ದಪ್ಪ ಹುಡುಗ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾಗ ಪ್ರೀತಿ ಮಾಡಿದ ಹುಡುಗಿ, ಕೊನೆಗೆ ಟೀಕಿಸುವಾಗ ಈ ಹುಡುಗಿ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಸಮಾಜದ ಕೆಲವು ವರ್ಗದ ವ್ಯಕ್ತಿಗಳು ಬೇರೆಯವರು ಸುಖವಾಗಿ ಜೀವಿಸುತ್ತಿದ್ದರೆ ಅದನ್ನು ನೋಡಿ ಆಗದವರಂತೆ ಹೊಟ್ಟೆಕಿಚ್ಚಿನಲ್ಲಿ ಬದುಕುತ್ತಿರುತ್ತಾರೆ. ಇನ್ನು ಕೆಲವರು ಬಾಡಿ ಶೇಮಿಂಗ್ ಮಾಡುವಲ್ಲಿ ಕೂಡ ನಿರತರಾಗಿರುತ್ತಾರೆ. ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ಕೂಡ ಅದಕ್ಕೆ ಒಂದು ಉದಾಹರಣೆ ಎಂದರೆ ತಪ್ಪಾಗಲಾರದು. ಸೀಯೆನ್ ಕೀರಾ ಎಂಬಾಕೆ ತನ್ನ ಮಗನೊಂದಿಗೆ ಆಡುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಒಬ್ಬ ಹುಡುಗ ಅವಳನ್ನು ಮದುವೆಯಾಗಬೇಕಿದ್ದ ನಟ ಜಾರ್ಜ್ ಕೀವುಡ್ ಕಡೆಗೆ ಬೆರಳನ್ನು ತೋರಿಸಿ ಡುಮ್ಮ ಎಂಬುದಾಗಿ ಕೀಳಾಗಿ ಹೇಳುತ್ತಾನೆ. ಈ ಮಾತನ್ನು ಕೇಳಿ ಅಲ್ಲಿದ್ದ ಜನರು ನಗಲು ಪ್ರಾರಂಭಿಸುತ್ತಾರೆ.
ಇದೇ ಸಂದರ್ಭದಲ್ಲಿ ಆತ ಸೀಯೆನ್ ಕೀರಾ ಕಡೆಗೆ ವಿಚಿತ್ರವಾದ ದೃಷ್ಟಿಯಲ್ಲಿ ನೋಡುತ್ತಾನೆ. ಸೀಯೆನ್ ಕೆರಾ ದೈಹಿಕವಾಗಿ ಸಾಕಷ್ಟು ಸ್ಲಿಮ್ ಆಗಿದ್ದು ಸೌಂದರ್ಯವತಿ ಆಗಿದ್ದಳು. ಜಾರ್ಜ್ ಕೀವುಡ್ ನಂತಹ ಶ್ರೀಮಂತ ಹಾಗೂ ನಟನನ್ನು ಮದುವೆಯಾಗಿದ್ದಕ್ಕೆ ಎಲ್ಲರೂ ಆಕೆಯನ್ನು ಗೋಲ್ಡ್ ಡಿಗ್ಗರ್ ಎಂದು ಕರೆಯುತ್ತಿದ್ದರು. ಗೋಲ್ಡ್ ಡಿಗ್ಗರ್ ಎಂದರೆ ಹಣ ಹಾಗೂ ಆಸ್ತಿಗಾಗಿ ಶ್ರೀಮಂತನನ್ನು ಮದುವೆಯಾಗುವುದು ಅಥವಾ ಆತನ ಜೊತೆಗೆ ಮಲಗಲು ಸಿದ್ಧವಾಗಿರುವವಳು ಎಂದರ್ಥ.
ಪ್ರತಿಸಾರಿಯೂ ಕೂಡ ಜನರು ಸೀಯೆನ್ ರನ್ನು ನೀನು ಜಾರ್ಜ್ ನನ್ನು ಮದುವೆಯಾಗಿದ್ದಕ್ಕೆ ಮುಖ್ಯ ಕಾರಣ ಎಂದರೆ ಆತನ ಬಳಿ ಹಣ ಇದೆ ಒಳ್ಳೆಯ ಕಮಾಯಿ ಇದೆ ಮತ್ತು ಆತ ಒಬ್ಬ ಖ್ಯಾತ ನಟ ಎಂಬ ಕಾರಣಕ್ಕಾಗಿ ಮದುವೆಯಾಗಿದ್ದೀಯ ಎಂಬುದಾಗಿ ಹೇಳುತ್ತಲೇ ಇರುತ್ತಾರೆ. ಆದರೆ ನಿಜವಾದ ವಿಚಾರ ಹಾಗಲ್ಲ. ಜನರಿಗೆ ಹೇಳಲು ಮುಖ್ಯಕಾರಣ ಜಾರ್ಜ್ ನ ದಡೂತಿ ದೇಹ. ಇನ್ನು ಇದೇ ಕುರಿತಂತೆ ಅಂತರಾಷ್ಟ್ರೀಯ ಸುದ್ದಿವಾಹಿನಿ ಯಾಗಿರುವ ಬಿಬಿಸಿಯಲ್ಲಿ ಇವರಿಬ್ಬರ ಕುರಿತಂತೆ ಚಿತ್ರೀಕರಿಸಿರುವ ಡಾಕ್ಯುಮೆಂಟರಿ ವಿಡಿಯೋ ದಲ್ಲಿ ಜನರು ಇವರ ಜೊತೆಗೆ ವಿಚಿತ್ರವಾಗಿ ವ್ಯವಹರಿಸಿರುವ ರೀತಿಯನ್ನು ಕೂಡ ವರ್ಣಿಸಲಾಗಿದೆ.
ಇನ್ನೂ ಮುಂದುವರೆದು ಈ ವಿಚಾರದ ಕುರಿತಂತೆ ಸೀಯೆನ್ ನಾನು ಯಾವಾಗಲೂ ನಮ್ಮಿಬ್ಬರ ವೀಡಿಯೋಗಳನ್ನು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದಾಗ ಜನರು ಬೇಡ ಬೇಡದ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ. ಜಾರ್ಜ್ ನನ್ನು ಆಲಸಿ ಹಾಗೂ ಕಾಯಿಲೆ ಬಂದಿರಬಹುದು ಎಂಬುದಾಗಿ ಹೇಳಿ ಹೀಯಾಳಿಸುತ್ತಾರೆ. ಆದರೆ ನಾನು ಹಾಗೂ ಜಾರ್ಜ್ ಇಬ್ಬರೂ ಕೂಡ ಇಂತಹ ಬೇಡದ ಕಾಮೆಂಟ್ಗಳನ್ನು ತಲೆಗೂ ಕೂಡ ಹಾಕಿಕೊಳ್ಳುವುದಿಲ್ಲ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೂಡ ನೀಡುವುದಿಲ್ಲ ಎಂಬುದಾಗಿ ಹೇಳುತ್ತಾರೆ.
ದಾರಿಯಲ್ಲಿ ನಾನು ಹಾಗೂ ಜಾರ್ಜ್ ಒಟ್ಟಿಗೆ ಹೋಗುತ್ತಿರಬೇಕಾದರೆ ಜನರು ನಮ್ಮನ್ನೇ ಗುರಾಯಿಸಿ ನೋಡುತ್ತಲೇ ಇರುತ್ತಾರೆ. ಇದಕ್ಕೂ ಕೆಟ್ಟದಾಗಿರುವ ಅಂಶವೆಂದರೆ ಕೆಲವೊಂದು ಹುಡುಗರು ನನ್ನನ್ನು ಭೇಟಿಯಾಗಲು ಕಾಯುತ್ತಿರುತ್ತಾರೆ. ಅವರ ಪ್ರಕಾರ ಜಾರ್ಜ್ ನನ್ನನ್ನು ಖುಷಿಯಾಗಿ ಇಡುತ್ತಿಲ್ಲ ಎಂಬ ಭಾವನೆ ಇರುತ್ತದೆ. ಆದರೆ ನಿಜವಾದ ವಿಷಯವೇನೆಂದರೆ ಜಾರ್ಜ್ ನನ್ನನ್ನು ಎಲ್ಲಾ ರೀತಿಯಲ್ಲೂ ಕೂಡ ಖುಷಿಯಲ್ಲಿ ಇರಿಸುತ್ತಾರೆ ಎಂಬುದಾಗಿ ಹೇಳಿಕೊಳ್ಳುತ್ತಾಳೆ.
ಸಿಯೇನ್ ಮೂಲತಹ ಆಸ್ಟ್ರೇಲಿಯ ದೇಶದ ಮೂಲದವರಾಗಿದ್ದು ಜಾರ್ಜ್ ಅವರನ್ನು 2018 ನೆಟ್ಫ್ಲಿಕ್ಸ್ ನ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗುತ್ತಾರೆ. ಈ ಭೇಟಿಯ ನಂತರ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಗಳನ್ನು ಮಾಡಲು ಆರಂಭಿಸುತ್ತಾರೆ. ನಂತರ ಈಗ ಇಬ್ಬರೂ ಕೂಡ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ದಢೂತಿ ವ್ಯಕ್ತಿ ಹಾಗೂ ಸ್ಲಿಮ್ ಮಹಿಳೆಯ ನಡುವಿನ ಪ್ರೀತಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.