ಅಂದಿನ ಕಾಲದ ಟಾಪ್ ನಟಿ ರವೀನಾ ತಂಡನ್ ರವರ ಜೊತೆ ಪ್ರೀತಿಯಲ್ಲಿ ಇದ್ದರೇ ಟಾಪ್ ಕ್ರಿಕೆಟಿಗ?? ಕಳೆದ 20 ವರ್ಷಗಳ ಹಿಂದೆ ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ಇವರು ಕೂಡ ಕಂಡುಬರುತ್ತಾರೆ. ಹೌದು ನಾವು ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಬೆಡಗಿ ಆಗಿರುವ ರವೀನ ತಂಡನ್ ಅವರ ಕುರಿತಂತೆ. ಸದ್ಯಕ್ಕೆ ರವೀನ ತಂಡನ್ ರವರು ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ವಾಗಿರುವ ಕೆಜಿಎಫ್ ಚಾಪ್ಟರ್ 2 ರಲ್ಲಿ ರಮಿಕ ಸೆನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಿನ ಕಾಲದಲ್ಲಿ ಇವರ ಹೆಸರು ಹಲವಾರು ಜನರೊಂದಿಗೆ ತಳುಕು ಹಾಕಿಕೊಂಡಿತ್ತು.
ಅವರಲ್ಲಿ ಪ್ರಮುಖವಾಗಿ ಬಾಲಿವುಡ್ ಚಿತ್ರರಂಗದ ಕಿಲಾಡಿ ಎಂದೇ ಖ್ಯಾತರಾಗಿರುವ ಅಕ್ಷಯ್ ಕುಮಾರ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ರವೀನ ತಂಡನ್ ಹಾಗೂ ಅಕ್ಷಯ್ ಕುಮಾರ್ ರವರ ಸಂಬಂಧ ಎಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು ಎಂದರೆ ಇವರಿಬ್ಬರು ಮದುವೆಯಾಗುವುದು ಕೂಡ ಕನ್ಫರ್ಮ್ ಆಗಿತ್ತು. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ನಡೆದಂತಹ ಮನಸ್ತಾಪಗಳು ನಿಮಗೆಲ್ಲರಿಗೂ ಗೊತ್ತಿರುವಂತದ್ದಾಗಿದೆ. ಅದೆಲ್ಲ ಬಿಡಿ ನಾವು ಇಂದು ಹೇಳೋಕೆ ಹೊರಟಿರುವುದು ಬೇರೆ ವಿಚಾರ. ಕೇವಲ ಬಾಲಿವುಡ್ನ ನಟರು ಮಾತ್ರವಲ್ಲದೆ ರವೀನ ತಂಡನ್ ಅವರ ಹೆಸರು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಅವರ ಜೊತೆಗೆ ಕೂಡ ಕೇಳಿಬಂದಿತ್ತು. ಹಾಗಿದ್ದರೆ ಆ ಬ್ಯಾಟ್ಸ್ಮನ್ ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಸ್ನೇಹಿತರೆ ನಟಿ ರವೀನ ತಂಡನ್ ಅವರ ಹೆಸರು ಭಾರತೀಯ ಕ್ರಿಕೆಟ್ ತಂಡದ ಗೋಡೆಯಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರ ಜೊತೆಗೆ 2002 ಸುಮಾರಿಗೆ ಕೇಳಿ ಬಂದಿತ್ತು. ಸದ್ಯದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ವಿಷಯ ತಿಳಿದ ರವೀನಾಗೆ ತುಂಬಾ ಆಶ್ಚರ್ಯವಾಯಿತು. ಇದನ್ನು ಕೇಳಿ ಹೈರಾಣಾದ ರವೀನ ತಂಡನ್ ರವರು ನನಗೆ ರಾಹುಲ್ ದ್ರಾವಿಡ್ ಅವರು ವ್ಯಕ್ತಿಗತವಾಗಿ ಪರಿಚಯ ಕೂಡ ಇಲ್ಲ ಎಂಬುದಾಗಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಸ್ನೇಹಿತರ ಮುಖಾಂತರ ಒಮ್ಮೆ ಅವರನ್ನು ಬೇಟಿ ಅಷ್ಟೇ ಮಾಡಿರುವುದು ಎಂಬುದಾಗಿ ಕೂಡ ಪ್ರತಿಕ್ರಿಯಿಸುತ್ತಾರೆ. ಈ ಸುದ್ದಿಯ ಕುರಿತಂತೆ ನಿಮಗೆ ಮೊದಲೇ ಗೊತ್ತಾ ಅಥವಾ ಇದರ ಕುರಿತಂತೆ ಇರುವ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.
Comments are closed.