ಧಾರವಾಹಿ ನಿಲ್ಲಿಸಿ ಬಿಡ್ತಾರೆ ಎಂದರೆ ಧಾರವಾಹಿ ನಿಂತರು ಪರವಾಗಿಲ್ಲ ಎಂದಿದ್ದೇಕೆ ಅನಿರುದ್ ರವರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿರುವಂತಹ ಜೀ ಕನ್ನಡ ಧಾರಾವಾಹಿ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರವಾಹಿಯ ಜನಪ್ರಿಯತೆ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿರುವುದೇ. ಸಿನಿಮಾದಲ್ಲಿ ಅದೃಷ್ಟಕ್ಕಾಗಿ ಕಾಯುತ್ತಿದ್ದ ಸಾಹಸಸಿಂಹ ವಿಷ್ಣುವರ್ಧನ್ ರವರ ಅಳಿಯ ಆಗಿರುವ ಅನಿರುದ್ಧ್ ರವರು ಸಿನಿಮಾದಿಂದ ವಿಮುಖರಾದ ನಂತರ ಹಲವಾರು ವರ್ಷಗಳ ಕಾಲ ಅಜ್ಞಾತವಾಸವನ್ನು ಅನುಭವಿಸಿದ ನಂತರ ಜೀ ಕನ್ನಡ ವಾಹಿನಿಯಲ್ಲಿ ಎರಡು ವರ್ಷಗಳ ಹಿಂದೆ ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ ಆಗಿ ನಟಿಸುವುದಕ್ಕೆ ಪ್ರಾರಂಭಿಸಿದ ನಂತರ ಅವರ ಜೀವನದ ಬದಲಾಗಿತ್ತು. ಕಿರುತೆರೆ ಅವರ ಕೈಯನ್ನು ಹಿಡಿದಿತ್ತು.
ಮೊನ್ನೆಮೊನ್ನೆಯಷ್ಟೇ ಜೊತೆ ಜೊತೆಯಲಿ ಧಾರವಾಹಿ ಬರೋಬ್ಬರಿ ಆರು ನೂರು ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿತ್ತು. ಈ ಧಾರವಾಹಿಯ ಕುರಿತಂತೆ ಬೇರೆ ಭಾಷೆಯ ಕಿರುತೆರೆಯ ರಂಗದಲ್ಲೂ ಕೂಡ ದೊಡ್ಡಮಟ್ಟದ ಪ್ರಶಂಸೆಯ ಮಾತಿತ್ತು. 600 ಸಂಚಿಕೆಗಳ 2 ವರ್ಷದ ಹಾದಿಯನ್ನುವುದು ಅಷ್ಟೊಂದು ಸುಲಭವಾಗಿರಲಿಲ್ಲ ಆದರೂ ಕೂಡ ಜನರು ಇದಕ್ಕೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ಅನಿರುದ್ಧ್ ಅವರು ಸಾಕಷ್ಟು ಪರಿಶ್ರಮ ಹಾಗೂ ಪ್ರಯತ್ನಪಟ್ಟಿದ್ದರು ಕೂಡ ಹೇಳಿಕೊಳ್ಳುವ ಯಶಸ್ಸು ಅವರಿಗೆ ಸಿಗಲಿಲ್ಲ. ಹಲವಾರು ವರ್ಷಗಳ ನಂತರ ಕಿರುತೆರೆಗೆ ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಮ್ ಬ್ಯಾಕ್ ಮಾಡಿದ ಅನಿರುದ್ಧ್ ರವರು ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಹೊಂದಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆಯ ನಟನಾಗಿ ಕೂಡ ಖ್ಯಾತಿಯನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಅನಿರುದ್ಧ್ ರವರು ಸಾಕಷ್ಟು ಸಕ್ರಿಯರಾಗಿದ್ದು ಇಲ್ಲಿ ಮರಗಳನ್ನು ನೆಡುವಂತಹ ಪುಸ್ತಕಗಳನ್ನು ನೀಡುವಂತಹ ಅಭಿಯಾನಗಳನ್ನು ಮಾಡುವ ಮೂಲಕ ತಮ್ಮನ್ನು ಪ್ರೀತಿಸುವಂತಹ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಧಾರವಾಹಿಯಂತೆ ನಿಜ ಜೀವನದಲ್ಲಿ ಕೂಡ ನಡೆದುಕೊಳ್ಳುತ್ತಾರೆ. ಧಾರವಾಹಿಯಲ್ಲಿ ಕೂಡ ಇತ್ತೀಚೆಗೆ ಕೆಲವು ಸಂಚಿಕೆಗಳಲ್ಲಿ ಸ್ವಚ್ಛತೆಯ ಕುರಿತಂತೆ ಸಂಚಿಕೆಗಳು ಪ್ರಸಾರವಾಗಿದ್ದವು. ನಿಜ ಜೀವನದಲ್ಲೂ ಕೂಡ ತಮಗೆ ಯಾವುದೇ ಪ್ರದೇಶದಲ್ಲಿ ಅಸ್ವಚ್ಛತೆ ಕಂಡಾಗಲೆಲ್ಲಾ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ವಿಷಯವನ್ನು ಮುಟ್ಟಿಸಿ ಅದನ್ನು ಸರಿಪಡಿಸುವಂತೆ ಮಾಡುತ್ತಿದ್ದರು.
ಇದೇ ರೀತಿ ಇತ್ತೀಚೆಗೆ ಅನಿರುದ್ಧ್ ರವರು ಸಾಮಾಜಿಕ ಜಾಲತಾಣದ ನಮ್ಮ ತಮ್ಮ ಖಾತೆಯಲ್ಲಿ ಮರಕ್ಕೆ ಕೇಬಲ್ ವೈರ್ ಗಳು ಸುತ್ತಿ ಹಾಕಿಕೊಂಡಿರುವ ಫೋಟೋವನ್ನು ಶೇರ್ ಮಾಡಿ ಹೀಗೆ ಮಾಡದಿರಿ ಮರಗಳು ಉಳಿಯಬೇಕು ಪರಿಸರವನ್ನು ಉಳಿಸೋಣ ಎಂಬುದಾಗಿ ಸಂದೇಶವನ್ನು ಸಾರಿದರು. ಇದಕ್ಕೆ ಕಾಮೆಂಟ್ನಲ್ಲಿ ಕೆಲವೊಂದು ಅಭಿಮಾನಿಗಳು ಕೇಬಲ್ ನವರನ್ನು ಎದುರು ಹಾಕಿಕೊಳ್ಳಬೇಡಿ ನಿಮ್ಮ ಧಾರವಾಹಿಯನ್ನು ನಿಲ್ಲಿಸಿಬಿಡುತ್ತಾರೆ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಅನಿರುದ್ಧ್ ರವರು ಪರವಾಗಿಲ್ಲ ಆದರೆ ಮರಗಳು ಉಳಿಯಬೇಕು ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಹಿ ನಿಂತರೂ ಪರಿಸರ ಉಳಿಯಬೇಕು ಎನ್ನುವ ಅನಿರುದ್ಧ್ ರವರ ಸಾಮಾಜಿಕ ಹಿತಕಾರಿಯಾದಂತಹ ಚಿಂತನೆಗಳು ನಿಜಕ್ಕೂ ಪ್ರಶಂಸಾರ್ಹ ವಾದದ್ದು. ಕೆಲವು ಜನರು ಇವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೇ ಇನ್ನು ಕೆಲವರು ಮಾಡುವ ಕೆಲಸ ಇನ್ನೂ ಕೂಡ ಹಲವಾರಿದೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಿ ಎನ್ನುವುದಾಗಿ ಅಸಡ್ಡೆಯ ಮಾತುಗಳನ್ನಾಡಿದ್ದಾರೆ. ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳದೆ ಅನಿರುದ್ಧ್ ಅವರು ಸಮಾಜಕ್ಕೆ ಹಿತಕಾರಿ ಆಗುವಂತಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Comments are closed.