ಧಾರವಾಹಿ ಟಾಪ್ ಆದ ಬೆನ್ನಲ್ಲೇ ತನ್ನ ಸಂಭಾವನೆ ಹೆಚ್ಚಳ ಮಾಡಿಕೊಂಡ ಅಚ್ಚು ಮೆಚ್ಚಿನ ಉಮಾಶ್ರೀ ಮೇಡಂ, ಒಂದು ಎಪಿಸೋಡ್ ಗೆ ಎಷ್ಟು ಗೊತ್ತೇ?? ಯಾವ ಟಾಪ್ ನಟರಿಗೂ ಇಷ್ಟು ಕೊಡಲ್ಲ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯದಲ್ಲಿ ಅಂದರೆ ಲಾಕ್ಡೌನ್ ಸಮಯದಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯ ಧಾರವಾಹಿಗಳು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವುದು ನಿಮಗೆಲ್ಲಾ ಗೊತ್ತಿದ್ದು ನೀವು ಕೂಡ ಧಾರವಾಹಿಗಳನ್ನು ಇಷ್ಟಪಡುತ್ತಿದ್ದೀರಿ. ಯಾಕೆಂದರೆ ನಮ್ಮ ಕನ್ನಡದ ಕಿರುತೆರೆಯ ಕ್ಷೇತ್ರದಲ್ಲಿ ಈಗ ಸಿನಿಮಾಗಳಷ್ಟೆ ಕ್ವಾಲಿಟಿ ಮೇಕಿಂಗ್ ಹಾಗೂ ಉತ್ತಮ ಕಥೆಗಳನ್ನು ಪ್ರೇಕ್ಷಕರಿಗೆ ತೋರಿಸಲಾಗುತ್ತದೆ. ಹೀಗಾಗಿ ಸಿನಿಮಾ ಕ್ಷೇತ್ರಕ್ಕೆ ಸರಿಸಮನಾಗಿ ಕಿರುತೆರೆ ಕ್ಷೇತ್ರವೂ ಕೂಡ ಬೆಳೆದು ನಿಂತಿದೆ.
ಇದಕ್ಕೂ ಮಿಗಿಲಾಗಿ ಸಿನಿಮಾ ಕಲಾವಿದರು ಇತ್ತೀಚಿನ ದಿನಗಳಲ್ಲಿ ಕಿರುತೆರೆಗೆ ಆಗಮಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಯೆನ್ನುವಂತೆ ಅನಿರುದ್ಧ್ ರವರು ಜೊತೆ ಜೊತೆಯಲ್ಲಿ ಧಾರವಾಹಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಟಿ ಉಮಾಶ್ರೀ ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದ ಎಲ್ಲರ ಮನಗೆದ್ದಿರುವ ನಟಿ ಉಮಾಶ್ರೀ ಅವರು ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಉಮಾಶ್ರೀ ಅವರು ಪಡೆಯುತ್ತಿರುವ ಸಂಭಾವನೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಇದುವರೆಗೂ ಕಿರುತೆರೆಯಲ್ಲಿ ಧಾರಾವಾಹಿಗಾಗಿ ಅತ್ಯಂತ ಹೆಚ್ಚು ಸಂಭಾವನೆ ಪಡೆದಿರುವ ನಟ ಎಂದರೆ ಅದು ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಅನಿರುದ್ಧ್. ಅವರಿಗೆ ದಿನವೊಂದಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಆದರೆ ಉಮಾಶ್ರೀಯವರು ದಿನವೊಂದಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಧಾರವಾಹಿಯ ನಟಿಯಾಗಿದ್ದಾರೆ.
Comments are closed.