ಹೊಸ ವರ್ಷದ ದಿನ ವಿವಿಧ ಪೋಸ್ ಕೊಟ್ಟ ಕೊಡಗಿನ ಕುವರಿ ರಶ್ಮಿಕ ಮಂದಣ್ಣ, ನೋಡಿದರೆ ಲವ್ ಆಗೋದು ಪಕ್ಕ. ಹೇಗಿವೆ ಕ್ಯೂಟ್ ಫೋಟೋಗಳು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರು ಈಗಾಗಲೇ ಕನ್ನಡ ಚಿತ್ರರಂಗದಿಂದ ತಮ್ಮ ನಟನೆಯ ವೃತ್ತಿಯನ್ನು ಪ್ರಾರಂಭಿಸಿ ದೇಶದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬಹುಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ 2021 ವರ್ಷ ಅವರಿಗೆ ಸಾಕಷ್ಟು ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಬಂದಿತ್ತು ಎಂದು ಹೇಳಬಹುದಾಗಿದೆ.
ಯಾಕೆಂದರೆ ರಶ್ಮಿಕ ಮಂದಣ್ಣ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಮೊದಲ ಭಾಗ ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ 2021 ವರ್ಷದ ಅತ್ಯಂತ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹೀಗಾಗಿ ಈಗಾಗಲೇ ಪ್ಯಾನ್ ಇಂಡಿಯಾ ನಾಯಕಿಯಾಗಿ ಕೂಡ ವಿಭಿನ್ನ ಪಾತ್ರದಲ್ಲಿ ರಶ್ಮಿಕ ಮಂದಣ್ಣ ನವರು ಯಶಸ್ಸನ್ನು ಪಡೆದಿದ್ದಾರೆ. ಇನ್ನು ನಿಮಗೆ ತಿಳಿದಿರುವಂತೆ ಈಗಾಗಲೇ ನಾವು ಹೊಸವರ್ಷವನ್ನು ಪ್ರವೇಶಿಸಿದ್ದೇವೆ. ಈ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ನವರು ಹೇಗೆ ಹೊಸವರ್ಷವನ್ನು ಆಚರಿಸಿದ್ದಾರೆ ಗೊತ್ತಾ ಬನ್ನಿ ನಾವು ನಿಮಗೆ ಹೇಳುತ್ತೇವೆ.
ಹೌದು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕ ಮಂದಣ್ಣ ನವರು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಕ್ಯೂಟ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಪೋಸ್ಟ್ ಹಾಗು ಪೋಸ್ಟಿನಲ್ಲಿ ಬರೆದುಕೊಂಡಿರುವ ಕ್ಯಾಪ್ಟನ್ ಕೂಡ ಸಾಕಷ್ಟು ಕಚಕುಳಿ ನೀಡುವಂತಿತ್ತು. 2022 ವರ್ಷವೂ ಕೂಡ ಅವರ ಸಿನಿ ವೃತ್ತಿಯ ಜೀವನದ ದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸು ಅವರಿಗೆ ತರುವ ಎಲ್ಲಾ ಸಾಧ್ಯತೆಗಳಿವೆ ಯಾಕೆಂದರೆ ಈಗಾಗಲೇ ಅವರು ಮೂರು ದೊಡ್ಡ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ಮಿಷನ್ ಮಜ್ನು ಚಿತ್ರ ಚಿತ್ರೀಕರಣವನ್ನು ಪೂರೈಸಿದೆ. ರಶ್ಮಿಕ ಮಂದಣ್ಣ ನವರ ಸಿನಿ ಜರ್ನಿಯಲ್ಲಿ ಇನ್ನಷ್ಟು ದೊಡ್ಡ ದೊಡ್ಡ ಸಿನಿಮಾಗಳು ಅವರಿಗೆ ಸಿಗಲಿ ಎಂಬುದಾಗಿ ಹಾರೈಸೋಣ.
Comments are closed.