ವಿಶ್ವ ಕಪ್ ಫೈನಲ್ ತಲುಪಿರುವ ಅಂಡರ್-19 ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ವಿಡಿಯೋ ಕರೆ ಮಾಡಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೇವಲ ನಮ್ಮ ಭಾರತೀಯ ಕ್ರಿಕೆಟ್ ತಂಡದ ಭಾರತದ ಅಂಡರ್ 19 ಕ್ರಿಕೆಟ್ ತಂಡ ಕೂಡ ಕ್ರಿಕೆಟ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದೇಶವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯ ಸುರಕ್ಷಿತವಾಗಿದೆ ಎಂಬುದಾಗಿ ಈಗಲೇ ಸುಳಿವನ್ನು ನೀಡುತ್ತಿದ್ದಾರೆ. ಹೌದು ಗೆಳೆಯರೇ ಈ ಬಾರಿಯ ಅಂಡರ್ 19 ವಿಶ್ವಕಪ್ ನಲ್ಲಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಫೈನಲ್ ಗೆ ತಲುಪಿರುವುದು ಬಹಳಷ್ಟು ಸಂತೋಷ ಪಡುವಂತಹ ವಿಚಾರವಾಗಿದ್ದು ಫೈನಲ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ನಾಳೆ ಎದುರಿಸಲಿದೆ.
ಇನ್ನು ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ಈ ಬಾರಿಯ ವಿಶ್ವಕಪ್ ನ ಹಾದಿಯನ್ನು ನೋಡುವುದಾದರೆ ಲೀಗ್ ಮಾದರಿಯಲ್ಲಿ ಆಡಿದಂತಹ ಎಲ್ಲಾ ಐದು ಪಂದ್ಯಗಳನ್ನು ಕೂಡ ಗೆದ್ದು ಬೀಗಿದ್ದಾರೆ. ಈ ಮೂಲಕ ಸೆಮಿಫೈನಲ್ನಲ್ಲಿ ಕೂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಾರೆ. ಬರೋಬ್ಬರಿ ಸತತವಾಗಿ ನಾಲ್ಕನೇ ಬಾರಿಗೆ ಫೈನಲ್ಗೆ ತಲುಪಿ ದಂತಹ ಸಾಧನೆಯನ್ನು ಕೂಡ ಮಾಡಿದ್ದಾರೆ. ಈಗ ನಾಳೆ ಇಂಗ್ಲೆಂಡ್ ತಂಡದ ವಿರುದ್ಧ ಭಾರತೀಯ ತಂಡ ಉತ್ತಮವಾಗಿ ಪ್ರದರ್ಶನ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರುವ ವಿರಾಟ್ ಕೊಹ್ಲಿ ರವರು ಫೈನಲ್ ಗೂ ಮುನ್ನ ಕಿರಿಯ ಆಟಗಾರರಿಗೆ ಕೆಲವು ಸಲಹೆಗಳನ್ನು ನೀಡಿರುವ ವಿಡಿಯೋ ಕಾಲ್ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಂಡರ್-19 ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಇದು ನಿಜಕ್ಕೂ ಅದ್ಭುತವಾದ ಸಂವಾದ ವಾಗಿತ್ತು ಕ್ರಿಕೆಟ್ ಹಾಗೂ ಜೀವನದ ಕುರಿತಂತೆ ನಿಮ್ಮಿಂದ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ ಧನ್ಯವಾದಗಳು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿರುವ ಯಶ್ ಧುಲೆ ರವರ ಕನ್ಸಿಸ್ಟೆಂಟ್ ಆಟದ ಫಲವಾಗಿ ಇಂದು ಭಾರತೀಯ ಕ್ರಿಕೆಟ್ ತಂಡ ಫೈನಲ್ಗೆ ತಲುಪಲು ಸಾಧ್ಯವಾಗಿದೆ ಎಂದರೆ ತಪ್ಪಲ್ಲ. ಫೈನಲ್ನಲ್ಲಿ ಕೂಡ ಇವರು ಇದೇ ರೀತಿ ಅದ್ಭುತ ಪ್ರದರ್ಶನವನ್ನು ನೀಡಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದಾರೆ.
Comments are closed.