ಐಪಿಎಲ್ ತಂಡದ ಮಾಲೀಕತ್ವವನ್ನು ಹೊಂದಿರುವ ಟಾಪ್ 5 ಸುಂದರ ಒಡತಿಯರು ಯಾರ್ಯಾರು ಗೊತ್ತೇ?? ಯಶಸ್ವಿಯಾಗಿ ನಿರ್ವಹಣೆ ಕೂಡ ಮಾಡಿದ್ದಾರೆ.
ನಮಸ್ಕಾರ ಸ್ನೇಹಿತರೇ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕೂಡ ತಮ್ಮ ಪ್ರಾಬಲ್ಯವನ್ನು ಈಗಾಗಲೇ ಸಾಧಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ಸಾಧನೆ ಮಾಡುವ ಅವಕಾಶವನ್ನು ನಮ್ಮ ಸಮಾಜ ನೀಡುತ್ತಿರಲಿಲ್ಲ. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೂ ಕೂಡ ಪುರುಷರಷ್ಟೇ ಸಮಾನವಾದ ಹಕ್ಕುಗಳನ್ನು ನೀಡಲಾಗಿದೆ.
ಹೀಗಾಗಿ ಪುರುಷರು ಇರುವಂತಹ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಮಹಿಳೆಯರು ಕೂಡ ತಮ್ಮ ಸಾಧನೆ ಹಾಗೂ ಅಸ್ತಿತ್ವವನ್ನು ಪ್ರಬಲವಾಗಿ ಉಳಿಸಿಕೊಂಡಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಭಾರತದ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ಕುರಿತಂತೆ. ಐಪಿಎಲ್ ನಲ್ಲಿ ತಂಡದ ಒಡತಿಯರಾಗಿ ಪ್ರಾಬಲ್ಯವನ್ನು ಸಾಧಿಸಿರುವ 5 ಸುಂದರಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.
ಮೊದಲನೇದಾಗಿ ಶಿಲ್ಪಶೆಟ್ಟಿ. ಶಿಲ್ಪ ಶೆಟ್ಟಿಯವರು ನಿಮಗೆಲ್ಲರಿಗೂ ತಿಳಿದಿರುವಂತೆ ಮೂಲತಹ ಮಂಗಳೂರಿನವರು. ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಜನಪ್ರಿಯತೆಯನ್ನು ಸಾಧಿಸಿದ್ದಾರೆ. ಇನ್ನು ಇವರ ಪತಿ ಆಗಿರುವ ರಾಜ್ ಕುಂದ್ರಾ ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ 11.7% ಪಾಲುದಾರಿಕೆಯನ್ನು ಹೊಂದಿದ್ದರು. ಆದರೆ ಈ ಹಿಂದೆ ಫಿಕ್ಸಿಂಗ್ ನಿಂದಾಗಿ ಎರಡು ವರ್ಷಗಳ ಬ್ಯಾನನ್ನು ಪಡೆದ ನಂತರ ರಾಜಸ್ಥಾನ ರಾಯಲ್ಸ್ ತಂಡದ ಮಾಲಕತ್ವವನ್ನು ಕಳೆದುಕೊಂಡಿರುತ್ತಾರೆ.
ಎರಡನೇದಾಗಿ ಕಾವ್ಯ ಮಾರನ್. ಯಾವಾಗೆಲ್ಲಾ ಸನ್ರೈಸರ್ಸ್ ಹೈದರಾಬಾದ್ ತಂಡದ ಪಂದ್ಯಾಟಗಳು ನಡೆಯುತ್ತವೆಯೋ ಆವಾಗೆಲ್ಲಾ ಕಾವ್ಯ ಮಾರನ್ ರವರ ರಿಯಾಕ್ಷನ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಸನ್ ನೆಟ್ವರ್ಕ್ ಗ್ರೂಪ್ ಗಳ ಮಾಲೀಕ ಆಗಿರುವ ಕಲಾನಿಧಿ ಮಾರನ್ ರವರ ಮಗಳಾಗಿರುವ ಕಾವ್ಯ ಮಾರನ್ ರವರು ತಂಡದ ಮಾಲೀಕರಾಗಿದ್ದಾರೆ. ಇಂದಿಗೂ ಕೂಡ ತಂಡದ ಪ್ರತಿಯೊಂದು ಪಂದ್ಯಗಳಲ್ಲಿ ಹಾಜರಾಗಿರುತ್ತಾರೆ.
ಮೂರನೇದಾಗಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಜೂಹಿ ಚಾವ್ಲ ರವರು ಕಂಡುಬರುತ್ತಾರೆ. ಶಾರುಖ್ ಖಾನ್ ಮಾಲಕತ್ವದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲಕಿಯಾಗಿದ್ದಾರೆ ಜೂಹಿಚಾವ್ಲಾ ರವರು. ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಜೂಹಿಚಾವ್ಲಾ ರವರು ಕಾಣಿಸಿಕೊಂಡಿದ್ದಾರೆ. ಹಲವಾರು ಪಂದ್ಯಗಳಲ್ಲಿ ಜೂಹಿಚಾವ್ಲಾ ರವರು ತಮ್ಮ ಮಗಳೊಂದಿಗೆ ತಂಡವನ್ನು ಹುರಿದುಂಬಿಸುವ ದೃಶ್ಯವನ್ನು ನೀವು ನೋಡಿರಬಹುದಾಗಿದೆ.
ನಾಲ್ಕನೇದಾಗಿ ಪ್ರೀತಿಜಿಂಟಾ ರವರು. ಪ್ರೀತಿ ಜಿಂಟಾ ರವರು ಮೊದಲ ವೃತ್ತಿಯಿಂದಲೂ ತಮ್ಮ ಪಂಜಾಬ್ ತಂಡಕ್ಕೆ ಹುರಿದುಂಬಿಸು ವುದರಲ್ಲಿ ಹಿಂದೆಬಿದ್ದಿಲ್ಲ. ಐಪಿಎಲ್ ನ ಅತ್ಯಂತ ಕ್ಯೂಟ್ ಮಾಲಕಿ ಪ್ರೀತಿ ಜಿಂಟಾ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಇಂದಿನವರೆಗೂ ಕೂಡ ತಂಡವನ್ನು ಒಬ್ಬರೇ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.
ಕೊನೆಯದಾಗಿ ಗಾಯತ್ರಿ ರೆಡ್ಡಿರವರು. ಇವರ ಹೆಸರು ನೀವು ಕೇಳಿರುವುದು ವಿರಳ. ಐಪಿಎಲ್ ನ ಮೊದಲ ಆವೃತ್ತಿಯನ್ನು ಗೆದ್ದಿರುವ ಡೆಕ್ಕನ್ ಚಾರ್ಜರ್ಸ್ ತಂಡದ ಮಾಲಕರಾಗಿರುವ ಡೆಕ್ಕನ್ ಕ್ರಾನಿಕಲ್ ಸಂಸ್ಥೆಯ ಟೀ ವೆಂಕಟರಾಮ ರೆಡ್ಡಿ ರವರ ಪುತ್ರಿ ಆಗಿದ್ದಾರೆ. ಇವರು ಹಲವಾರು ಬಾರಿ ಸ್ಟೇಡಿಯಂನ ಸ್ಟ್ಯಾಂಡ್ಸ್ ಗಳಲ್ಲಿ ಕೂತು ತಂಡವನ್ನು ಹುರಿದುಂಬಿಸುತ್ತಿರುವ ದೃಶ್ಯ ಸಾಕಷ್ಟು ಜನಪ್ರಿಯತೆಗೆ ಒಳಗಾಗಿತ್ತು. ಯಾಕೆಂದರೆ ಎಲ್ಲರೂ ಇವರು ಒಬ್ಬ ನಟಿ ಎಂದೇ ಭಾವಿಸಿದ್ದರು. ಇವರೇ ಆ ಐಪಿಎಲ್ ತಂಡಗಳ ಐದು ಸುಂದರ ಒಡತಿಯರು.
Comments are closed.