Neer Dose Karnataka
Take a fresh look at your lifestyle.

ಚೆನ್ನೈ ತಂಡಕ್ಕೆ ಮಣ್ಣು ಮುಕ್ಕಿಸಿರುವ ಆರ್ಸಿಬಿ ಪ್ಲೇ ಆಫ್ ತಲುಪಬೇಕು ಎಂದರೆ ಇನ್ನು ಎಷ್ಟು ಪಂದ್ಯ ಗೆಲ್ಲಬೇಕು ಗೊತ್ತೇ??

ಐಪಿಎಲ್ 15ನೇ ಆವೃತ್ತಿಯ 49ನೇ ಪಂದ್ಯ ನಿನ್ನೆ ನಡೆಯಿತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡದ ನಡುವೆ ಹಣಾಹಣಿ ನಡೆಯಿತು. ನಿನ್ನೆಯ ಪಂದ್ಯದಲ್ಲಿ ಆರ್.ಸಿ.ಬಿ ತಂಡವು ಗೆದ್ದು, 12 ಅಂಕಗಳನ್ನು ಪಡೆದು, ಐಪಿಎಲ್ ಅಂಕಪಟ್ಟಿಯಲ್ಲಿ  4ನೇ ಸ್ಥಾನದಲ್ಲಿದೆ. ನಿನ್ನೆಯ ಪಂದ್ಯ ಗೆದ್ದ ಬಳಿಕ, ಪ್ಲೇ ಆಫ್ಸ್ ತಲುಪುವ ಕನಸನ್ನು ಆರ್.ಸಿ.ಬಿ ಜೀವಂತಗೊಳಿಸಿದೆ. ಸತತ 4 ಸೋಲುಗಳಿಂದ ಆರ್.ಸಿ.ಬಿ ತಂಡ ಹುಮ್ಮಸ್ಸು ಕಳೆದುಕೊಂಡಿತ್ತು, ನಿನ್ನೆಯ ಗೆಲುವಿನಿಂದ ಮತ್ತೊಮ್ಮೆ ಉತ್ಸಾಹ ಮರಳಿ ಬಂದಿದೆ. ಆರ್.ಸಿ.ಬಿ ತಂಡಕ್ಕೆ ಇನ್ನು 3 ಪಂದ್ಯಗಳು ಉಳಿಡಿದ್ದು ಪ್ಲೇ ಆಫ್ಸ್ ತಲುಪಲು ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು?

ನಿನ್ನೆಯ ಪಂದ್ಯ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ಎರಡು ತಂಡಕ್ಕೂ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಪ್ಲೇ ಆಫ್ಸ್ ಕನಸಿಗೆ ಈ ಪಂದ್ಯ ಬಹಳ ಮುಖ್ಯವಾಗಿತ್ತು. ನಿನ್ನೆಯ ಪಂದ್ಯವನ್ನು ಆರ್.ಸಿ.ಬಿ ತಂಡ ಗೆದ್ದು ಅಂಕಪಟ್ಟಿಯಲ್ಲಿ ಮುಂದಕ್ಕೆ ಏರಿದೆ. ಆರ್.ಸಿ.ವಿ ತಂಡವು ಇಲ್ಲಿಯವರೆಗೂ 11 ಪಂದ್ಯಗಳನ್ನಾಡಿದ್ದು, ಅದರಲ್ಲಿ 6 ಪಂದ್ಯ ಗೆದ್ದು, 5 ಪಂದ್ಯ ಸೋತು 12 ಅಂಕಗಳನ್ನು ಪಡೆದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆರ್.ಸಿ.ಬಿ ತಂಡಕ್ಕೆ ಇನ್ನು ಉಳಿದಿರುವುದು 3 ಪಂದ್ಯಗಳು. ಯಾವುದೇ ತಂಡದ ಮೇಲೆ ಅವಲಂಬಿತವಾಗಿರದೆ, ನೇರವಾಗಿ ಪ್ಲೇ ಆಫ್ಸ್ ತಲುಪಲು ಇನ್ನುಳಿದ ಮೂರು ಪಂದ್ಯಗಳನ್ನು ಸಹ ಆರ್.ಸಿ.ಬಿ ಗೆಲ್ಲಲೇಬೇಕು. ಆರ್.ಸಿ.ಬಿ ನೆಟ್ ರನ್ ರೇಟ್ ಸಹ ಕಡಿಮೆ ಇದೆ, ಹಾಗಾಗಿ ಆರ್.ಸಿ.ಬಿ ತಂಡವು ಹೆಚ್ಚಿನ ಅಂತರದಲ್ಲಿ ಇನ್ನುಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅವಶ್ಯಕತೆ ಇದೆ. ಮೂರು ಪಂದ್ಯಗಳನ್ನು ಗೆದ್ದರೆ, 18 ಅಂಕಗಳನ್ನು ಪಡೆದು, ನೇರವಾಗಿ ಪ್ಲೇ ಆಫ್ಸ್ ಪ್ರವೇಶಿಸಲಿದ್ದಾರೆ.

ಮೂರರಲ್ಲಿ 2 ಪಂದ್ಯಗಳನ್ನು ಗೆದ್ದರೂ ಸಹ ಪ್ಲೇ ಆಫ್ಸ್ ತಲುಪಲು ಸಾದ್ಯವಿದೆ. ಆದರೆ ಎರಡು ಪಂದ್ಯಗಳನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಲೇಬೇಕು. 2 ಪಂದ್ಯಗಳನ್ನು ಗೆದ್ದರೆ, ಆರ್.ಸಿ.ಬಿ ತಂಡಕ್ಕೆ 16 ಅಂಕಗಳು ಬರಲಿದೆ, ಇದರ ಜೊತೆಗೆ ಹೆಚ್ಚಿನ ರನ್ ರೇಟ್ ಸಹ ಪಡೆದುಕೊಂಡರೆ ಮಾತ್ರ ಆರ್.ಸಿ.ಬಿ ಪ್ಲೇ ಆಫ್ಸ್ ತಲುಪಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರ ಗೆದ್ದರೆ, ಗೆಲುವು ಹೆಚ್ಚಿನ ಅಂತರ ಇದ್ದರೆ ಮಾತ್ರ, ಆರ್.ಸಿ.ಬಿ ಪ್ಲೇ ಆಫ್ಸ್ ತಲುಪುತ್ತದೆ. ಆರ್.ಸಿ.ಬಿ ತಂಡದ ಮುಂದಿನ ಪಂದ್ಯಗಳು ಇರುವುದು.. ಮೇ 8, ಆರ್.ಸಿ.ಬಿ ವರ್ಸಸ್ ಎಸ್.ಆರ್.ಹೆಚ್,  ಮೇ13, ಆರ್.ಸಿ.ಬಿ ವರ್ಸಸ್ ಪಂಜಾಬ್ ಕಿಂಗ್ಸ್..  ಮೇ 19, ಆರ್.ಸಿ.ವಿ ವರ್ಸಸ್ ಗುಜರಾತ್ ಟೈಟನ್ಸ್..

Comments are closed.