Neer Dose Karnataka
Take a fresh look at your lifestyle.

ಹೆಚ್ಚೇನೂ ಬೇಡ, ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಂಡು ಶ್ರೀಮಂತರಾಗಲು ಈ ಚಿಕ್ಕ ಕೆಲಸ ಮಾಡಿ ಸಾಕು, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಲಕ್ಷ್ಮಿ ದೇವಿ ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ. ಅಥವಾ ಅದ್ಧೂರಿಯಾಗಿ ಪೂಜೆ ಪುನಸ್ಕಾರಗಳನ್ನು ಮಾಡಿದಾಕ್ಷಣ ಲಕ್ಷಿದೇವಿಯ ಕೃಪಾ ಕತಾಕ್ಷಕ್ಕೆ ಪಾತ್ರರಾಗಲು ಸಾಧ್ಯವಿಲ್ಲ. ಹಾಗಾದರೆ ನಾವೇನು ಮಾಡಿದರೆ ಲಕ್ಷ್ಮಿದೇವಿ ಒಲಿಯುತ್ತಾಳೆ ಅಂತನಾ! ಅದಕ್ಕೆ ಮುಖ್ಯವಾಗಿ ನಾವು ಮಾಡಬೇಕಾಗಿದ್ದೇ, ಪರಿಶ್ರಮದ ಕೆಲಸ. ಆಗ ಮಾತ್ರ ದೇವಿಯ ಅನುಗ್ರಹ ಆಗೂ ಅದೃಷ್ಟ ಎರಡೂ ನಮ್ಮ ಜೊತೆಗಿರುತ್ತವೆ. ಇದರ ಜೊತೆಗೆ ಚಾಣಕ್ಯ ಹೇಳುವ ಕೆಲವು ವಿಷಯಗಳನ್ನೂ ಕೂಡ ಜೀವನದಲ್ಲಿ ಅಳವಡಿಸಿಕೊಂಡು ಹಾಗೆ ನಡೆದುಕೊಳ್ಳುವುದು ಬಹಳ ಮುಖ್ಯ.

ಮೊದಲನೆಯದಾಗಿ ಗಾಂಭೀರ್ಯ. ಹಣದ ವಿಷಯದಲ್ಲಿ ಅಥವಾ ಹಣದೊಂದಿಗೆ ಆಟ ಆಡಬಾರದು. ಹಣದ ವ್ಯವಹಾರದಲ್ಲಿ ನಾವು ಗಂಭೀರವಾಗಿರ್ವುದು ಬಹಳ ಮುಖ್ಯ. ಸಮಯಕ್ಕೆ ಮಹತ್ವ ಕೊಡುವವರ ಜೊತೆ ಲಕ್ಷ್ಮಿ ದೇವಿ ಸದಾ ಇರುತ್ತಾಳೆ. ಹಾಗಾಗಿ ನೀವು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಿದರೆ ಲಕ್ಷ್ಮಿ ನಿಮ್ಮೊಂದಿಗಿಲ್ಲದೇ ಏಲ್ಲಿಗೆ ಹೋಗುತ್ತಾಳೆ! ಹೀಗೆ ಸಮಯ ಪ್ರಜ್ಞೆ ಇರುವವರಿಗೆ ಸಮಾಜದಲ್ಲಿಯೂ ಗೌರವ ಸಿಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಸೋಮಾರಿಗಳೊಂದಿಗೆ ಲಕ್ಷ್ಮೀ ದೇವಿಗೆ ಆವಾಗಲೂ ನಿಲ್ಲುವುದಿಲ್ಲ. ಸೋಮಾರಿಗಳಾಗಿ ಕೆಲಸ ಮಾಡದೇ, ಶ್ರಮ ಪಡದೇ ಇರುವವರೆಂದರೆ ದೇವರಿಗೆ ಮಾತ್ರವಲ್ಲ, ಸಾಮಾನ್ಯ ಜನರೂ ಕೂಡ ಇಷ್ಟಪಡುವುದಿಲ್ಲ. ಸೋಮಾರಿಗಳಿಗೆ ಅದೃಷ್ಟದ ಬಾಗಿಲು ತೆರೆದರೂ ಗೊತ್ತಾಗುವುದಿಲ್ಲ,ಇಂಥವರಿಗೆ ಲಕ್ಶ್ಮಿ ಒಲಿಯಲು ಸಾಧ್ಯವೇ! ಕೋಪ ಮತ್ತು ಅಹಂಕಾರವನ್ನು ಬಿಡಿ. ಅನಗತ್ಯವಾಗಿ ಕೋಪಿಸಿಕೊಂಡರೆ, ಅಹಂಕಾರ ಪಟ್ಟರೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸಿಗಲು ಸಾಧ್ಯವೇ ಇಲ್ಲ. ಹಾಗೆಯೇ ಈ ಗುಣಗಳಿರುವವರು ಯಶಸ್ಸನ್ನು ಗಳಿಸಲು ಕೂಡ ಸಾಧ್ಯವಿಲ್ಲ.

ಲಕ್ಷ್ಮೀಯನ್ನು ಮನೆಗೆ ಕರೆಯುವವರು ಮೊದಲು ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕಲ್ಲವೇ? ಮನೆಯ ತುಂಬಾ ಕಸಗಳೇ ತುಂಬಿದ್ದರೆ ಲಕ್ಷ್ಮಿ ದೇವಿ ಕಾಲಿಡುವುದಾದರೂ ಹೇಗೆ, ಹಾಗಾಗಿ ಈ ಬಗ್ಗೆ ಹೆಚ್ಚು ಗಮನವಹಿಸಿ. ಇನ್ನು ಹಣವನ್ನು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕೆ ಹೊರತು ಇನ್ನೊಬ್ಬರಿಗೆ ಮೋಸ, ವಂಚನ ಮಾಡಿ ಅಲ್ಲ, ಹೀಗೆ ಗಳಿಸಿದ ಹಣ ನಮ್ಮಲ್ಲಿ ಎಂದಿಗೂ ಉಳಿಯುವುದಿಲ್ಲ. ಪ್ರಾಮಾಣಿಕವಾಗಿದ್ದರೆ ಲಕ್ಷ್ಮಿಯ ಕೃಪೆ ಸಿಗುವುದು ಖಂಡಿತ. ಇನ್ನು ಕೆಲಸ ದೊಡ್ದದಿರಲಿ ಚಿಕ್ಕದಿರಲಿ ಅದರಲ್ಲಿ ಶ್ರಮ ಇರಬೇಕು, ಹಾಗೆಯೇ ಗಳಿಸಿದ ಹಣವನ್ನು ದುಂದುವೆಚ್ಚ ಮಾಡದೇ ಸರಿಯಾಗಿ ಬಳಸಿಕೊಳ್ಳಬೇಕು. ಸಾಧ್ಯವಾದಷ್ಟು ಉಳಿತಾಯ ಮಾಡಬೇಕು. ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ದೇವಿ ಇನ್ನಷ್ಟು ಐಶ್ವರ್ಯವನ್ನು ಕೊಡುತ್ತಾಳೆ. ಚಾಣಾಕ್ಯ ಹೇಳುವ ಈ ನೀತಿಗಳನ್ನು ಒಮ್ಮೆ ಅಳವಡಿಸಿಕೊಂಡು ನೋಡಿ. ಜೀವನ ಸುಗಮವಾಗಿ ಸಾಗಲು ಸಹಾಯವಾಗುತ್ತದೆ.

Comments are closed.