ಶುಭ ಪೂಂಜಾ ದೊಡ್ಡ ದೊಡ್ಡ ಐಷಾರಾಮಿ ರೆಸಾರ್ಟ್ ಗಳಲ್ಲಿ ಮದುವೆಯಾಗದೆ ಆ ಮನೆಯಲ್ಲಿಯೇ ಮದುವೆಯಾಗಿದ್ದು ಯಾಕೆ ಗೊತ್ತೇ? ಆ ಮನೆಯ ವಿಶೇಷತೆ ಏನು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಮತ್ತು ಕಿರುತೆರೆಯ ನಟ ನಟಿಯರಲ್ಲಿ ಮದುವೆ ಕಾರ್ಯಕ್ರಮ ಎನ್ನುವುದು ಸಾಕಷ್ಟು ದೊಡ್ಡಮಟ್ಟದಲ್ಲಿ ಸಾಲುಸಾಲಾಗಿ ಜರುಗುತ್ತಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಈ ಹಿಂದೆ ಲಾಕ್ಡೌನ್ ನಲ್ಲಿ ಸಾಲು ಸಾಲು ಮದುವೆಯಾಗಿರುವುದು ನೀವೆಲ್ಲ ನೋಡಿದ್ದೀರಿ ಹಾಗು ಕೇಳಿದ್ದೀರಿ. ಈಗ ಮದುವೆ ಆಗಿರುವುದು ನಮ್ಮ ಬಿಗ್ ಬಾಸ್ ಖ್ಯಾತಿಯ ಶುಭಪೂಂಜಾ ರವರು.

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ನಟಿಯಾಗಿ ಪರಿಚಿತರಾಗಿದ್ದ ಶುಭ ಪೂಂಜಾ ಅವರು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಹಲವಾರು ಸಮಯಗಳ ಕಾಲ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು ಶುಭ ಪೂಂಜ ಅವರು ಮತ್ತೆ ಕಾಣಿಸಿಕೊಂಡಿದ್ದು ಕನ್ನಡದ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ನಲ್ಲಿ. ಇದಾದ ನಂತರ ಇತ್ತೀಚಿಗೆ ಬಹುಕಾಲದ ಗೆಳೆಯ ಆಗಿರುವ ಸುಮಂತ ಮಹಾಬಲ ಅವರನ್ನು ಮದುವೆಯಾಗುತ್ತಾರೆ.

ಈಗ ಎಲ್ಲರಿಗೂ ಇರುವ ಕುತೂಹಲವೆಂದರೆ ಇಷ್ಟೊಂದು ಸರಳವಾಗಿ ಸುದ್ದಿ ಇಲ್ಲದೆ ಶುಭಪುಂಜ ರವರು ಮದುವೆಯಾಗಿರುವುದು ಎಲ್ಲಿ ಎನ್ನುವುದಾಗಿ. ಅದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಶುಭಪೂಂಜಾ ರವರು ಮದುವೆಯಾಗಿದ್ದು ತಮ್ಮ ಸ್ವ ಗ್ರಾಮದಲ್ಲಿರುವ ಅಜ್ಜಿ ಹಾಗೂ ಹಿರಿಯರು ಬಾಳಿದ ಮನೆಯಲ್ಲಿ. ಈ ಮನೆ ಎನ್ನುವುದು ಶುಭಪುಂಜಾ ರವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು ಇಬ್ಬರ ಮದುವೆ ಕೂಡ ಇಲ್ಲೇ ನಡೆಯಬೇಕೆಂಬುದು ಅವರ ಆಸೆಯಾಗಿತ್ತು. ಹೀಗಾಗಿ ಯಾವುದೇ ಆಡಂಬರವಿಲ್ಲದೆ ತಮ್ಮ ಹಿರಿಯರ ಮನೆಯಲ್ಲಿ ಅವರಿಲ್ಲದೆ ಇದ್ದರೂ ಕೂಡ ಅವರ ಆಶೀರ್ವಾದ ಮೇರೆಗೆ ಮದುವೆಯಾಗಿದ್ದಾರೆ. ನವದಂಪತಿಗಳಿಗೆ ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಶುಭಹಾರೈಸ ಬಹುದಾಗಿದೆ.

Leave a Reply

Your email address will not be published. Required fields are marked *