ನಟನೆ ಜೊತೆ ಆರಂಭಿಸಿರುವ ಯುಟ್ಯೂಬ್ ಚಾನೆಲ್ ನಿಂದ ಅದಿತಿ ಪ್ರಭುದೇವ ದವರು ಗಳಿಸುತ್ತಿರುವ ಸಂಪಾದನೆ ತಿಂಗಳಿಗೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆಯಲ್ಲಿರುವ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಯಾವುದೇ ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರಲ್ಲ. ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಾ ಎಲ್ಲಿಯವರೆಗೆ ಬಂದಿದ್ದಾರೆ ಅದಿತಿ ಪ್ರಭುದೇವ ರವರು. ಎಲ್ಲದಕ್ಕಿಂತ ಹೆಚ್ಚಾಗಿ ಅದಿತಿ ಪ್ರಭುದೇವ ರವರು ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುವುದು ಅವರು ಎಷ್ಟೇ ಯಶಸ್ವಿಯಾಗಿದ್ದರು ಕೂಡ ನಮ್ಮ ಕನ್ನಡತನವನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ.
ಬೇರೆ ನಟಿಯರೆಲ್ಲ ಒಂದು ಸಿನಿಮಾ ಯಶಸ್ವಿ ಆಗುವ ಬೆನ್ನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡು ಬಿಡುತ್ತಾರೆ. ಆದರೆ ಅದಿತಿಪ್ರಭುದೇವ ಹಾಗಲ್ಲ. ಇನ್ನು ನಟನೆ ವಿಚಾರಕ್ಕೆ ಬಂದರೂ ಕೂಡ ಯಾವುದೇ ಪಾತ್ರವನ್ನು ನಿರ್ವಹಿಸಬಲ್ಲ ಅಂತಹ ಕ್ಷಮತೆಯನ್ನು ಅದಿತಿ ಪ್ರಭುದೇವ ಹೊಂದಿದ್ದಾರೆ. ಇತ್ತೀಚಿಗಷ್ಟೇ ಅವರ ಓಲ್ಡ್ ಮಾಂಕ್ ಚಿತ್ರ ಸಾಕಷ್ಟು ಸುದ್ದಿಯಲ್ಲಿದೆ. ಈಗಾಗಲೇ ಅವರ ಕೈಯಲ್ಲಿ ಹಲವಾರು ಸಿನಿಮಾಗಳು ಕೂಡ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಜಾಹೀರಾತು ಕೊಲಾಬರೇಷನ್ ಹೀಗೆ ಹಲವಾರು ವಿಧಗಳ ಮೂಲಕ ಹಣವನ್ನು ಸಂಪಾದಿಸುತ್ತಾರೆ.
ಇನ್ನು ಕೇವಲ ಸೋಶಿಯಲ್ ಮೀಡಿಯಾ ಖಾತೆಗಳು ಮಾತ್ರವಲ್ಲದೆ ಯುಟ್ಯೂಬ್ ಚಾನೆಲ್ ಅನ್ನು ಕೂಡ ಅದಿತಿ ಪ್ರಭುದೇವ ರವರು ಹೊಂದಿದ್ದಾರೆ. ಈಗ ಎಲ್ಲರಿಗೂ ಕುತೂಹಲ ಮೂಡಿಸಿರುವ ಅಂಶವೇನೆಂದರೆ ಯುಟ್ಯೂಬ್ ಚಾನೆಲ್ ನಿಂದ ಅದಿತಿ ಪ್ರಭುದೇವ ರವರು ತಿಂಗಳಿಗೆ ಎಷ್ಟು ಹಣವನ್ನು ಸಂಪಾದಿಸುತ್ತಾರೆ ಎನ್ನುವುದಾಗಿ. ಇದಕ್ಕೆ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ ರವರು ಉತ್ತರಿಸಿದ್ದಾರೆ. ಹೌದು ಯುಟ್ಯೂಬ್ ಚಾನೆಲ್ ನಿಂದ ತಿಂಗಳಿಗೆ 40 ಸಾವಿರ ರೂಪಾಯಿ ಸಂಪಾದನೆ ಮಾಡುತ್ತೇನೆ ಇದರಿಂದಾಗಿ ನಾನು ನನ್ನ ಈ ಎಂ ಐ ಗಳನ್ನು ಕಟ್ಟಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ. ನಟಿ ಅದಿತಿ ಪ್ರಭುದೇವ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.