ಜೇಮ್ಸ್ ಚಿತ್ರವನ್ನು ಟೀಕೆ ಮಾಡಿದ್ದ ಹುಡುಗನ ಪರಿಸ್ಥಿತಿ ಇಂದು ಏನಾಗಿದೆ ಗೊತ್ತೇ?? ತಾನೇ ಖುದ್ದು ಏನು ಹೇಳಿದ್ದಾನೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡಿಗರೆಲ್ಲರೂ ಕೂಡ ಹಲವಾರು ಸಮಯಗಳಿಂದ ಕಾಯುತ್ತಿದ್ದ ಮೋಸ್ಟ್ ವಾಂಟೆಡ್ ವಿಚಾರವೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಚಿತ್ರದ ಬಿಡುಗಡೆ. ಕೊನೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮದಿನದಂದು ಮಾರ್ಚ್ 17ಕ್ಕೆ ಜೇಮ್ಸ್ ಚಿತ್ರ ನಾಲ್ಕು ಸಾವಿರಕ್ಕೂ ಅಧಿಕ ತೆರೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದೊಡ್ಡಮಟ್ಟದ ಪ್ರದರ್ಶನವನ್ನು ಜೇಮ್ಸ್ ಚಿತ್ರ ಕಂಡಿತ್ತು.
ಇನ್ನು ಜೇಮ್ಸ್ ಚಿತ್ರದ ಮೂಲಕ ಅಪ್ಪು ಅವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡಬೇಕು ಎನ್ನುವ ಕಾರಣಕ್ಕಾಗಿ ಕಿಕ್ಕಿರಿದು ಜನರು ಥಿಯೇಟರ್ ಗಳಿಗೆ ಬಂದಿದ್ದರು. ಇದೇ ಕಾರಣದಿಂದಾಗಿ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಡೆಯದಂತಹ ದಾಖಲೆ ಕೂಡ ನಿರ್ಮಾಣವಾಗಿತ್ತು. ಹೌದು ಜೇಮ್ಸ್ ಚಿತ್ರ ಕೇವಲ ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ದಾಟಿತ್ತು. ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನ ಎಲ್ಲಾ ರೆಕಾರ್ಡ್ ಗಳನ್ನು ಕೂಡ ಜೇಮ್ಸ್ ಚಿತ್ರ ಮೂಲೆಗೆ ಬಿಸಾಕಿತ್ತು.
ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಮೊದಲ ದಿನವೇ ಜೇಮ್ಸ್ ಚಿತ್ರವನ್ನು ವೀಕ್ಷಿಸಿ ಅಪ್ಪು ಅವರ ನೆನಪನ್ನು ಮತ್ತೆ ತಾಜಾ ಮಾಡಿಕೊಂಡರು. ಇನ್ನು ದೊಡ್ಡಮನೆಯ ದೊಡ್ಡ ಮಗ ಆಗಿರುವ ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಪತ್ನಿ ಗೀತಕ್ಕ ರೊಂದಿಗೆ ಹಾಗೂ ರಾಘಣ್ಣ ಕೂಡ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆಗೆ ಸಿನಿಮಾವನ್ನು ನೋಡಿದ್ದಾರೆ. ಅದು ಕೂಡ ಅಭಿಮಾನಿಗಳ ಜೊತೆಗೆ ತಮ್ಮ ಸಹೋದರನ ಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಭಾವನಾತ್ಮಕ ವಿಚಾರ. ತಮ್ಮ ತಮ್ಮನ ಸಿನಿಮಾವನ್ನು ಹೀಗೆ ನೋಡಬೇಕಾಗುತ್ತದೆ ಎಂಬುದಾಗಿ ಅವರು ಕನಸು-ಮನಸಿನಲ್ಲಿಯೂ ಕೂಡ ಅಂದುಕೊಂಡಿರುವ ಸಾಧ್ಯವಿಲ್ಲ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾದ ಗಳೆಲ್ಲ ಎಲ್ಲರ ಕಣ್ಣಲ್ಲಿ ಕಣ್ಣೀರು ಹರಿದಿತ್ತು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ದೃತಿ ಹಾಗೂ ವಂದಿತ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳಾಗಿರುವ ವಿನಯ್ ರಾಜಕುಮಾರ್ ಹಾಗೂ ಯುವರಾಜಕುಮಾರ ಇಬ್ಬರು ತಮ್ಮ ಸಹೋದರಿಯರಾಗಿರುವ ವಂದಿತ ಹಾಗೂ ದೃತಿ ಇಬ್ಬರನ್ನು ಕೂಡ ಕರೆದುಕೊಂಡು ಸಿನಿಮಾ ಥಿಯೇಟರ್ ಗೆ ಹೋಗಿ ಸಿನಿಮಾವನ್ನು ನೋಡಿಕೊಂಡು ಬಂದಿದ್ದಾರೆ. ಅಪ್ಪನ ಕೊನೆಯ ಸಿನಿಮಾವನ್ನು ನೋಡಿ ಮಕ್ಕಳು ಕೂಡ ಭಾವುಕರಾಗಿದ್ದಾರೆ. ಒಟ್ಟಾರೆಯಾಗಿ ಜೇಮ್ಸ್ ಚಿತ್ರ ಅವರನ್ನು ಕೊನೆಯ ಬಾರಿಗೆ ನೋಡುವ ಸಂತೋಷವನ್ನು ನೀಡಿದ್ದರೂ ಕೂಡ ಎಲ್ಲರ ಕಣ್ಣಲ್ಲಿ ನೀರನ್ನು ಹಾಕಿಸಿದೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಕೂಡ ಜೇಮ್ಸ್ ಚಿತ್ರವನ್ನು ನೋಡಲಾರದೆ ಅಪ್ಪು ಅವರ ಸಮಾಧಿಗೆ ಹೋಗಿ ಕೈಮುಗಿದುಕೊಂಡು ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದರು. ಇನ್ನು ಇದೇ ಸಂದರ್ಭದಲ್ಲಿ ಜೇಮ್ಸ್ ಚಿತ್ರ ಹೇಗಿದೆ ಎಂದು ಹೇಳುತ್ತಿದ್ದಾಗ ಎಲ್ಲಾ ಪ್ರೇಕ್ಷಕರು ಕೂಡ ಚಿತ್ರವನ್ನು ಹೊಗಳುತ್ತಿದ್ದರು. ಆದರೆ ಒಬ್ಬ ಮಾತ್ರ ಜೇಮ್ಸ್ ಸಿನಿಮಾ ಚೆನ್ನಾಗಿಲ್ಲ ದುಡ್ಡು ವೇಸ್ಟ್ ಗ್ರಾಫಿಕ್ ಚೆನ್ನಾಗಿಲ್ಲ ಎನ್ನುವುದಾಗಿ ಹೇಳಿದ್ದ. ಹೀಗೆ ಮತ್ತೆ ಪುನಹ ಗೀತ ಮಾಧ್ಯಮದ ಎದುರು ಬಂದು ಏನು ಹೇಳಿದ್ದಾನೆ ಎಂಬುದನ್ನು ನೋಡೋಣ ಬನ್ನಿ.
ಹೌದು ಮತ್ತೆ ಪುನಹ ಮಾಧ್ಯಮದೆದುರು ಬಂದಿರುವ ಈತ ನನ್ನ ಹೇಳಿಕೆಯನ್ನು ತಿರುಚಿ ಮಾಧ್ಯಮದವರು ಪೋಸ್ಟ್ ಮಾಡಿದ್ದಾರೆ. ನಾನು ಕೂಡ ಬೇರೆ ಅಭಿಮಾನಿಗಳಂತೂ ಚಿತ್ರವನ್ನು ನೋಡಿ ಎಂಜಾಯ್ ಮಾಡಿದ್ದೇನೆ ಹಾಗೂ ಚಿತ್ರವನ್ನು ಹೋಗಲಿದ್ದೇನೆ ಆದರೆ ಆ ಭಾಗವನ್ನು ಮಾಧ್ಯಮದವರು ಪ್ರಸಾರ ಮಾಡಲಿಲ್ಲ ಬದಲಾಗಿ ಕೇವಲ ಇದನ್ನು ಮಾತ್ರ ಪ್ರಸಾರ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾನೆ. ಎಲ್ಲರೂ ಕೂಡ ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡುವ ತವಕದಲ್ಲಿದ್ದಾರೆ ಇಲ್ಲೊಬ್ಬ ಚಿತ್ರದಲ್ಲಿರುವ ತಪ್ಪುಗಳನ್ನು ಹುಡುಕುವಲ್ಲಿ ಬ್ಯುಸಿಯಾಗಿದ್ದ. ಈಗ ಈತನಿಗೆ ಸರಿಯಾದ ಶಾಸ್ತಿ ಆಗಿದೆ ಎಂಬುದಾಗಿ ತಿಳಿದುಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.