ಸರಿಗಮಪ ಖ್ಯಾತಿಯ ಹನುಮಂತ ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ?? ಅಷ್ಟಕ್ಕೂ ಮನೆ ಕಟ್ಟಲು ಖರ್ಚಾಗಿದ್ದು ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ವಿಶೇಷ ಕಾರ್ಯಕ್ರಮಗಳ ಮೂಲಕ ಹಲವಾರು ಪ್ರತಿಭೆಗಳು ಕರ್ನಾಟಕದ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿ ಉತ್ತಮ ಅವಕಾಶಗಳನ್ನು ಹಾಗೂ ಯೋಗ್ಯವಾದ ಸನ್ಮಾನಗಳನ್ನು ಕೂಡ ಪಡೆಯುತ್ತಿದ್ದಾರೆ. ಅವರಲ್ಲಿ ನಾವು ಇಂದು ಹೇಳಹೊರಟಿರುವ ವ್ಯಕ್ತಿ ಕೂಡ ಒಬ್ಬರು. ಈ ವ್ಯಕ್ತಿಯನ್ನು ನೀವೆಲ್ಲರೂ ಕೆಳಮಟ್ಟದಿಂದ ಪ್ರೋತ್ಸಾಹಿಸಿ ಕೊಂಡು ಬಂದು ನಂತರ ಇವರನ್ನು ಟಿವಿ ವಾಹಿನಿ ಗುರುತಿಸಿ ಅವರಿಗೆ ಅವಕಾಶ ನೀಡಿ ಕರ್ನಾಟಕದ ಮನೆಮನೆಯು ಕೂಡ ಮೆಚ್ಚುವಂತೆ ಮಾಡಿತ್ತು.
ಹೌದು ನಾವು ಮಾತನಾಡಲು ಹೊರಟಿದ್ದು ಹನುಮಂತನ ಕುರಿತಂತೆ. ಇವರನ್ನು ನೀವು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ನೋಡಿರುತ್ತೀರಿ. ಕುರಿ ಕಾಯ್ಕೊಂಡು ಇದ್ದಂತಹ ಹನುಮಂತನನ್ನು ಸರಿಗಮಪ ಸೀಸನ್ 15 ಕ್ಕೆ ಅವಕಾಶ ನೀಡಿ ಪ್ರತಿಯೊಬ್ಬರು ಕೂಡ ಮೆಚ್ಚುವಂತೆ ಮಾಡಿತ್ತು. ಹನುಮಂತ ಮೊದಲಿನಿಂದಲೂ ಕೂಡ ಕಷ್ಟದಿಂದಲೇ ಬೆಳೆದುಕೊಂಡು ಬಂದವನು. ಈಗಾಗಲೇ ಮೂರು ಸಿನೆಮಾಗಳಿಗಾಗಿ ಹಾಡನ್ನು ಕೂಡ ಹಾಡಿದ್ದಾನೆ. ಹಲವಾರು ಸಿನಿಮಾಗಳಿಗೆ ಹಾಡಲು ಅವಕಾಶಗಳು ಕೂಡ ಹನುಮಂತನನ್ನು ಹುಡುಕಿಕೊಂಡು ಬರುತ್ತಿವೆ.
ಸರಿಗಮಪ ಕಾರ್ಯಕ್ರಮ ಮುಗಿದ ಮೇಲೆ ಹನುಮಂತ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಗಾಗ ಸುದ್ದಿಯಲ್ಲಿ ಇರುತ್ತಿದ್ದ. ಇನ್ನು ಈಗ ಹನುಮಂತ ತನ್ನ ಹಳ್ಳಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದಾನೆ. ಹೌದು ಈತ ಸರಿಗಮಪ ಕಾರ್ಯಕ್ರಮದಲ್ಲಿ ಒಂದು ವಾರಕ್ಕೆ ಐವತ್ತು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ. ಹಾಗೂ ಸಿನಿಮಾಗಳಿಗೆ ಆಗಿ ಹಾಡನ್ನು ಹಾಡಿ ಕೂಡ ಹಣವನ್ನು ಸಂಪಾದಿಸಿದ್ದಾನೆ. ಇನ್ನು ಈತ ಕಟ್ಟಿಸಿರುವ ಹೊಸಮನೆಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ. ಇನ್ನು ಗ್ರಹಪ್ರವೇಶಕ್ಕೆ ಸರಿಗಮಪದ ಸಹ ಸ್ಪರ್ಧಿಗಳು ಸೇರಿದಂತೆ ಅರ್ಜುನ್ ಜನ್ಯ ವಿಜಯ ಪ್ರಕಾಶ್ ಹಾಗೂ ನಿರೂಪಕಿ ಅನುಶ್ರೀ ಅವರು ಕೂಡ ಆಗಮಿಸಿ ಶುಭಕೋರಿದ್ದಾರೆ.
Comments are closed.