ಪದೇ ಪದೇ ಅದೇ ಸಮಸ್ಯೆಯಿಂದ ಸಿನಿಮಾ ಮುಂದೂಡಿಕೆ: ಅನುಷ್ಕಾ ರವರಿಗೆ ಮತ್ತದೇ ಸಮಸ್ಯೆ. ಸಿನಿಮಾ ಚಿತ್ರೀಕರಣ ನಡೆಯಲ್ಲ. ಅನುಷ್ಕಾ ರವರಿಗೆ ಇರುವ ಸಮಸ್ಯೆಯೇನು ಗೊತ್ತೇ?
ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಬೇಡಿಕೆ ಸೃಷ್ಟಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಇವರಿಗೆ ಭಾರಿ ಬೇಡಿಕೆ ಇತ್ತು. ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಅನುಷ್ಕಾ ಶೆಟ್ಟಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆಗಿನಿಂದ ಈಗಿನವರೆಗೂ ಇವರನ್ನು ಕಂಡರೆ ಅಭಿಮಾನಿಗಳಲ್ಲಿ ಪ್ರೀತಿ ಹೆಚ್ಚಾಗುತ್ತಲೇ ಇದೆ ಹೊರತು, ಕಡಿಮೆಯಂತು ಆಗಿಲ್ಲ. ಅನುಷ್ಕಾ ಶೆಟ್ಟಿ ಅವರು ಎರಡು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಟನೆಯಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಅಷ್ಟಕ್ಕೂ ಅನುಷ್ಕಾ ಅವರು ಚಿತ್ರರಂಗದಿಂದ ದೂರ ಆಗಿರುವುದೇಕೆ? ಬಲವಾದ ಕಾರಣ ಇದೆ…
ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಸಿನಿಮಾಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಆದರೆ ಆ ಸಿನಿಮಾ ಬಳಿಕ ಅನುಷ್ಕಾ ಅವರು ನಟನೆಯಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಪಾತ್ರದ ಆಯ್ಕೆಯಲ್ಲಿ ಬಹಳ ಚೂಸಿ ಆಗಿದ್ದಾರೆ. ಬಾಹುಬಲಿ ನಂತರ ಭಾಗಮತಿ ಸಿನಿಮಾದಲ್ಲಿ ನಟಿಸಿದರು ಅನುಷ್ಕಾ. ಆದರೆ ಆ ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಬಳಿಕ ಅನುಷ್ಕಾ ಅವರು 2020ರಲ್ಲಿ ನಿಶಬ್ಧಮ್ ಸಿನಿಮಾ ದಲ್ಲಿ ನಟಿಸಿದರು. ಆ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗಲಿಲ್ಲ, ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಅದಾದ ಬಳಿಕ ಅನೇಕ ಅವಕಾಶಗಳು ಅನುಷ್ಕಾ ಅವರನ್ನು ಹುಡುಕಿಕೊಂಡು ಬಂದರು ಸಹ ಅನುಷ್ಕಾ ಅವರು ಒಪ್ಪಿಕೊಳ್ಳಲಿಲ್ಲ. ಬಳಿಕ ನವೀನ್ ಪೋಲಿಶೆಟ್ಟಿ ಅಭಿನಯದ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು.
ಅನುಷ್ಕಾ ಅವರು ಸಿನಿಮಾ ಇಂದ ದೂರ ಉಳಿಯಲು ಮುಖ್ಯ ಕಾರಣ ದೇಹದ ತೂಕ ಹೆಚ್ಚಾದ ಕಾರಣಕ್ಕೆ. ಅನುಷ್ಕಾ ಅವರು ಕೋವಿಡ್ ಸಮಯದಲ್ಲಿ ದಪ್ಪವಾಗಿದ್ದರು, ನಿಶಬ್ಧಮ್ ಸಿನಿಮಾದಲ್ಲಿ ಇವರು ದಪ್ಪ ಆಗಿರುವುದು ಕಾಣಿಸುತ್ತಿತ್ತು. ಹೊಸ ಸಿನಿಮಾ ಸೈನ್ ಮಾಡಿದ ಬಳಿಕ ಅನುಷ್ಕಾ ಅವರು ದೇಹದ ತೂಕ ಇಳಿಸಿಕೊಂಡು ಸಣ್ಣ ಆದರು. ಆದರೆ ಕೋವಿಡ್ 2ನೇ ಅಲೆಯಿಂದ ಚಿತ್ರೀಕರಣ ಮುಂದಕ್ಕೆ ಹೋಯಿತು, ಇದರಿಂದಾಗಿ ಕೋವಿಡ್ ಸಮಯದಲ್ಲಿ ಅನುಷ್ಕಾ ಅವರ ದೇಹದ ತೂಕ ಮತ್ತೆ ಹೆಚ್ಚಾಯಿತು. ಈಗ ಚಿತ್ರತಂಡವೇನೋ ಸಿನಿಮಾ ಚಿತ್ರೀಕರಣ ಶುರು ಮಾಡುವ ಹುಮ್ಮಸ್ಸಿನಲ್ಲಿದೆ. ಆದರೆ ಅನುಷ್ಕಾ ಅವರು ಮತ್ತೆ ದೇಹದ ತೂಕ ಇಳಿಸಲು ಮೂರು ತಿಂಗಳು ಸಮಯ ಕೇಳಿದ್ದಾರಂತೆ. ಹಾಗಾಗಿ ಚಿತ್ರತಂಡ ಇನ್ನು ಮೂರು ತಿಂಗಳು ಅನುಷ್ಕಾ ಅವರಿಗಾಗಿ ಕಾಯಬೇಕಿದೆ.
Comments are closed.