ಕೊನೆಗೂ ಸಿಕ್ಕೇ ಬಿಡ್ತೆ ಕಾರಣ, ಕನ್ನಡತಿ ಧಾರವಾಹಿ ಬಿಟ್ಟು ಸಾನಿಯಾ ಏನು ಮಾಡುತ್ತಿದ್ದಾರೆ ಗೊತ್ತಾ?? ಇದಕ್ಕೇನಾ ಧಾರವಾಹಿ ಬಿಟ್ಟದ್ದು??
ನಮಸ್ಕಾರ ಸ್ನೇಹಿತರೇ ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಯಾವುದು ಎಂದು ಹೇಳುವುದೇ ಕಷ್ಟ. ಯಾಕಂದ್ರೆ ಒಳೇಳ್ಯದು ಕೆಟ್ಟದ್ದು ಎರಡೂ ನಮ್ಮ ಜೊತೆಯೇ ಇರುತ್ತವೆ ಎಂದು ತೋರಿಸುವಂಥ ಧಾರಾವಾಹಿ ಇದಾಗಿದ್ದು, ಮುಖ್ಯಪ್ರಾತ್ರಧಾರಿ ಭುಮಿಯಿಂದ ಹಿಡಿದು ವಿಲನ್ ರೋಲ್ ಮಾಡುತ್ತಿತ್ತಿರುವ ಸಾನಿಯಾ ವರೆಗೂ ಅಷ್ಟೇ ಪ್ರಾಮುಖ್ಯತೆ ಕೊಡಲಾಗಿದೆ. ಇದಕ್ಕೆ ಆಯಾ ಪಾತ್ರಧಾರಿಗಳು ತಮ್ಮ ರೋಲ್ ಗಳನ್ನು ಅತ್ಯಂತ ಚೆನ್ನಾಗಿ ನಿಭಾಯಿಸುತ್ತಿರುವುದೂ ಕೂಡ ಒಂದು ಕಾರಣ.
ಕನ್ನಡತಿಯಲ್ಲಿ ಭುಮಿಯನ್ನು ಇಷ್ಟ ಪಟ್ಟಷ್ಟೇ, ಹರ್ಷನನ್ನು ಹೊಗಳಿದಷ್ಟೇ, ರತ್ನಮಾಲಾರನ್ನು ಪ್ರೀತಿಸಿದಷ್ಟೇ ಸಾನಿಯಾ ಪಾತ್ರ ಕೂಡ ಅತ್ಯಂತ ಮೆಚ್ಚುಗೆ ಪಡೆದುಕೊಂಡಿದೆ. ಈ ಪಾತ್ರವನ್ನು ಇಷ್ಟು ದಿನಗಳ ಕಾಲ ನಿಭಾಯಿಸಿದ್ದ ಮುದ್ದಾದ ನಟಿ ರಮೋಲಾ, ಆಕೆ ಬೇಕಾದ್ದನ್ನು ಗಳಿಸುವ ಸ್ಪಿರಿಟ್ ನಿಂದಾಗಿಯೇ ಹೆಚ್ಚು ಫೇಮಸ್ ಆಗಿದ್ಲು. ನೆಗೆಟಿವ್ ಶೇಡ್ ನ್ನೂ ಜನ ಇಷ್ಟಪಡುವಷ್ಟು ರಮೋಲಾ ಸಾನಿಯಾಆಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ನಟಿ ರಮೋಲಾ ಕನ್ನಡತಿ ಧಾರಾವಾಹಿಗೆ ಸಾನಿಯಾ ಪಾತ್ರಕ್ಕೆ ಬೈ ಬೈ ಹೇಳಿದ್ದಾರೆ.
ಹೌದು ರಮೋಲಾ ಧಾರಾವಾಹಿ ಅಭಿನಯ ಬಿಟ್ಟಿದ್ದು ಆ ಜಾಗಕ್ಕೆ ಬೇರೆ ನಟಿ ಈಗಾಗಲೇ ನಟಿಸುತ್ತಿರುವುದು ಕನ್ನಡತಿ ಎಪಿಸೋಡ್ ನೋಡುತ್ತಿರುವ ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ಅಂದಹಾಗೆ ನಟಿ ರಮೋಲಾ ಇದ್ದಕ್ಕಿದ್ದ ಹಾಗೆ ಧಾರಾವಾಹಿ ಬಿಟ್ಟಿದ್ಡೇಕೆ ಎನ್ನುವುದೇ ಹಲವರ ಪ್ರಶ್ನೆಯಾಗಿತ್ತು. ಇದೀಗ ಅದಕ್ಕೆಲ್ಲ ಉತ್ತರ ನೀಡಿರುವ ನಟಿ ರಮೋಲಾ ನನ್ನ ಈ ಹಿಂದಿನ ಮೂರು ಸಿನಿಮಾಗಳು ಇನ್ನೂ ರಿಲೀಸ್ ಆಗಿಲ್ಲ, ನಾನು ಫ್ಯಾಷನ್ ಡಿಸೈನಿಂಗ್ ಅಭ್ಯಾಸ ಮಾಡುತ್ತಿದ್ದು, ಧಾರಾವಾಹಿಯಲ್ಲಿ ನಟಿಸುತ್ತಿರುವ ಕಾರಣ ಕಾಲೇಜಿಗೆ ಹೋಗಲು ಸಮಯವೇ ಸಿಗುತ್ತಿರಲಿಲ್ಲ. ಹೀಗಾಗಿ ಸದ್ಯಕ್ಕೆ ಸೀರಿಯಲ್ ನಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Comments are closed.