ಭಾರತಕ್ಕೆ ಕೊಹ್ಲಿ ರವರ ಸ್ಥಾನ ತುಂಬುವ ಆಟಗಾರರನ್ನು ಹೆಸರಿಸಿದ ಆರ್ಸಿಬಿ ಕೋಚ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ತಂಡ ಹಳೇಯ ನೋವುಗಳೆಲ್ಲವನ್ನು ಮರೆತು ಮತ್ತೊಮ್ಮೆ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿದೆ. ಭಾರತ ತಂಡದ ಬೆಂಚ್ ಸ್ಟ್ರೆಂತ್ ಹಿಂದೆಂದೂ ಕಾಣದಷ್ಟು ಬಲಿಷ್ಠವಾಗಿ ಕಾಣುತ್ತಿದೆ. ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಸರಣಿಗಳಲ್ಲಿ ಘಟಾನುಘಟಿಗಳ ಅನುಪಸ್ಥಿತಿಯಲ್ಲಿಯೂ ಸಹ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ಈ ನಡುವೆ ಭಾರತ ತಂಡದ ಸಂಯೋಜನೆ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ತಂಡದ ಪ್ರಮುಖ ಬೌಲರ್ ಗಳಿಗೆ ಬದಲಿ ಆಟಗಾರರು, ಆರಂಭಿಕರಿಗೆ ಬದಲೀ ಆಟಗಾರರು,ಆಲ್ ರೌಂಡರ್ ಗಳಿಗೆ ಬದಲೀ ಆಟಗಾರರು ಹೀಗೆ ಬ್ಯಾಕಪ್ ಆಟಗಾರರತ್ತ ಗಮನಹರಿಸಿದೆ.
ಈ ನಡುವೆ ಭಾರತ ತಂಡದ ಸಂಯೋಜನೆ ಬಗ್ಗೆ ಮಾತನಾಡಿರುವ ಮಾಜಿ ಆರಂಭಿಕ ಆಟಗಾರ ಸಂಜಯ್ ಬಂಗಾರ್ ಭಾರತ ತಂಡದ ಎಲ್ಲಾ ಪ್ರಮುಖ ಸ್ಥಾನಗಳಿಗೂ ಕೋಚ್ ರಾಹುಲ್ ದ್ರಾವಿಡ್ ಬ್ಯಾಕಪ್ ಆಟಗಾರರನ್ನು ಹುಡುಕಿಟ್ಟಿದೆ. ಅದರಲ್ಲೂ ಪ್ರಮುಖ ಸ್ಥಾನವಾದ ನಂಬರ್ ೩ ಸ್ಥಾನವನ್ನು ವಿರಾಟ್ ಕೊಹ್ಲಿ ಆಡುತ್ತಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಆ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರು ಎಂಬ ಪ್ರಶ್ನೆ ಎದ್ದಿತ್ತು.
ಈಗ ಅದಕ್ಕೆ ಉತ್ತರ ಸಿಕ್ಕಿದೆ. ನಂಬರ್ ೩ ಸ್ಥಾನದಲ್ಲಿ ವಿರಾಟ್ ಬದಲು ಶ್ರೇಯಸ್ ಅಯ್ಯರ್ ಆಡಿ ಯಶಸ್ವಿಯಾಗುತ್ತಿದ್ದಾರೆ. ವಿಂಡೀಸ್ ವಿರುದ್ಧದ ಒಂದು ಪಂದ್ಯ ಹಾಗೂ ನಂತರ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದು ಟೀಮ್ ಇಂಡಿಯಾಕ್ಕೆ ಶುಭ ಸೂಚನೆ. ಭವಿಷ್ಯದ ದಿನಗಳಲ್ಲಿ ಪ್ರಮುಖ ಆಟಗಾರರ ಲಭ್ಯತೆ ಅನಿವಾರ್ಯವಾದರೇ, ಆಗ ಬ್ಯಾಕಪ್ ಆಟಗಾರರು ಉತ್ತಮ ಆಟವಾಡಬಹುದು ಎಂದು ಹೇಳಿದ್ದಾರೆ. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಟಿ೨೦ ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ತಂಡ ಸಂಯೋಜಿಸುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
Comments are closed.