ಸಂಭಾವನೆ ವಿಷಯದಲ್ಲಿ ಕೊನೆಗೂ ಅನುಶ್ರೀ ರವರನ್ನು ಮೀರಿಸಿದ ಮೊದಲ ಆಂಕರ್, ಅನುಪಮಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆಯಲ್ಲಿ ನಡೆಯಲಿರುವ ರಿಯಾಲಿಟಿ ಶೋಗಳ ಮೆರಗನ್ನು ಹೆಚ್ಚಿಸುವುವರಾರೆಂದರೇ ಅದು ಆ ಶೋಗಳ ನಿರೂಪಕರು. ಕನ್ನಡದ ಪಾಲಿಗೆ ಅತ್ಯಂತ ಯಶಸ್ವಿ ನಿರೂಪಕರೆಂದರೇ ಅದು ನಟಿ, ನಿರೂಪಕಿ, ಅನುಶ್ರೀ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಪ್ರಮುಖ ರಿಯಾಲಿಟಿ ಶೋಗಳು, ಇವೆಂಟ್ ಗಳು, ಅವಾರ್ಡ್ ಫಂಕ್ಷನ್ ಗಳಲ್ಲಿ ಅನುಶ್ರೀಯವರದ್ದೇ ಹವಾ. ಕನ್ನಡದಲ್ಲಿ ಅನುಶ್ರೀಯವರ ನಿರೂಪಣೆಗೆ ಸರಿಸಮಾನರಾಗಿ ಯಾರು ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೇ ಈಗ ಅನುಶ್ರೀಯವರನ್ನೆ ಸಂಭಾವನೆಯಲ್ಲಿ ಮತ್ತೊಬ್ಬ ಕನ್ನಡದ ನಿರೂಪಕಿ ಸೈಡ್ ಹೊಡೆದಿದ್ದಾರೆ.
ಹೌದು ಅಕ್ಕ ಧಾರಾವಾಹಿಯ ಮೂಲಕ ದ್ವಿಪಾತ್ರದಲ್ಲಿ ಕನ್ನಡದ ಜನರಿಗೆ ಪರಿಚಯವಾಗಿದ್ದ ನಟಿ ಅನುಪಮಗೌಡ ನಂತರ ಬಿಗ್ ಬಾಸ್ ಮನೆಗೆ ಸಹ ಹೋಗಿದ್ದರು. ನಂತರ ಕೆಲವು ಸಿನಿಮಾಗಳಲ್ಲಿ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದ ಅನುಪಮಾ ಗೌಡ, ನಂತರದ ದಿನಗಳಲ್ಲಿ ರಿಯಾಲಿಟಿ ಶೋ ಗಳಲ್ಲಿ ನಿರೂಪಕರಾದರು. ರಾಜಾ-ರಾಣಿ ರಿಯಾಲಿಟಿ ಶೋನ ನಿರೂಪಣೆ ಅನುಪಮಾ ಗೌಡರಿಗೆ ಭರ್ಜರಿ ಹೆಸರು ತಂದುಕೊಟ್ಟಿತು.
ಸದ್ಯ ಅಮ್ಮ ಮಕ್ಕಳ ರಿಯಾಲಿಟಿ ಶೋ ಆದ ನನ್ನಮ್ಮ ಸೂಪರ್ ಸ್ಟಾರ್ ಗೂ ಸಹ ನಿರೂಪಣೆಯ ಜವಾಬ್ದಾರಿಯನ್ನ ಅನುಪಮಾ ಗೌಡರವರೇ ವಹಿಸಿಕೊಂಡಿದ್ದಾರೆ. ಈ ಶೋನ ನಿರ್ಮಾಪಕರಾಗಿ ಸೃಜನ್ ಲೋಕೇಶ್ ರವರಿದ್ದು, ಈ ಭಾರಿ ನಿರೂಪಣೆಗಾಗಿ ಅನುಪಮಾ ಗೌಡರವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹೌದು ಸೃಜನ್ ಲೋಕೇಶ್ ಮೊದಲಿನಿಂದಲೂ ಹೊಸ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಅನುಪಮಾ ಗೌಡರವರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆಂದು ತಿಳಿದು ಬಂದಿದೆ. ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಇತಿಹಾಸದಲ್ಲಿಯೇ ಇದು ಭಾರೀ ದೊಡ್ಡ ಮೊತ್ತದ ಸಂಭಾವನೆ ಎಂದು ಕರೆಸಿಕೊಳ್ಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.