ಇನ್ನು 20 ವರ್ಷದವರಂತೆ ಕಾಣುವ ಪ್ರಿಯ ಮಣಿ ರವರಿಗೆ ಹುಟ್ಟು ಹಬ್ಬ ಸಂಭ್ರಮ. ಇವರ ವಯಸ್ಸು ನಿಜಕ್ಕೂ ಎಷ್ಟಾಗಿದೆ ಗೊತ್ತೇ?? ಇಷ್ಟೊಂದಾ??
ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ ಆಗಿರುವ ನಟಿ ಪ್ರಿಯಾಮಣಿ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಂದು ಪ್ರಿಯಾಮಣಿ ಅವರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ನಾಲ್ಕು ಭಾಷೆಗಳಲ್ಲೂ ಸಹ ಬಹಳ ಜನಪ್ರಿಯತೆ ಹೊಂದಿರುವ ನಟಿ..ಪ್ರಿಯಾಮಣಿ ಅವರು ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ಮೂಲಕ ಹಿಂದಿಯಲ್ಲೂ ಪರಿಚಿತರಾಗಿದ್ದಾರೆ. ಈಗಲೂ 20ರ ಹರೆಯದ ಹುಡುಗಿಯ ಹಾಗೆ ಕಾಣುವ ಪ್ರಿಯಾಮಣಿ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?
ಪ್ರಿಯಾಮಣಿ ಅವರು ಹುಟ್ಟಿದ್ದು, 1984ರ ಜೂನ್ 4ರಂದು. ಬೆಂಗಳೂರಿನ ಅರಬಿಂದೋ ಸ್ಮಾರಕ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದರು, ಜೆಸಿ ರಸ್ತೆಯಲ್ಲಿರುವ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿದ್ದಾರೆ, ಹಾಗೂ ಸೈಕಾಲಜಿ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತೆಲುಗಿನ ಎವರೆ ಆಟಗಾಡು ಸಿನಿಮಾ ಮೂಲಕ, ನಂತರ ಸತ್ಯಂ ಎನ್ನುವ ಸಿನಿಮಾ ಇಂದ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮಲಯಾಳಂ ನಲ್ಲಿ ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡಕ್ಕೆ ಅಪ್ಪು ಅವರೊಡನೆ ರಾಮ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು ಪ್ರಿಯಾಮಣಿ, ಕನ್ನಡದಲ್ಲಿ ರಾಮ್, ಅಣ್ಣಾ ಬಾಂಡ್, ದನ ಕಾಯೋನು, ಅಂಬರೀಶ, ವಿಷ್ಣುವರ್ಧನ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶಾರುಖ್ ಖಾನ್ ಅವರೊಡನೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ ಪ್ರಿಯಾಮಣಿ. ಜೊತೆಗೆ ಪ್ರಿಯಾಮಣಿ ಅವರು ತಮ್ಮ ಸೌಂದರ್ಯದಿಂದಲೇ ಎಲ್ಲರ ಹೃದಯ ಕದ್ದವರು, ಈಗಲೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ ಜೊತೆಗೆ ರಿಯಾಲಿಟಿ ಶೋಗಳ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದಾರೆ ಪ್ರಿಯಾಮಣಿ. ಇವರು ಅದ್ಭುತವಾದ ನಟಿ ಸಹ ಹೌದು. ಪ್ರಿಯಾಮಣಿ ಅವರು ತಮ್ಮ ಅತ್ಯುತ್ತಮ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ, ಸೈಮಾ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಖ್ಯಾತ ಉದ್ಯಮಿ ಮುಸ್ತಫಾ ಅವರೊಡನೆ ಮದುವೆಯಾಗಿದ್ದಾರೆ ನಟಿ ಪ್ರಿಯಾಮಣಿ. ಈಗಲೂ ಪ್ರಿಯಾಮಣಿ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದ್ದು, ಇವರಿಗೆ 38 ವರ್ಷ ವಯಸ್ಸು ಎಂದರೆ ನಂಬಲು ಸಾಧ್ಯವಿಲ್ಲ.
Comments are closed.