದ ಡಿ ಬಾಸ್ ದರ್ಶನ್, ರಚಿತಾ ಕೂಡ ಈ ರೂಲ್ಸ್ ಪಾಲಿಸಲೇಬೇಕು. ವಿಷಯ ಏನ್ ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ ಯಾವುದು ಎಂಬುದು ಅಭಿಮಾನಿಗಳಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಆದರೆ ಈಗ ಗಣೇಶನ ಹಬ್ಬದ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ ಕ್ರಾಂತಿ ಚಿತ್ರದ ಘೋಷಣೆ ನಡೆದಿತ್ತು.
ಯಜಮಾನ ಚಿತ್ರದ ಮತ್ತೊಮ್ಮೆ ಕ್ರಾಂತಿ ಚಿತ್ರಕ್ಕೆ ಒಂದಾಗಿದೆ. ಇನ್ನು ಬುಲ್ಬುಲ್ ಹಾಗೂ ಅಂಬರೀಶ ಚಿತ್ರದ ನಂತರ ರಚಿತಾರಾಮ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕ್ರಾಂತಿ ಚಿತ್ರದ ಮೂಲಕ ಮತ್ತೊಮ್ಮೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದ ನಿರ್ದೇಶಕರಾಗಿ ಸಂಗೀತ ನಿರ್ದೇಶಕ ಹರಿಕೃಷ್ಣ ರವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಚಿತ್ರದ ಸೆಟ್ ನಲ್ಲಿ ಒಂದು ರೂಲ್ಸ್ ಮಾಡಲಾಗಿದ್ದು ನಿರ್ಮಾಪಕ ನಿರ್ದೇಶಕರು ಸೇರಿದಂತೆ ನಾಯಕನಟ ಹಾಗೂ ನಾಯಕಿ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕೂಡ ಈ ರೂಲ್ಸ್ ನ್ನು ಫಾಲೋ ಮಾಡಬೇಕಂತೆ. ಹಾಗಿದ್ದರೆ ಆ ರೂಲ್ಸ್ ಯಾವುದು ಎಂಬುದರ ಹೇಳಿದಂತೆ ನಾವು ನಿಮಗೆ ಹೇಳುತ್ತೇವೆ ಬನ್ನಿ.
ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಮೊಬೈಲ್ ಫೋನ್ ತರುವಂತಿಲ್ಲ ವಂತೆ. ಒಂದು ವೇಳೆ ಚಿತ್ರದ ಫೋಟೋ ಹಾಗೂ ಚಿತ್ರೀಕರಣದ ದೃಶ್ಯಗಳು ಲೀಕ್ ಚಿತ್ರಕ್ಕೆ ನಷ್ಟ ಆಗುತ್ತದೆ ಎಂಬ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಂಡಿದ್ದು ದರ್ಶನ್ ಹಾಗೂ ರಚಿತರಾಮ್ ಕೂಡ ಇದಕ್ಕೆ ಒಪ್ಪಿದ್ದಾರಂತೆ. ಇನ್ನು ಚಿತ್ರ ಮುಗಿಯುವರೆಗೂ ಕೂಡ ಯಾವುದೇ ಸಂದರ್ಶನಗಳಲ್ಲಿ ಚಿತ್ರತಂಡದವರು ಕಾಣಬಾರದು ಎಂಬ ನಿಯಮವನ್ನು ಕೂಡ ಹಾಕಿಕೊಳ್ಳಲಾಗಿದೆಯಂತೆ. ಈ ಎಲ್ಲಾ ನಿಯಮಗಳನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಪಾಲಿಸುತ್ತಿದ್ದಾರೆ.
Comments are closed.