Neer Dose Karnataka
Take a fresh look at your lifestyle.

ಎಷ್ಟೇ ವಯಸ್ಸಾದರು ಗಂಡ ಹೆಂಡತಿ ನಡುವಿನ ಪ್ರೀತಿ ಹೇಗಿರಬೇಕು ಗೊತ್ತಾ??ಇದನ್ನು ತಿಳಿದರೆ ಜೀವನ ಹೇಗಿರುತ್ತೇ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕೆಲವು ದಂಪತಿಗಳನ್ನು ನೊಡಿದ್ದೀರಾ ಅವರ ವಯಸ್ಸು 60 ದಾಟಿದರೂ ಎಷ್ಟು ಅನ್ಯೂನ್ಯವಾಗಿ ಇರುತ್ತಾರೆ, ಎಷ್ಟು ಚೆಂದದ ಬದುಕನ್ನು ಕಟ್ಟಿಕೊಂಡಿರುತ್ತಾರೆ ಅಂತ. ಅವರನ್ನು ನೊಡಿ ಜಗಳಾಡಿವ ಇಂದಿನ ಯುವ ಜೋಡಿಗಳು ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ಅದೇ ಹಳೆಯ ಜೋಡಿಗಳನ್ನ ನೋಡುತ್ತಾ ನಿಲ್ಲಬಹುದು. ಹೇಗೆ ಇವರುಷ್ಟು ಆರಾಮವಾಗಿದ್ದಾರೆ ಅಂತ. ಅದಕ್ಕೆ ಕಾರಣವಿದೆ. ಅದುವೇ ಪ್ರೀತಿ, ಹಾಗೂ ಸಂಬಂಧದ ತಳಹದಿಯಾದ ನಂಬಿಕೆ.

ಹೌದು ಸ್ನೇಹಿತರೆ, ಹುಟ್ಟುತ್ತಾನೆ ಎಲ್ಲರೂ ಎಲ್ಲರಿಗೂ ಪರಿಚಯವಿರುವುದಿಲ್ಲ, ಅದೆಷ್ಟೋ ಸಂಬಂಧಗಳು ಶುರುವಾಗುವುದೇ ಮದುವೆಯಾದ ಮೇಲೆ. ಆದರೂ ಈ ಸಂಬಂಧ ಹಾಳಾಗದಂತೆ ಉಳಿಸಿಕೊಳ್ಳಬೇಕು ಅಂದರೆ ಅಲ್ಲಿ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಪ್ರೀತಿ ಹಾಗೂ ಒಬ್ಬರ ಮೇಲೇ ಒಬ್ಬರಿಗೆ ನಂಬಿಕೆ. ನಂಬಿಕೆ ಅಥವಾ ಪ್ರೀತಿ ಇವೆರಡನ್ನೂ ಗಳಿಸಿಕೊಳ್ಳುವುದು ಅಷ್ಟು ಸುಲಭವಲ, ನೀವು ಯೋಗ್ಯವಾದ ವ್ಯಕ್ತಿಯ ಪ್ರೀತಿ ಗಳಿಸಿಕೊಳ್ಳಬೇಕು ಎಂದರೆ ಅದಕ್ಕೂ ಕಷ್ಟಪಡಬೇಕು. ಅಲ್ಲದೇ ಒಮ್ಮೆ ನಂಬಿಕೆ ಪ್ರೀತಿಯನ್ನು ಗಳಿಸಿಕೊಂಡರೆ ಅದು ಎಂದಿಗೂ ಕೆಡದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಎಲ್ಲರೂ ಎಲ್ಲರ ಸ್ವಭಾವಕ್ಕೂ ಹೊಂಡಿಕೆಯಾಗುವುದಿಲ್ಲ, ಅದರಲ್ಲೂ ಗಂಡ ಹೆಂಡತಿ ನಡುವೆ ಸ್ವಭಾವಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಆದರೆ ಅವರ ಸಂಸಾರ ಆನಂದ ಗೋಕುಲವಾಗಬೇಕು ಅಂದರೆ ಅಲ್ಲಿ, ಮುಖ್ಯವಾಗಿ ಒಬ್ಬರ ಭಾವನೆಯನ್ನು ಒನ್ನೊಬ್ಬರು ಗೌರವಿಸುವುದು ಮುಖ್ಯ. ಅವರ ಕೆಲವು ಸ್ವಭಾವಗಳು, ಕೆಲಸಗಳು ನಿಮಗೆ ಇಷ್ಟವಾಗಿಲ್ಲದಿದ್ದರೂ, ಅದು ಒಳ್ಳೆಯದೇ ಆಗಿದ್ದರೆ ನೀವು ಅವರ ಬೆಂಬಲಕ್ಕೆ ನಿಲ್ಲಬೇಕು. ಅವರ ಕನಸು ನನಸಾಗಿಸಲು ಸಹಾಯ ಮಾಡಬೇಕು. ಹೀಗೆ ಗಂಡ ಹೆಂಡತಿ ವರ್ಷಗಳು ಕಳೆದರೂ, ದಶಕದ ಋತುಮಾನಗಳನ್ನು ನೋಡಿದರೂ, ಇನ್ನೊಂದಿಷ್ಟು ವರ್ಷ ಒಟ್ಟಿಗೇ ಜೀವನ ಮಾಡಬೇಕು ಎಂದು ಹಂಬಲಿಸಿದರೆ ಆ ಸಂಬಂಧ ಎಷ್ಟು ಆಳವಾಗಿರಬಹುದು ಎಂಬುದು ಅರ್ಥವಾಗುತ್ತದೆ. ಹಾಗಾಗಿ, ಪ್ರೀತಿ ಮತ್ತು ನಂಬಿಕೆ ಎನ್ನುವ ಸಂಸಾರ ಸಾರವನ್ನು ಅರಿತುಕೊಂಡರೆ, ಜೀವನದಲ್ಲಿ ಸೋಲನ್ನು ಕಾಣಲು ಸಾಧ್ಯವೇ ಇಲ್ಲ!

Comments are closed.