ಮುಂಬೈ ತಂಡದ ಕ್ಯಾಪ್ಟನ್ ಸ್ಥಾನದಿಂದ ರೋಹಿತ್ ಅವರನ್ನು ತೆಗೆದುಹಾಕಿ, ಈ ಆಟಗಾರನನ್ನು ಕ್ಯಾಪ್ಟನ್ ಮಾಡಿ ಎಂದ ಕೋಚ್ ಸಂಜಯ್ ಮಾಂಜ್ರೇಕರ್.. ಆ ಆಟಗಾರ ಯಾರು ಗೊತ್ತೇ??
ಐಪಿಎಲ್ ಪಂದ್ಯಗಳು ಅತಿ ಹೆಚ್ಚಿನ ಮನರಂಜನೆ ನೀಡುತ್ತವೆ. ಕ್ರಿಕೆಟ್ ಪ್ರಿಯರಿಗೆ ಈ ಐಪಿಎಲ್ ಮೇಲೆ ಕ್ರೇಜ್ ಜಾಸ್ತಿ ಎಂದು ಹೇಳಬಹುದು. ಐಪಿಎಲ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿದ್ದು, ಉತ್ತಮ ಪ್ರದರ್ಶನ ನೀಡುವ ತಂಡವನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಾರೆ, ಆದರೆ ಕಳಪೆ ಪ್ರದರ್ಶನ ನೀಡುವ ತಂಡವನ್ನು ಯಾರು ಇಷ್ಟಪಡುವುದಿಲ್ಲ, ಬದಲಾಗಿ ಆ ತಂಡವನ್ನು ಟೀಕೆ ಮಾಡಲು ಶುರು ಮಾಡುತ್ತಾರೆ. ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಳ್ಳೆಯ ಫಾರ್ಮ್ ನಲ್ಲಿಲ್ಲ, ಇದರ ಬಗ್ಗೆ ಕೋಚ್ ಆಗಿರುವ ಸಂಜಯ್ ಮಾಂಜರೇಕರ್ ಹೇಳಿದ್ದೇನು ಗೊತ್ತಾ?
ಐಪಿಎಲ್ ಇತಿಹಾಸದಲ್ಲೇ, ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ತಂಡ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮ ಅವರು ನಾಯಕನಾಗಿ ಇದ್ದಾಗ್ಲೇಜ್ 5 ಬಾರಿ ಐಪಿಎಲ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ ಮುಂಬೈ. ಐಪಿಎಲ್ ನಲ್ಲಿ ಬಲಿಷ್ಠವಾಅದ ಟೀಮ್ ಆಗಿತ್ತು ಮುಂಬೈ ಇಂಡಿಯನ್ಸ್ ತಂಡ. ಆದರೆ ಈ ಬಾರಿ ಮುಂಬೈ ತಂಡದ ಲಕ್ ಉಲ್ಟಾ ಹೊಡೆದಿದೆ, ಇಲ್ಲಿಯವರೆಗೂ ಆಡಿರುವ 5 ಪಂದ್ಯಗಳಲ್ಲಿ ಐದಕ್ಕೆ ಐದು ಪಂದ್ಯವನ್ನು ಸಹ ಸೋತಿದೆ. ಮುಂಬೈ ತಂಡ ಈ ರೀತಿ ಆಗುವುದಕ್ಕೆ ರೋಹಿತ್ ಶರ್ಮಾ ಅವರ ಕಳಪೆ ಕ್ಯಾಪ್ಟನ್ಸಿ ಕಾರಣ ಎಂದು ಹಲವರು ಹೇಳುತ್ತಿದ್ದು, ಇದರ ಬಗ್ಗೆ ಕೋಚ್ ಸಂಜಯ್ ಮಾಂಜರೇಕರ್ ಅವರು ಹೇಳಿದ್ದೇನು ಗೊತ್ತಾ..
“ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ ಅವರು ಕ್ಯಾಪ್ಟನ್ ಆಗಿದ್ದಾಗ, ಇವರು ಸೋಲು ನೋಡಿದ್ದೇ ತುಂಬಾ ಕಡಿಮೆ. ಎಲ್ಲಾ ಪಂದ್ಯಗಳಲ್ಲೂ ಗೆಲ್ಲುತ್ತಿದ್ದರು. ಆದರೆ ಮುಂಬೈ ತಂಡದ ನಾಯಕತ್ವ ತೆಗೆದುಕೊಂಡಮೇಲೆ ಸೋಲಿನ ಸರದಾರ ಆಗಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಅವರ ಮೇಲಿರುವ ಒತ್ತಡ ಕಡಿಮೆ ಮಾಡಬೇಕು, ಅವರ ಬದಲಾಗಿ ಮುಂಬೈ ತಂಡದಲ್ಲೇ ಇರುವ ಕೀರನ್ ಪೋಲಾರ್ಡ್ ಅವರನ್ನು ನಾಯಕನನ್ನಾಗಿ ಮಾಡಬೇಕು, ಹಲವು ವರ್ಷಗಳಿಂದ ಪೋಲಾರ್ಡ್ ಅವರು ಮುಂಬೈ ತಂಡದಲ್ಲಿರುವ ಕಾರಣ ಚೆನ್ನಾಗಿ ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ..” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸಂಜಯ್.
Comments are closed.