ಕೊನೆಗೂ ಬಯಲಾಯಿತು ರಶ್ಮಿಕಾ ಮಂದಣ್ಣ ನವರ ಇತ್ತೀಚಿಗೆ ಖರೀದಿಸಿದ ಮುಂಬೈ ಮನೆಯ ಅಸಲಿ ಬೆಲೆ, ಎಷ್ಟು ಕೋಟಿ ಗೊತ್ತಾ?? ಇಷ್ಟೊಂದು ಹಣ ಹೇಗೆ ಬರುತ್ತೆ ಅಂದ್ರು ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ನವರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟಿ ಎಂದರೆ ಅತಿಶಯೋಕ್ತಿಯಲ್ಲ. ಯಾಕೆಂದರೆ ಈಗಾಗಲೇ ಅವರು ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ಭಾಷೆಗಳಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಸಾನ್ವಿ ಭಾರತೀಯ ಚಿತ್ರರಂಗದಲ್ಲಿ ನ್ಯಾಷನಲ್ ಕ್ರಷ್ ಆಗಿ ಮರೆಯುತ್ತಾರೆ ಎಂಬ ಸಣ್ಣ ಸುಳಿವು ಕೂಡ ಯಾರಿಗೂ ಇರಲಿಲ್ಲ. ಕೊಡಗಿನ ಕುವರಿ ಯಾಗಿರುವ ರಶ್ಮಿಕ ಮಂದಣ್ಣ ನವರ ಬೆಳವಣಿಗೆಯನ್ನುವುದು ನಿಜಕ್ಕೂ ಪ್ರಶಂಸಾರ್ಹ.
ಆದರೆ ಕನ್ನಡಿಗರಿಗೆ ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರು ಕನ್ನಡ ಚಿತ್ರಗಳಲ್ಲಿ ನಟಿಸದೆ ಇರುವುದು ಹಾಗೂ ಕನ್ನಡತನಕ್ಕೆ ತಿರಸ್ಕಾರ ಭಾವನೆಯನ್ನು ತೋರಿಸುತ್ತಿರುವುದು ಕನ್ನಡ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವುದು. ಇದನ್ನು ಬಿಟ್ಟರೆ ರಶ್ಮಿಕ ಮಂದಣ್ಣ ನವರು ಕ್ಷಿಪ್ರಗತಿಯಲ್ಲಿ ಸಾಧಿಸಿರುವ ಸಾಧನೆಯನ್ನು ವುದು ಪ್ರತಿಯೊಬ್ಬ ಕನ್ನಡಿಗನು ಕೂಡ ಹೆಮ್ಮೆಪಡಬೇಕಾದಂತಹ ವಿಚಾರ. ಈ ಹಿಂದೆ ರಶ್ಮಿಕ ಮಂದಣ್ಣ ನವರು ತೆಲುಗು ಚಿತ್ರರಂಗದಲ್ಲಿ ಯಶಸ್ಸು ಪಡೆದ ನಂತರ ಅವರ ಬೇಡಿಕೆ ಹೆಚ್ಚಾದ ಮೇಲೆ ಇಲ್ಲೇ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ ಎಂಬುದನ್ನು ನಿರ್ಧರಿಸಿದ ಅವರು ಹೈದರಾಬಾದ್ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದರು.
ನಂತರ ಬಾಲಿವುಡ್ ನಿಂದ ಅವರಿಗೆ ಅವಕಾಶಗಳು ಬರಲು ಪ್ರಾರಂಭಿಸಿದಾಗ ಅಲ್ಲೂ ಕೂಡ ಈಗ ಐಶಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಈಗಾಗಲೇ ಅಮಿತಾಬ್ ಬಚ್ಚನ್ ರವರೊಂದಿಗೆ ಒಂದು ಸಿನಿಮಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ರವರೊಂದಿಗೆ ಮಿಷನ್ ಮಜ್ನು ಸಿನಿಮಾ ಹೀಗೆ ಹಲವಾರು ಸಿನಿಮಾಗಳ ಆಫರ್ ಒಂದರ ಮೇಲೊಂದರಂತೆ ರಶ್ಮಿಕಾ ಮಂದಣ್ಣನ ಅವರನ್ನು ಹುಡುಕಿಕೊಂಡು ಬರುತ್ತಿವೆ. ಹೀಗಾಗಿಯೇ ರಶ್ಮಿಕ ಮಂದಣ್ಣ ನವರು ಮುಂಬೈನಲ್ಲಿ ಮನೆಯನ್ನು ಖರೀದಿಸಿರುವುದು. ಇನ್ನು ಈ ಮನೆಯ ಬೆಲೆ ಕೂಡ ಈಗ ತಿಳಿದುಬಂದಿದ್ದು ಬರೋಬ್ಬರಿ 14 ಕೋಟಿ ರೂಪಾಯಿಗಳನ್ನು ರಶ್ಮಿಕಾ ಮಂದಣ್ಣ ನವರು ಈ ಮನೆಯ ಮೇಲೆ ಸುರಿದಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.