Neer Dose Karnataka
Take a fresh look at your lifestyle.

ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರಿಗೆ ಬೈಕ್ ನಲ್ಲಿ ಅಪಘಾತ, ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಈ ಹಿಂದೆ ನಟಿ ಆಗಿದ್ದವರು ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಪಾವಗಡ ಮಂಜುರವರ ಜೊತೆಗೆ ಸಾಕಷ್ಟು ಒಡನಾಟದಲ್ಲಿದ್ದ ಇವರು ಈ ಕಾರಣಕ್ಕಾಗಿಯೇ ಕನ್ನಡದ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ನಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಜನಪ್ರಿಯತೆ ಎನ್ನುವುದಕ್ಕಿಂತ ಹೆಚ್ಚಾಗಿ ಸುದ್ದಿಯನ್ನು ಪಡೆದುಕೊಂಡಿದ್ದರು ಎಂದರೆ ತಪ್ಪಾಗಲಾರದು.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಕೂಡ ಹಲವಾರು ಕಾರಣಗಳಿಗೆ ಸುದ್ದಿಯಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಮಂಜು ಪಾವಗಡ ರವರ ಜೊತೆಗೆ ಆಗಾಗ ಕಾಣಿಸಿಕೊಂಡು ಅವರನ್ನು ಮದುವೆಯಾಗುತ್ತಾರೆ ಎಂಬ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಆದರೆ ಇವೆಲ್ಲ ವಿಚಾರಗಳು ಕೇವಲ ಸುದ್ದಿಯಲ್ಲಿಯೇ ಸುದ್ದಿಯಾಗಿತ್ತು. ಯಾವುದು ಕೂಡ ನಿಜವಾಗಿರಲಿಲ್ಲ. ಇತ್ತೀಚಿಗಷ್ಟೇ ಬಾರೊಂದರಲ್ಲಿ ಕುಡಿದುಕೊಂಡು ಹೊರಗೆ ಬಂದಾಗ ಕೂಡ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದರು. ಈಗ ಇದೇ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರು ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.

ಅದೇನೆಂದರೆ ದಿವ್ಯ ಸುರೇಶ ರವರು ಸ್ಕೂಟರ್ ನಲ್ಲಿ ಹೋಗುತ್ತಿರಬೇಕಾದರೆ ಅಪ’ಘಾತವಾಗಿ ಸಣ್ಣಪುಟ್ಟ ಗಾ’ಯಗಳಾಗಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪುಕಾರುಗಳು ಪ್ರಾರಂಭವಾಗಿದೆ. ಆದರೆ ಈ ಘಟನೆಗೆ ಕಾರಣ ಏನೆಂಬುದನ್ನು ಸ್ವತಃ ದಿವ್ಯ ಸುರೇಶ್ ಅವರು ಹೇಳಿಕೊಂಡಿದ್ದಾರೆ. ಅದೇನೆಂದರೆ ದಿವ್ಯ ಸುರೇಶ್ ರವರು ತಮ್ಮ ದ್ವಿಚಕ್ರವಾಹನದಲ್ಲಿ ಎರಡನೆಯ ಡೋಸ್ ಪಡೆದುಕೊಂಡು ಬರಬೇಕಾದರೆ ಸ್ಕೂಟರ್ ಗೆ ನಾಯಿ ಅಡ್ಡ ಬಂದು ಅವರು ಬೀಡುಬಿಟ್ಟಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ಹಬ್ಬುತ್ತಿದೆ.

Comments are closed.