Neer Dose Karnataka
Take a fresh look at your lifestyle.

ಅಕ್ಷಯ್ ಕುಮಾರ್ ಕುಡಿಯುವ ಹಾಲಿನ ಬೆಲೆ ಎಷ್ಟು ಗೊತ್ತಾ?? ಇಷ್ಟೊಂದು ದುಬಾರಿನ?? ಅಷ್ಟಕ್ಕೂ ಯಾಕೆ ದುಬಾರಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ನಟ ಹಾಗೂ ನಟಿಯರು ಕೇವಲ ಪಾರ್ಟಿಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನಕ್ರಮದ ಕುರಿತಂತೆ ಸೀರಿಯಸ್ಸಾಗಿರುತ್ತಾರೆ. ಅದು ಇತ್ತೀಚಿನ ದಿನಗಳಲ್ಲಿ ಮಹಾಮಾರಿ ಬಂದಮೇಲಂತೂ ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಜೀವನಕ್ರಮದ ಕುರಿತಂತೆ ಹಾಗೂ ಆರೋಗ್ಯದ ಕುರಿತಂತೆ ಬಹಳಷ್ಟು ಗಂಭೀರವಾಗಿದ್ದಾರೆ.

ನಾವಿಂದು ಹೇಳಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಅತ್ಯಂತ ಫಿಟ್ ಹಾಗೂ ಆರೋಗ್ಯವಂತ ನಟ ಆಗಿರುವ ಅಕ್ಷಯ್ ಕುಮಾರ್ ಅವರ ಕುರಿತಂತೆ. ಅಕ್ಷಯ್ ಕುಮಾರ್ ಅವರು 4 ಗಂಟೆಗೆ ಎದ್ದರೆ ದೈಹಿಕ ಕಸರತ್ತುಗಳನ್ನು ಮಾಡುತ್ತಾ ಕೆಲಸಗಳಲ್ಲಿ ಮಗ್ನರಾಗಿ ಸಂಜೆ ಎಂಟು ಹಾಗೂ ಒಂಬತ್ತು ಗಂಟೆಯ ಒಳಗೆ ಮಲಗಿಕೊಂಡು ಬಿಡುತ್ತಾರೆ. ಇಷ್ಟೊಂದು ಶಿಸ್ತುಬದ್ಧವಾಗಿ ಜೀವನಕ್ರಮವನ್ನು ನಡೆಸುವಂತಹ ಬಾಲಿವುಡ್ ನಟ ಇನ್ನೊಬ್ಬರಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದಾಗಿದೆ. ಇನ್ನು ಆರೋಗ್ಯದ ವಿಚಾರದಲ್ಲಿ ಕೂಡ ಅಕ್ಷಯ್ ಕುಮಾರ್ ಅವರು ಸಾಕಷ್ಟು ಉತ್ತಮ ಶಿಸ್ತುಬದ್ಧ ಕ್ರಮಗಳನ್ನು ಅನುಸರಿಸುತ್ತಾರೆ. ಇವುಗಳಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ಅವರು ಕುಡಿಯುವಂತಹ ಹಾಲಿನ ಕುರಿತಂತೆ. ಸಾಮಾನ್ಯವಾಗಿ ನಾವೆಲ್ಲ ಕುಡಿಯುವ ಹಾಲು ಲೀಟರ್ ಗೆ 40ರಿಂದ 50 ರೂಪಾಯಿಯಾದರೆ ಅಕ್ಷಯ್ ಕುಮಾರ್ ರವರು ಕುಡಿಯುವ ಹಾಲಿನ ದರ ಲೀಟರ್ ಗೆ ಎಷ್ಟು ಗೊತ್ತಾ.

ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಅವರು ಕುಡಿಯುವ ಹಾಲಿನ ಬೆಲೆ ಲೀಟರ್ ಗೆ ಬರೋಬ್ಬರಿ 190 ರೂಪಾಯಿ. ಇದು ಆಕಳಿನ ಹಾಲು. ಈ ಆಕಳಿಗೆ ಆರ್ ಓ ಫಿಲ್ಟರ್ ನೀರನ್ನು ಕುಡಿಯಲು ನೀಡುತ್ತಾರೆ. ಇದರಲ್ಲಿ ಯಾವುದೇ ಕೃತಕ ಅಂಶಗಳನ್ನು ಹಾಕುವುದಿಲ್ಲ 100% ಪ್ಯೂರ್ ಆಗಿರುತ್ತದೆ. ಇವುಗಳಿಗಾಗಿ ಎಸಿಯನ್ನು ಕೂಡ ಹಾಕಿಸಲಾಗುತ್ತದೆ. ಈ ಆಕಳುಗಳಿಗೆ ತಪಾಸಣೆ ಮಾಡುತ್ತಲೇ ಇರುತ್ತಾರೆ. ಒಂದು ವೇಳೆ ಯುವಕ ಏನಾದರೂ ರೋಗಗಳು ಬಂತು ಎಂದರೆ ಇವುಗಳನ್ನು ಮಾರಲಾಗುತ್ತದೆ. ಹೀಗಾಗಿ ಈ ಆಕಳಿನ ಹಾಲಿನಲ್ಲಿ ಪ್ರೋಟಿನ್ ಹಾಗೂ ಕ್ಯಾಲ್ಸಿಯಂ ಹೆಚ್ಚಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Comments are closed.