Neer Dose Karnataka
Take a fresh look at your lifestyle.

ನಾಯಕ ನಟನಾಗಿದ್ದ ನಟ ಅಶ್ವಥ್ ರವರು ಇದ್ದಕ್ಕಿದ್ದಂತೆ ಪೋಷಕ ನಟನಾಗಿದ್ದು ಹೇಗೆ ಗೊತ್ತಾ?? ಮಗ ಶಂಕರ್ ಅಶ್ವಥ್ ರವರಿಂದ ವಿಡಿಯೋ ಬಿಡುಗಡೆ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅದೆಷ್ಟೋ ವರ್ಷಗಳಿಂದ ಹಲವಾರು ನಟ ಹಾಗೂ ನಟಿಯರು ಬಂದು ಹೋಗಿದ್ದಾರೆ. ಕೆಲವರು ನಾಯಕನಟ ಹಾಗೂ ನಾಯಕನಟಿಯ ಪಾತ್ರದಲ್ಲಿ ಮಿಂಚಿದ್ದಾರೆ ಇನ್ನು ಕೆಲವರು ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಕೆಲವರು ಪೋಷಕ ಪಾತ್ರದಲ್ಲಿ ಕನ್ನಡಿಗರ ಮನದಾಳದಲ್ಲಿ ಹೊಕ್ಕು ನೆಲೆಸಿದ್ದಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ಕೂಡ ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ಪೋಷಕ ನಟರ ಕುರಿತಂತೆ. ಹಾಗಿದ್ದರೆ ಯಾರಪ್ಪ ಅವರು ಎಂಬುದಾಗಿ ನಿಮ್ಮ ಕುತೂಹಲ ಹೆಚ್ಚಾಗಿರಬಹುದು.

ನಿಮ್ಮೆಲ್ಲರ ನೆಚ್ಚಿನ ರಾಮಾಚಾರಿಯ ಚಾಮಯ್ಯ ಮೇಷ್ಟ್ರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನಟ ಅಶ್ವತ್ ರವರ ಕುರಿತಂತೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ಚಿತ್ರ ನೋಡಿದರೂ ಕೂಡ ಅಶ್ವಥ್ ರವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ಅವರ ಪಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇತ್ತು. ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಅವರು ನಮ್ಮೊಂದಿಗೆ ಇಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಅಶ್ವತ್ ರವರು ಕೇವಲ ಪೋಷಕ ನಟನಾಗಿ ಎಂಟ್ರಿ ನೀಡಿದವರಲ್ಲ. ಬದಲಾಗಿ 50ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಅಶ್ವಥ್ ಅವರು ಮೂರ್ನಾಲ್ಕು ಸಿನಿಮಾಗಳಿಗೆ ನಾಯಕನಟನಾಗಿ ನಟಿಸಿದ್ದರು.

ನಾಯಕ ನಟನಾಗಿದ್ದ ಅಶ್ವಥ್ ಅವರು ಪೋಷಕ ನಟನಾಗಿ ನಟಿಸಲು ಕಾರಣ ಏನು ಎಂಬ ಕುರಿತಂತೆ ನಿಮಗೆ ಅನುಮಾನಗಳು ಹಾಗೂ ಗೊಂದಲಗಳು ಮೂಡಬಹುದು. ಈ ಕುರಿತಂತೆ ಅವರ ಮಗ ಆಗಿರುವ ನಟ ಶಂಕರ್ ಅಶ್ವತ್ಥ್ ಅವರು ಕೂಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತಂತೆ ಹಂಚಿಕೊಂಡಿದ್ದಾರೆ. ಹೀಗೆ ಆಗಲು ಯಾರ ಕೈವಾಡ ಅಥವಾ ಪವಾಡ ಎಂಬುದರ ಬರಹವನ್ನು ಹಾಕಿ ಇದರ ಕುರಿತಂತೆ ತಿಳಿಸಲಿದ್ದೇನೆ ಎಂಬುದಾಗಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಈ ಘಟನೆಯಲ್ಲಿ ಏನಾಗಬಹುದು ಎಂಬುದನ್ನು ನಾವು ಅವರ ಮುಂದಿನ ವಿಡಿಯೋದಲ್ಲಿ ತಿಳಿದು ಕೊಳ್ಳಬಹುದಾಗಿದೆ. ಈ ತರ್ಖದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.