ಪುನೀತ್ ರವರ ವಿಚಾರವಾಗಿ ಮೊದಲ ಬಾರಿಗೆ ಮಾತನಾಡಿದ ನಟಿ ಪ್ರೇಮ, ಹೇಳಿದ್ದೇನು ಗೊತ್ತೇ?? ಪ್ರೇಮ ಅವರ ಕನಸ್ಸು ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ಪುನೀತ್ ರಾಜಕುಮಾರ್ ಅವರನ್ನು ನಾವು ಕೇವಲ 46 ವರ್ಷಕ್ಕೆ ಕಳೆದುಕೊಳ್ಳುತ್ತೇವೆ ಎಂಬ ಕೆಟ್ಟ ಕನಸು ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಅನರ್ಘ್ಯ ರತ್ನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಬ್ಬರು ಆಗುತ್ತಾರೆ. ಅವರ ಕೊಡುಗೆ ಕನ್ನಡ ಚಿತ್ರರಂಗ ಎಂದು ಕೂಡ ಮರೆಯುವುದಿಲ್ಲ.
ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವಲ್ಲಿ ಕೂಡ ಪುನೀತ್ ರಾಜಕುಮಾರ್ ಅವರು ಮುಂಚೂಣಿಯಲ್ಲಿ ಇರುತ್ತಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಯಾರೇ ಕಷ್ಟದಲ್ಲಿದ್ದರೂ ಕೂಡ ಮುಂದೆ ನಿಂತು ಸಹಾಯ ಮಾಡುತ್ತಿದ್ದರು ಅದರ ಪ್ರತಿಫಲವಾಗಿ ಪ್ರಚಾರವನ್ನು ಕೂಡ ಪಡೆಯುತ್ತಿರಲಿಲ್ಲ. ಇಷ್ಟೊಂದು ಚಿನ್ನದ ಮನಸ್ಸಿನ ವ್ಯಕ್ತಿತ್ವವನ್ನು ಹೊಂದಿರುವ ಮನುಷ್ಯನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂಬುದು ಮನಸ್ಸಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಇತ್ತೀಚಿಗಷ್ಟೇ ನಟಿ ಪ್ರೇಮ ಅವರು ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.
ಹಾಗಿದ್ದರೆ ನಟಿ ಪ್ರೇಮ ರವರು ಪುನೀತ್ ರಾಜಕುಮಾರ್ ಅವರ ಕುರಿತಂತೆ ಏನು ಹೇಳಿದ್ದಾರೆ ಎಂಬ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ. ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಳ್ಳುತ್ತಾ ಪ್ರೇಮ ರವರು ಅಪ್ಪು ಮೊದಲು ಓಂ ಚಿತ್ರದ ಚಿತ್ರೀಕರಣಕ್ಕೆ ಸೆಟ್ ಗೆ ಬರುತ್ತಿದ್ದರು. ಓಂ ಚಿತ್ರ ಅವರದ್ದೇ ಕುಟುಂಬದ ಬ್ಯಾನರ್ ನಲ್ಲಿ ಮೂಡಿ ಬರುತ್ತಿತ್ತು. ಚಿತ್ರವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ. ಇಷ್ಟೇ ಮಾತ್ರವಲ್ಲದೆ ಪುನೀತ್ ರಾಜಕುಮಾರ್ ರವರ ಜೊತೆಗೆ ಡ್ಯಾನ್ಸ್ ಮಾಡಬೇಕೆಂಬ ಕನಸು ಕನಸಾಗಿಯೇ ಉಳಿದಿದೆ ಎಂಬುದಾಗಿ ಕೂಡಾ ಭಾವುಕರಾಗಿ ಹೇಳುತ್ತಾರೆ. ಆದರೆ ಅವರು ನಮ್ಮ ಮನಸ್ಸಿನಲ್ಲಿ ಸದಾಕಾಲ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂಬುದಾಗಿ ಪ್ರೇಮ ಅವರು ಮಾಧ್ಯಮಕ್ಕೆ ಹೇಳಿದ್ದಾರೆ.
Comments are closed.