ಕೊನೆಗೂ ಫಿಕ್ಸ್ ಆಯಿತು ಅಯೋಗ್ಯ 2, ಅದಕ್ಕೂ ರಚಿತಾ ರವರೇ ನಾಯಕಿ. ಆದರೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ 2018 ರಲ್ಲಿ ಬಿಡುಗಡೆಯಾಗಿದ್ದ ಅಂತಹ ಸ್ಮಾಲ್ ಬಜೆಟ್ ಸಿನಿಮಾ ವಾಗಿರುವ ಅಯೋಗ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದು ಈಗ ಇತಿಹಾಸ. ಈಗ ಇದೇ ಇತಿಹಾಸವನ್ನು ಮರುಕಳಿಸಲು ಚಿತ್ರತಂಡ ಸಿದ್ಧವಾಗಿದೆ ಎಂದು ಹೇಳಬಹುದಾಗಿದೆ. ಹೌದು ಮದಗಜ ಚಿತ್ರವನ್ನು ನಿರ್ದೇಶಿಸಿರುವ ಅಂತಹ ಹಾಗೂ ಈಗಾಗಲೇ ಅಯೋಗ್ಯ ಮೊದಲ ಚಿತ್ರದ ನಿರ್ದೇಶಕರಾಗಿರುವ ಮಹೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಅಯೋಗ್ಯ 2 ಚಿತ್ರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇನ್ನು ಚಿತ್ರದ ಬಜೆಟ್ ಕೂಡ 9 ಕೋಟಿಯ ಆಸುಪಾಸಿನಲ್ಲಿರಲಿದೆ ಎಂಬುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಬಹುತೇಕ ಅಯೋಗ್ಯ ಚಿತ್ರದ ತಾರಾಬಳಗವೇ ಅಯೋಗ್ಯ 2 ಚಿತ್ರದಲ್ಲಿ ಕೂಡ ಇರಲಿದೆ ಎಂಬುದಾಗಿ ಈಗಾಗಲೇ ಕನ್ಫರ್ಮ್ ಆಗಿದೆ. ಸತೀಶ್ ನೀನಾಸಂ ರವರಿಗೆ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟಿಯಾಗಿರುವ ಡಿಂಪಲ್ ಕ್ವೀನ್ ರಚಿತಾರಾಮ್ ರವರೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಮೊದಲ ಭಾಗದಲ್ಲಿ ಕೂಡ ಎಲ್ಲರೂ ಮೆಚ್ಚುವಂತಹ ನಟನೆ ಮಾಡಿದ್ದರು.
ಈಗ ರಚಿತಾ ರಾಮ್ ರವರು ಎರಡನೇ ಭಾಗಕ್ಕಾಗಿ ಎಷ್ಟು ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂಬ ಕುರಿತಂತೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. ಈಗಾಗಲೇ ಕೇವಲ ಕನ್ನಡ ಚಿತ್ರರಂಗಕ್ಕೆ ಹೋಲಿಸಿದರೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಎಲ್ಲರಿಗಿಂತ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಹೀಗಾಗಿ ಮಾಹಿತಿಗಳ ಪ್ರಕಾರ ಅಯೋಗ್ಯ 2 ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು 50 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಅಯೋಗ್ಯದ ಚಿತ್ರದ ಅಂತ್ಯ ದಿಂದಲೇ ಅಯೋಗ್ಯ ಚಿತ್ರದ ಎರಡನೇ ಭಾಗದ ಕಥೆಯನ್ನು ಪ್ರಾರಂಭ ಮಾಡಲಾಗುವುದು ಎಂಬುದಾಗಿ ಕೂಡ ತಿಳಿದುಬಂದಿದೆ. ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಸಾಂಗ್ ಈಗಾಗಲೇ ಯೂಟ್ಯೂಬ್ನಲ್ಲಿ 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
Comments are closed.